ನವದೆಹಲಿ: ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೇಂದ್ರ ಬ್ಯಾಂಕ್‌ಗೆ ಆದರ್ಶಪ್ರಾಯರಾಗಿರಬೇಕು ಎಂದು ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ವೈರಲ್ ವಿ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದರು. ಸ್ಥಿರ, ಮಧ್ಯಮ ಕ್ರಮಾಂಕದಲ್ಲಿ ಇಡೀ ಇನ್ನಿಂಗ್ಸ್ ಅನ್ನು ತಳಮಟ್ಟದಿಂದ ಗಟ್ಟಿಗೊಳಿಸಬೇಕಾಗಿತ್ತು. ಅಂತಹ ಸ್ಥಾನವನ್ನು ದ್ರಾವಿಡ್ ತುಂಬಿದ್ದರು. ಆರ್ಥಿಕತೆಯಲ್ಲಿ ಕೇಂದ್ರೀಯ ಬ್ಯಾಂಕ್ ಆ ಕ್ರಿಯಾತ್ಮಕ ಪಾತ್ರ ನಿರ್ವಹಿಸಬೇಕು ಎಂದು ನಾನು ಯಾವಾಗಲೂ ನಂಬುತ್ತೇನೆ ಎಂದು ಇತ್ತೀಚೆಗೆ ಹೇಳಿದ್ದರು.
ವೈರಲ್ ಆಚಾರ್ಯ 2017ರ ಜನವರಿಯಿಂದ 2019ರ ಜುಲೈರವರೆಗೆ ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದರು. ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಸ್ಥಿರ, ಮಧ್ಯಮ ಕ್ರಮಾಂಕದವರಾಗಿ, ಆಗಾಗ ಇಡೀ ಇನ್ನಿಂಗ್ ಅನ್ನು ಗಟ್ಟಿಗೊಳಿಸುತ್ತಾರೆ. ಭಾರತೀಯ ಆರ್ಥಿಕತೆಯಲ್ಲಿ ಆರ್‌ಬಿಐ ಆ ಕ್ರಿಯಾತ್ಮಕ ಪಾತ್ರವನ್ನು ನಿರ್ವಹಿಸಬೇಕು ಎಂದು ವ್ಯಾಖ್ಯಾನಿಸಿದ್ದರು.
ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲ (ಅನುತ್ಪಾದಕ ಆಸ್ತಿ-ಎನ್‌ಪಿಎ) ಕ್ಷೀಣಿಸಿದೆ ಬ್ಯಾಂಕ್ಗಳ ಆರೋಗ್ಯ ವೃದ್ಧಿಸುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ಆತಂಕಕಾರಿಯಾದಾಗ, ಆರ್‌ಬಿಐನ ನಿಯಂತ್ರಣ ಮೇಲ್ವಿಚಾರಣೆಯು ಅವುಗಳ ಮೇಲೆ ಬಿಗಿಗೊಳಿಸುವ ಅಗತ್ಯವು ಈ ಹಿಂದಿನದಕ್ಕಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಎನ್‌ಪಿಎ ಒಂದು ಸಾಲವಾಗಿದ್ದು, ಇದಕ್ಕಾಗಿ ಅಸಲು ಅಥವಾ ಬಡ್ಡಿ ಪಾವತಿಯನ್ನು 90 ದಿನಗಳವರೆಗೆ ಪಾವತಿಸಲಾಗುವುದಿಲ್ಲ.
ಎನ್‌ಪಿಎ ಪ್ರಮಾಣ ಕಡಿತಗೊಳಿಸುವ ಪರಿಹಾರವಾಗಿ 2020ರ ಜುಲೈನಲ್ಲಿ ನೀತಿ ಆಯೋಗ 3 ಪಿಎಸ್‌ಬಿಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಿಸಿತು. ಅವುಗಳಲ್ಲಿ ಯುಕೋ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ನ್ಯಾಷನಲ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇರಿವೆ.
