ETV Bharat / business

ಅಂಬಾನಿ ನಂ.1 ಶ್ರೀಮಂತ: ಭಾರತದಲ್ಲಿ 1 ಸಾವಿರ ವ್ಯಕ್ತಿಗಳ ಸಂಪತ್ತು 1 ಸಾವಿರ ಕೋಟಿ ರೂ! - 1007 ವ್ಯಕ್ತಿಗಳ ಸಂಪತ್ತು

ಮಹಾಮಾರಿ ಕೊರೊನಾ ವೈರಸ್ ನಡುವೆಯೂ ಕೂಡ ಭಾರತದ ಕೆಲವು ವ್ಯಕ್ತಿಗಳ ವಾರ್ಷಿಕ ಆದಾಯದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.

Hurun India
Hurun India
author img

By

Published : Sep 30, 2021, 9:06 PM IST

Updated : Oct 1, 2021, 10:09 AM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಅನೇಕ ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು, ಇನ್ನಿಲ್ಲದ ತೊಂದರೆ ಅನುಭವಿಸಿವೆ. ಇದರ ಮಧ್ಯೆ ಹುರೂನ್​ ಇಂಡಿಯಾ ಸಿದ್ಧಪಡಿಸಿರುವ ಪಟ್ಟಿವೊಂದರ ಪ್ರಕಾರ, ಭಾರತದಲ್ಲಿ 1,007 ವ್ಯಕ್ತಿಗಳ ಸಂಪತ್ತು 1 ಸಾವಿರ ಕೋಟಿ ರೂ. ಎಂದು ತಿಳಿದು ಬಂದಿದೆ.

ದೇಶದ 119 ನಗರಗಳ 1007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ತಿಳಿದು ಬಂದಿದೆ.

  • ರಿಲಯನ್ಸ್​ ಇಂಡಸ್ಟ್ರೀಸ್​ನ ಅಧ್ಯಕ್ಷ ಮುಖೇಶ್​ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಕಳೆದ 10 ವರ್ಷಗಳಿಂದಲೂ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಂಬಾನಿ, ಒಟ್ಟು ಸಂಪತ್ತು 7.18 ಲಕ್ಷ ಕೋಟಿ ರೂ. ಆಗಿದೆ.
  • ನಂತರದ ಸ್ಥಾನದಲ್ಲಿ ಅದಾನಿ ಸಮೂಹದ ಗೌತಮ್​​ ಅದಾನಿ ಇದ್ದಾರೆ. ಅದಾನಿ 5.05 ಲಕ್ಷ ಕೋಟಿ ಸಂಪತ್ತು ಹೊಂದಿದ್ದು ಪ್ರತಿ ದಿನ 1.002 ಕೋಟಿ ರೂ. ಹಣ ಗಳಿಕೆ ಮಾಡ್ತಿದ್ದಾರೆಂದು ತಿಳಿದು ಬಂದಿದೆ. ​
  • ಪಟ್ಟಿಯಲ್ಲಿನ 894 ವ್ಯಕ್ತಿಗಳ ಸಂಪತ್ತಿನಲ್ಲಿ ಹೆಚ್ಚಳವಾಗಿದ್ದು, ಉಳಿದಂತೆ ಪಟ್ಟಿಯಲ್ಲಿ 229 ಹೊಸ ಮುಖಗಳು ಸೇರ್ಪಡೆಯಾಗಿವೆ.
    Over 1K Indians with Rs 1K cr net worth
    ಭಾರತದ ಶ್ರೀಮಂತ ವ್ಯಕ್ತಿಗಳ ಟಾಪ್ ಲಿಸ್ಟ್​​​

ಇದನ್ನೂ ಓದಿ: Live video: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ 7 ಅಂತಸ್ತಿನ ಕಟ್ಟಡ

ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ, ಜಾಗತಿಕ ನಗದು ಪರಿಸ್ಥಿತಿ ಉತ್ತಮವಾಗಿರುವ ಕಾರಣ 58 ಹೊಸ ಬಿಲಿಯನೇರ್​ಗಳು ಹುಟ್ಟಿಕೊಂಡಿದ್ದು, ಹೀಗಾಗಿ 2020-21ರಲ್ಲಿ ಬಿಲಿಯನೇರ್​ಗಳ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕೇವಲ 23 ವರ್ಷದ ಭಾರತ್ ಪೇ ಸಂಸ್ಥಾಪಕ ಶಾಶ್ವಂತ್​ ನಕರಾನಿ ಸೇರಿಕೊಂಡಿದ್ದಾರೆ.

ಟಾಪ್​ ಲಿಸ್ಟ್​ನಲ್ಲಿ ಯಾರೆಲ್ಲ ಇದ್ದಾರೆ ನೋಡಿ:

  • ಮುಖೇಶ್ ಅಂಬಾನಿ (ರಿಲಯನ್ಸ್​)
  • ಗೌತಮ್​ ಅದಾನಿ (ಅದಾನಿ ಗ್ರೂಪ್​)
  • ಶಿವ ನಾಡರ್​ (ಹೆಚ್​​ಸಿಎಲ್​)
  • ಎಸ್​​.ಪಿ.ಹಿಂದುಜಾ (ಹಿಂದುಜಾ)
  • ಅಜೀಂ ಪ್ರೇಮಜಿ (ವಿಪ್ರೋ)
  • ಎಲ್​.ಎನ್​.ಮಿತ್ತಲ್ ​​​(ಮಿತ್ತಲ್​ ಕಂಪನಿ)
  • ಪೂನಾವಾಲಾ (ಸೀರಂ ಇನ್ಸ್​​ಟಿಟ್ಯೂಟ್​ ಆಫ್ ಇಂಡಿಯಾ)
  • ಕುಮಾರ​ ಮಂಗಳಂ ಬಿರ್ಲಾ (ಆದಿತ್ಯ ಬಿರ್ಲಾ)

Last Updated : Oct 1, 2021, 10:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.