ETV Bharat / business

ಮುಂಗಾರು ಅಧಿವೇಶನ: ಸಹಕಾರಿ ಬ್ಯಾಂಕ್​ಗಳಿಗೆ ಮೂಗುದಾರ ಹಾಕಲು ಬ್ಯಾಂಕಿಂಗ್ ನಿಯಂತ್ರಣ ಸೇರಿ 3 ವಿಧೇಯಕ ಮಂಡನೆ! - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಲೋಕಸಭೆಯಲ್ಲಿ ಇಂದು ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ- 2020, ಕೃಷಿಕರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಅಭಯ ಮತ್ತು ಕೃಷಿ ಸೇವೆಗಳ ಕೃಷಿಕರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮಸೂದೆ- 2020 ಮಂಡನೆ ಆಗಲಿವೆ.

Parliament Monsoon Session
ಮುಂಗಾರು ಅಧಿವೇಶನ
author img

By

Published : Sep 16, 2020, 4:32 PM IST

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲು 2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮತ್ತು ಇತರ ಎರಡು ಮಸೂದೆಗಳನ್ನು ಮಂಡಿಸಲಿದೆ.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ- 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದಂತಹ ಇತರ ಎರಡು ಮಸೂದೆಗಳಾಗಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ಅನ್ನು ತಿದ್ದುಪಡಿ ಮಾಡಲು 2020ರ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮಂಡಿಸಲಿದ್ದಾರೆ.

ಸಹಕಾರಿ ಬ್ಯಾಂಕ್​ಗಳ ಮೇಲೆ ಕೇಂದ್ರೀಯ ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾದ ನಿಯಂತ್ರಣವನ್ನು ಬಲಪಡಿಸಲು ಈ ವಿಧೇಯಕವನ್ನು ಸೋಮವಾರದಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದಕ್ಕೆ ಪ್ರತಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು.

ಕಳೆದ ವರ್ಷ ಪಂಜಾಬ್- ಮಹಾರಾಷ್ಟ್ರ ಕೋಪರೇಟಿವ್ ಬ್ಯಾಂಕ್​ನಲ್ಲಿ ನಡೆದ 6,500 ಕೋಟಿ ರೂ.ಗಳ ಹಗರಣದ ಪರಿಣಾಮ ಸಹಕಾರಿ ಬ್ಯಾಂಕ್​ಗಳ ನಿಯಂತ್ರಣ ಮುನ್ನೆಲೆಗೆ ಬಂತು.

ಸೀತಾರಾಮನ್ ಹೊಸ ತಿದ್ದುಪಡಿಗಳೊಂದಿಗೆ ಮಸೂದೆ ಮಂಡಿಸಲಿದ್ದಾರೆ. ಅಧಿವೇಶನದ ಮೊದಲ ದಿನ, ಅವರು ಮಸೂದೆಯನ್ನು ಹಿಂತೆಗೆದುಕೊಂಡರು. ಗಂಭೀರ ಅಗತ್ಯವಿರುವ ತೊಂದರೆಗೀಡಾದ ಸಹಕಾರಿ ಬ್ಯಾಂಕ್​ಗಳನ್ನು ಪುನರ್ರಚಿಸಲು ಭಾರತೀಯ ರಿಸರ್ವ್ ಬ್ಯಾಂಕ್​ಗೆ ಅವಕಾಶ ನೀಡುವ ಕೆಲವು ಹೊಸ ಸಂಗತಿ ಸೇರಿಸಲು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಈ ವರ್ಷದ ಮಾರ್ಚ್ 3ರಂದು ಬಜೆಟ್ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಲಾಯಿತು.

ಈ ಮಸೂದೆ ಪರಿಣಾಮ ಹಲವು ರಾಜ್ಯಗಳಲ್ಲಿನ ಸಹಕಾರ ಬ್ಯಾಂಕ್‌ಗಳು ಬಿಕ್ಕಟ್ಟಿಗೆ ಸಿಲುಕಿದ ವೇಳೆ ಠೇವಣಿದಾರರ ಹಿತಾಸಕ್ತಿ ದೃಷ್ಟಿಯಿಂದ ನಿರ್ದೇಶಕರ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡುವ ಅಧಿಕಾರು ಆರ್‌ಬಿಐಗೆ ಸಿಗಲಿದೆ. ಇದೇ ವೇಳೆ ಸಹಕಾರ ಬ್ಯಾಂಕ್​​ಗಳು ಆರ್‌ಬಿಐ ಅನುಮತಿ ಪಡೆದು ಈಕ್ವಿಟಿ ಷೇರು ಬಿಡುಗಡೆ ಮಾಡುವ ಹಾದಿ ಸುಗಮವಾಗಲಿದೆ.

ಲೋಕಸಭೆಯಲ್ಲಿ ಇಂದು ಮಂಡನೆ ಆಗಲಿರುವ ವಿಧೇಯಕಗಳು

ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ- 2020

ಕೃಷಿಕರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020

ಬೆಲೆ ಅಭಯ ಮತ್ತು ಕೃಷಿ ಸೇವೆಗಳ ಕೃಷಿಕರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮಸೂದೆ- 2020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.