ಪ್ರಸ್ತುತ ಆರ್‌ಬಿಐನ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಚೌಕಟ್ಟಿನಡಿಯಲ್ಲಿ ಅವುಗಳನ್ನು ಮತ್ತಷ್ಟು ಸಾಲ ನೀಡುವುದನ್ನು ತಡೆಯುತ್ತದೆ. ಪಿಸಿಎ ಚೌಕಟ್ಟಿನಡಿಯಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಇತರ 3 ಪಿಎಸ್‌ಬಿಗಳಾಗಿವೆ.
ಕಳೆದ ದಶಕದಲ್ಲಿ ಒಟ್ಟಾರೆ ಸಾಲದಲ್ಲಿ ಪಿಎಸ್‌ಬಿಗಳ ಪಾಲು 2010ರಲ್ಲಿ ಶೇ 75.1ರಷ್ಟರಿಂದ 2020ರಲ್ಲಿ ಶೇ 57.5ಕ್ಕೆ ಇಳಿದಿದೆ. ಕೆಲವು ಪಿಎಸ್‌ಬಿಗಳನ್ನು ಖಾಸಗೀಕರಣಗೊಳಿಸಿದಾಗ, ಪಿಎಸ್‌ಬಿಗಳು ಒಟ್ಟಾರೆ ಸಾಲ ನೀಡುವ ಪಾಲು ಮತ್ತಷ್ಟು ಕುಸಿಯುತ್ತದೆ. ಇದರ ಪರಿಣಾಮವಾಗಿ ಎನ್‌ಪಿಎ ಕುಗ್ಗುತ್ತವೆ. ಮುಂಬರುವ ಸಮಯದಲ್ಲಿ ಸರ್ಕಾರ ಮತ್ತು ಆರ್‌ಬಿಐಗೆ ಇದು ಕಡಿಮೆ ತಲೆನೋವು ತರಲಿದೆ ಎಂದು ಸ್ಪಷ್ಟಿಕರಣ ನೀಡಿತು.
ಆದರೆ ಆರ್‌ಬಿಐ ಖಾಸಗೀಕರಣದ ಕಲ್ಪನೆಯನ್ನು ಒಪ್ಪುವುದಿಲ್ಲ. ಬದಲಾಗಿ, ಇದು ಭಾರತದ ಅಭಿವೃದ್ಧಿ ಅಗತ್ಯಗಳಿಗೆ ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಪಿಎಸ್‌ಬಿ ಅಗತ್ಯವೆಂದು ಪರಿಗಣಿಸುತ್ತದೆ.
ಹೆಚ್ಚು ತೊಂದರೆಗೀಡಾದ ಪಿಎಸ್‌ಬಿಗಳನ್ನು ಪಡೆಯಲು ಯಾವುದೇ ಖಾಸಗಿ ಉದ್ಯಮಿಗಳ ಮುಂದೆ ಬರುವುದಿಲ್ಲ ಎಂಬುದು ಆರ್‌ಬಿಐ ನಂಬಿಕೆ. ಬದಲಾಗಿ ಹೆಚ್ಚಿನ ಆಸ್ತಿ ಮತ್ತು ಕನಿಷ್ಠ ಎನ್‌ಪಿಎ ಹೊಂದಿರುವವರಿಗೆ ಮಾತ್ರ ಆಸಕ್ತಿ ತಳಿಯುತ್ತಾರೆ. ಕನಿಷ್ಠ ಎನ್‌ಪಿಎ ಹೊಂದಿರುವ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದರೆ, ಸರ್ಕಾರವು ದೊಡ್ಡ ಎನ್‌ಪಿಎ ಹೊಂದಿರುವ ಬ್ಯಾಂಕ್ಗಳೊಂದಿಗೆ ಮಾತ್ರ ಉಳಿದಿರುತ್ತದೆ. ಇದು ಖಾಸಗೀಕರಣದ ಉದ್ದೇಶವನ್ನು ಸೋಲಿಸುತ್ತದೆ ಎಂಬುದು ಆರ್‌ಬಿಐ ತಂತ್ರ.
