ನವದೆಹಲಿ: ರೈತರ ಆಂದೋಲನದ ಕುರಿತು ಚರ್ಚೆ ನಡೆಸುವ ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿದ ನಂತರ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳು ಮಂಗಳವಾರ ರಾಜ್ಯಸಭೆಯಿಂದ ಹೊರನಡೆದವು.
ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನದ ಬಗ್ಗೆ ಚರ್ಚೆಯನ್ನು ಕೈಗೊಳ್ಳಲು ದಿನದ ಚರ್ಚೆ ಸ್ಥಗಿತಗೊಳಿಸುವಂತೆ ಪ್ರತಿಪಕ್ಷಗಳು ನಿಯಮ 267ರ ಅಡಿ ನೋಟಿಸ್ ನೀಡಿವೆ.
ಸದನದ ಸಭೆ ಸೇರಿದಾಗ, ಸ್ಪೀಕರ್ ಎಂ.ವೆಂಕಯ್ಯ ನಾಯ್ಡು ಅವರು ವಿವಿಧ ಸದಸ್ಯರಿಂದ ನಿಯಮ 267ರ ಅಡಿ ನೋಟಿಸ್ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಆದರೆ, ಸಂಸತ್ತಿನ ಉಭಯ ಸದನಗಳ ಜಂಟಿ ಸಭೆಗೆ ರಾಷ್ಟ್ರಪತಿಗಳು ವಂದನಾರ್ಪಣೆ ಭಾಷಣದ ಸಂದರ್ಭದಲ್ಲಿ ಈ ವಿಷಯ ಎತ್ತಬಹುದು.
ಇದನ್ನೂ ಓದಿ: ರಾಮನ ಭಾರತದಲ್ಲಿ ಪೆಟ್ರೋಲ್‌ಗೆ 93, ರಾವಣನ ಲಂಕೆಯಲ್ಲಿ 51: ಕೇಂದ್ರದ ವಿರುದ್ಧ ಸ್ವಾಮಿ ಬಾಣ
ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ರೈತರ ಆಂದೋಲನ ಉಲ್ಲೇಖಿಸಿದ್ದರು. 'ನಾಳೆ ರಾಷ್ಟ್ರಪತಿಗಳ ವಂದನಾರ್ಪಣೆ ಭಾಷಣೆ ನಡೆಯಲಿದ್ದು, ಅಂದು ನಾವು ಚರ್ಚೆಯನ್ನು ಪ್ರಾರಂಭಿಸಲಿದ್ದೇವೆ. ಸದಸ್ಯರು ಭಾಗವಹಿಸಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಬಹುದು ಎಂದು ನೋಟಿಸ್ ತಿರಸ್ಕರಿಸಲಾಗಿದೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020ರ ಒಪ್ಪಂದ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ರದ್ದತಿಗೆ ಒತ್ತಾಯಿಸಿ ಸಾವಿರಾರು ರೈತರು ಹರಿಯಾಣ ಮತ್ತು ಉತ್ತರ ಪ್ರದೇಶದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.