ಮುಂಬೈ: ಅಧಿಕೃತ ಡಿಜಿಟಲ್ ಕರೆನ್ಸಿ ಪರಿಚಯಿಸಲು ಸರ್ಕಾರ ಯೋಜಿಸುತ್ತಿರುವುದರಿಂದ ಸರ್ಕಾರದ ಈ ಕ್ರಮವು ಇತರ ಕ್ರಿಪ್ಟೋ ಸ್ವತ್ತುಗಳ ಮೇಲೆ ನಿಷೇಧಕ್ಕೆ ಕಾರಣವಾಗಬೇಕಿಲ್ಲ ಎಂದು ಇಂಟರನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಎಂಎಐ) ಒಕ್ಕೂಟ ಹೇಳಿದೆ.
ಫಿಯೆಟ್ ಡಿಜಿಟಲ್ ಕರೆನ್ಸಿ ಭಾರತದ ಇತರ ಕ್ರಿಪ್ಟೋ ಕರೆನ್ಸಿಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಉದ್ದೇಶ ಹೊಂದಿದೆ. ಇವೆರಡೂ ಒಟ್ಟಾಗಿ ಸಾಗಬಹುದು ಎಂದು ಐಎಎಂಎಐ ಹೇಳಿದೆ.
ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ 2021ರ ನಿಯಂತ್ರಣವನ್ನು ಸಂಸತ್ತಿನ ಬಜೆಟ್ ಅಧಿವೇಶನದ ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ. ಈ ನಂತರ ಕೆಲವು ಭಾಗಗಳಲ್ಲಿ ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಸಾಧ್ಯತೆ ದಟ್ಟವಾಯಿತು.
ಅಧಿಕೃತ ಡಿಜಿಟಲ್ ಕರೆನ್ಸಿ ಪರಿಚಯಿಸುವ ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಐಎಎಂಎಐ ಒಕ್ಕೂಟ ಹೇಳಿದೆ.
ಕ್ರಿಪ್ಟೋ ಸ್ವತ್ತುಗಳ ಅಸ್ತಿತ್ವ ಮತ್ತು ಬಳಕೆಯು ಭಾರತೀಯ ವಾಣಿಜ್ಯೋದ್ಯಮಿಗಳಿಗೆ ಇಂತಹ ಕರೆನ್ಸಿ ನೀಡಲು ವ್ಯಾಪಕವಾದ ಅವಕಾಶಗಳ ಬಾಗಿಲು ತೆರೆಯುತ್ತದೆ. ಜಾಗತಿಕ ಖರೀದಿದಾರರಲ್ಲಿ ಶೇ 15ರಷ್ಟಿರುವ ಭಾರತೀಯರು ಸ್ಥಳೀಯ ಕ್ರಿಪ್ಟೋ ಆಸ್ತಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಅರ್ಬನ್ ಸಹಕಾರಿ ಬ್ಯಾಂಕ್ಗಳ ನಿಯಂತ್ರಣಕ್ಕೆ ಆರ್ಬಿಐನಿಂದ ತಜ್ಞರ ಸಮಿತಿ
ಡಿಜಿಟಲ್ ಕರೆನ್ಸಿ ಎಂಬುದು ಭೌತಿಕ ಸ್ಪರ್ಶವಿಲ್ಲದ ಕರೆನ್ಸಿಯಾಗಿದ್ದು, ಇದನ್ನು ಸ್ಮಾರ್ಟ್‌ಫೋನ್, ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳ ಮೂಲಕ ಚಲಾವಣೆ ಮಾಡಬಹುದು.