ಪಿಎಸ್‌ಬಿ ಖಾಸಗೀಕರಣಗೊಳಿಸುವುದರ ವಿರುದ್ಧ ವಾದಿಸಿದ ಆರ್‌ಬಿಐ ಮಂಡಳಿ ಸದಸ್ಯ ಸತೀಶ್ ಮರಾಠೆ, ಇದರ ಬದಲಾಗಿ ಸರ್ಕಾರವು ತನ್ನ ಪಾಲಿನ ಹೆಚ್ಚಿನ ಭಾಗವನ್ನು ಭಾರತೀಯರಿಗೆ ಮಾರಾಟ ಮಾಡುವ ಮೂಲಕ ಅವರಲ್ಲಿ ತನ್ನ ಷೇರುಗಳನ್ನು ಶೇ 26ರಷ್ಟಕ್ಕೆ ಇಳಿಸಬೇಕು. ಇದರ ಜೊತೆಗೆ ಕಾರ್ಪೊರೇಟ್, ಬ್ಯಾಂಕಿನ ಉನ್ನತ ನಿರ್ವಹಣೆ, ನೌಕರರು ಬ್ಯಾಂಕ್ ಮತ್ತು ಸಾಮಾನ್ಯ ಭಾರತೀಯರಲ್ಲಿನ ಪಾಲು ಸಹ ಕಡಿಮೆ ಆಗಬೇಕು ಎಂಬುದು ಅವರ ನಿಲುವು.
ಯಾವುದೇ ಪಿಎಸ್‌ಬಿ ಉದ್ಯೋಗಿ ಪ್ರಸ್ತುತ ಬ್ಯಾಂಕ್ ಅನ್ನು ತನ್ನದೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಅವರು ಕೆಲಸ ಮಾಡುವ ಬ್ಯಾಂಕಿನಲ್ಲಿ ಅವರಿಗೆ (ಉನ್ನತ ನಿರ್ವಹಣಾ ಮಟ್ಟದಿಂದ ಕೆಳಮಟ್ಟದ ಉದ್ಯೋಗಿಗಳಿಗೆ) ಷೇರು ನೀಡುವ ಅವಶ್ಯಕತೆಯಿದೆ. ಅದೇ ರೀತಿ, ಬ್ಯಾಂಕ್ ಗ್ರಾಹಕರು ಪಿಎಸ್‌ಬಿಗಳಲ್ಲಿ ಪಾಲು ಹೊಂದಲು ಸಾಕಷ್ಟು ಅವಕಾಶಗಳನ್ನು ಹೊಂದಿರಬೇಕು. ಇದು ಅವರು ಬ್ಯಾಂಕಿನಲ್ಲಿ ಪಾಲನ್ನು ಹೊಂದುವ ಸ್ವಾಭಾವಿಕ ಭಾವನೆಯನ್ನು ಬೆಳೆಸಿಕೊಳ್ಳುವುದನ್ನು ಖಚಿತಪಡಿಸುತ್ತದೆ ಎನ್ನುತ್ತಾರೆ ಮರಾಠೆ.
ಅದೇ ಸಮಯದಲ್ಲಿ ಪಿಎಸ್‌ಬಿಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಅಸ್ತಿತ್ವ ಅಥವಾ ಗುಂಪು ಅತಿಯಾದ ನಿಯಂತ್ರಣ ಹೊಂದಲು ಸಾಧ್ಯವಾಗದಂತೆ ನಿಯಂತ್ರಣ ಇರಬೇಕು ಎಂಬುದು ಅವರ ಮತ್ತೊಂದು ಎಚ್ಚರಿಕೆ.
ಈ ಮನೋಭಾವಕ್ಕೆ ಅನುಗುಣವಾಗಿ ಆರ್‌ಬಿಐ ಆ ದಿಕ್ಕಿನ ಮೊದಲ ಹೆಜ್ಜೆಯಾಗಿ 6 ಪ್ರಮುಖ ಪಿಎಸ್‌ಬಿಗಳಲ್ಲಿ (ಎಸ್‌ಬಿಐ, ಪಿಎನ್‌ಬಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಿಒಬಿ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ) ಸರ್ಕಾರದ ಪಾಲನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಔಪಚಾರಿಕ ಸಲಹೆ ನೀಡಿದೆ. ಮುಂಬರುವ 12-18 ತಿಂಗಳಲ್ಲಿ ಪ್ರಸ್ತುತ ಪಾಲಿನಿಂದ ಸ್ಥೂಲ ಲೆಕ್ಕಾಚಾರದ ಪ್ರಕಾರ, ಸರ್ಕಾರದ ಪಾಲನ್ನು ಶೇ 51ಕ್ಕೆ ಇಳಿಸುವುದರಿಂದ 43,000 ಕೋಟಿ ರೂ. ತಲುಪಲಿವೆ.
