ವಾಷಿಂಗ್ಟನ್: ಆರ್ಥಿಕತೆ ತುಂಬೆಲ್ಲ ಉದ್ಯೋಗ ಕಡಿತವು ಉಲ್ಬಣಗೊಂಡಿದ್ದರಿಂದ ಕಳೆದ ವಾರ ಅಮೆರಿಕದಲ್ಲಿ ನಿರುದ್ಯೋಗ ಸವಲತ್ತುಗಳಿಗೆ ಕೆಲಸದಿಂದ ವಜಾಗೊಂಡ 4.4 ದಶಲಕ್ಷಕ್ಕೂ ಅಧಿಕ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ.
ಕೋವಿಡ್ 19 ಆರಂಭವಾದ ಐದು ವಾರಗಳಲ್ಲಿ ಸರಿಸುಮಾರು 26 ದಶಲಕ್ಷ ಜನರು ನಿರುದ್ಯೋಗ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ ಮಧ್ಯಂತರ ಬಳಿಕ ಅಮೆರಿಕದ ಆರು ಕಾರ್ಮಿಕರಲ್ಲಿ ಒಬ್ಬರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇದು ದಾಖಲೆಯ ಉದ್ಯೋಗ ಕಡಿತವಾಗಿದೆ. ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ಶೇ 20ರಷ್ಟು ಹೆಚ್ಚಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ.
ಉದ್ಯೋಗ ಕಡಿತದ ಅಗಾಧ ಪ್ರಮಾಣವು 1930ರ ಮಹಾ ಆರ್ಥಿಕ ಕುಸಿತದ ನಂತರ ಅಮೆರಿಕದ ಆರ್ಥಿಕತೆಯನ್ನು ಅತ್ಯಂತ ಕೆಟ್ಟ ಬಿಕ್ಕಟ್ಟಿಗೆ ನೂಕಿದೆ. 2009ರಲ್ಲಿ ಕೊನೆಗೊಂಡ ಮಹಾ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ರಾಷ್ಟ್ರದ ಉತ್ಪಾದನೆಯು ಎರಡು ಪಟ್ಟು ಕಡಿಮೆ ಆಗಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.
ವೈರಸ್ ಸಂಬಂಧಿತ ಲಾಕ್ಡೌನ್ ತೆರವುಗೊಳಿಸಿ ವಹಿವಾಟು ಪುನಃ ತೆರೆಯಬೇಕೆಂದು ಒತ್ತಾಯಿಸಿ ಹಲವು ರಾಜ್ಯಗಳ ಜನರು ಕೋಪಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲವು ಗವರ್ನರ್‌ಗಳು ಹೊಸ ಸೋಂಕು ಹರಬಹುದು ಎಂಬ ಆರೋಗ್ಯ ಅಧಿಕಾರಿಗಳ ಎಚ್ಚರಿಕೆ ಕಡೆಗಣಿಸಿ ನಿರ್ಬಂಧಗಳನ್ನು ಸಡಿಲಿಸಲು ಆರಂಭಿಸಿದ್ದಾರೆ. ಜಾರ್ಜಿಯಾದಲ್ಲಿ ಜಿಮ್, ಹೇರ್ ಸಲೊನ್ಸ್ ತೆರದಿದ್ದರೇ ಟೆಕ್ಸಾಸ್ ರಾಜ್ಯ ಉದ್ಯಾನಗಳಲ್ಲಿ ಜನ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
2008-2009ರ ಆರ್ಥಿಕ ಹಿಂಜರಿತ ಕೊನೆಗೊಂಡ ನಂತರ ನಿರುದ್ಯೋಗ ಪ್ರಯೋಜನ ಪಡೆಯುತ್ತಿರುವ ಒಟ್ಟು ಜನರ ಸಂಖ್ಯೆ ದಾಖಲೆಯ 16 ಮಿಲಿಯನ್ ತಲುಪಿದೆ. ಇದು 2010ರಲ್ಲಿ ಹಿಂದಿನ 12 ಮಿಲಿಯನ್ ಸಂಖ್ಯೆಯನ್ನು ಮೀರಿದೆ.