ಆರ್‌ಬಿಐ ಸಲಹೆಯಲ್ಲಿ ಸರ್ಕಾರವು ಸಾಕಷ್ಟು ಅರ್ಹತೆಗಳನ್ನು ಎದುರು ನೋಡುತ್ತದೆ ಎಂದು ಒಳಗಿನವರು ಹೇಳಿದ್ದಾರೆ. ಆ ದಿಕ್ಕಿನಲ್ಲಿ ಕೆಲಸವನ್ನು ಪ್ರಾರಂಭಿಸಿದೆ. ಶಾರ್ಟ್‌ಲಿಸ್ಟ್ ಮಾಡಿದ 6 ಪಿಎಸ್‌ಬಿಗಳ ಆಸ್ತಿ-ಗುಣಮಟ್ಟವನ್ನು ಸುಧಾರಿಸುವುದು ತಕ್ಷಣದ ಗುರಿಯಾಗಿದೆ. ಮುಂದಿನ ಹಂತವಾಗಿ ಈ 6 ಪಿಎಸ್‌ಬಿಗಳು ದೊಡ್ಡ ಸಾಲ ನೀಡದಂತೆ ನೋಡಿಕೊಳ್ಳಲು ಸರ್ಕಾರ ಯೋಜಿಸಿದೆ. 2021ರ ಮಾರ್ಚ್ ವೇಳೆಗೆ ಎನ್‌ಪಿಎ ಕನಿಷ್ಠ ಮೂರನೇ ಒಂದು ಭಾಗದಷ್ಟು ಕಡಿತಗೊಳಿಸುವುದರತ್ತ ಅದರ ಗಮನವಿದೆ.
6 ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ (ಪಿಎಸ್‌ಬಿ) ಕೇಂದ್ರದ ಪಾಲು
ಪಿಎಸ್‌ಬಿ | ಕೇಂದ್ರದ ಪಾಲು ಶೇ. (2020 ಜುಲೈ) | ನಿವ್ವಳ ಎನ್‌ಪಿಎ (2019 ಡಿ.) ಕೋಟಿ ₹ |
ಎಸ್‌ಬಿಐ | 57.6% | 1,84,682 |
ಪಿಎನ್‌ಬಿ | 85.6% | 76,809 |
ಬ್ಯಾಂಕ್ ಆಫ್ ಬರೋಡಾ | 71.6% | 73,140 |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 89.1% | 49,924 |
ಕೆನರಾ ಬ್ಯಾಂಕ್ | 78.6% | 36,645 |
ಬ್ಯಾಂಕ್ ಆಫ್ ಇಂಡಿಯಾ | 89.1 % | 33,259 |
ಖಾಸಗೀಕರಣಕ್ಕೆ ನೀತಿ ಆಯೋಗ ಸೂಚಿಸಿದ ಪಿಎಸ್‌ಬಿಗಳು
ಪಿಎಸ್‌ಬಿ | ಕೇಂದ್ರದ ಪಾಲು ಶೇ. | ನಿವ್ವಳ ಎನ್‌ಪಿಎ ಕೋಟಿ ₹ |
ಯುಕೋ ಬ್ಯಾಂಕ್ | 92.52 % | 22,140 |
ಬ್ಯಾಂಕ್ ಆಫ್ ಮಹಾರಾಷ್ಟ್ರ | 87.74 % | 15,746 |
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ | 80.28 % | 8,924 |
ಇತರೆ ಪಿಎಸ್‌ಬಿ
ಪಿಎಸ್‌ಬಿ | ಕೇಂದ್ರದ ಪಾಲು ಶೇ. | ನಿವ್ವಳ ಎನ್‌ಪಿಎ ಕೋಟಿ ₹ |
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | 95.84 % | 23,734 |
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 92.39 % | 33,259 |
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ | 89.07 % | 11,457 |