ETV Bharat / business

ಬ್ಯಾಂಕ್​ಗಳಿಗೆ ಮಗ್ಗುಲ ಮುಳ್ಳಾದ ಎನ್​ಪಿಎ ಪ್ರಮಾಣ ಈ ವರ್ಷ ಏರಿಕೆ: ವಿವಿಧ ವಲಯದ ಪಾಲೆಷ್ಟು?

ಸಾರ್ವಜನಿಕ ವಲಯದ ಜೊತೆಗೆ, ಖಾಸಗಿ ಮತ್ತು ವಿದೇಶಿ ಬ್ಯಾಂಕ್​ಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಸ್ತಿ ಗಾತ್ರದ ದೃಷ್ಟಿಯಿಂದ, ಈ ಬ್ಯಾಂಕ್​ಗಳು ಒಟ್ಟು ಉದ್ಯಮದ ಶೇ 59ರಷ್ಟನ್ನು ಹೊಂದಿವೆ. 2020ರ ದ್ವಿತೀಯಾರ್ಧದಲ್ಲಿ ಎನ್‌ಪಿಎಗಳು ಕುಸಿಯುತ್ತವೆ ಎಂದು ಅರ್ಧದಷ್ಟು ಬ್ಯಾಂಕ್​ಗಳು ತಿಳಿಸಿವೆ.

author img

By

Published : Mar 18, 2021, 4:03 PM IST

npa
npa

ಮುಂಬೈ: ಬ್ಯಾಂಕ್​ಗಳ ಆಸ್ತಿಯ ಗುಣಮಟ್ಟ ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಸುಧಾರಿಸಿದೆ. ಆದರೆ ಈ ವರ್ಷದ ಮೊದಲಾರ್ಧದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ಫಿಕ್ಕಿ-ಐಬಿಎ ಸಮೀಕ್ಷೆಯೊಂದು ತಿಳಿಸಿದೆ.

ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) 2021ರ ಮೊದಲ ಆರು ತಿಂಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ. 2020ರ ಜುಲೈ ಮತ್ತು ಡಿಸೆಂಬರ್ ನಡುವೆ 20 ಬ್ಯಾಂಕ್​ಗಳ ಜಂಟಿ ಸಮೀಕ್ಷೆಯನ್ನು ಫಿಕ್ಕಿ-ಐಬಿಎ ನಡೆಸಿತು.

ಸಾರ್ವಜನಿಕ ವಲಯದ ಜೊತೆಗೆ, ಖಾಸಗಿ ಮತ್ತು ವಿದೇಶಿ ಬ್ಯಾಂಕ್​ಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಸ್ತಿ ಗಾತ್ರದ ದೃಷ್ಟಿಯಿಂದ, ಈ ಬ್ಯಾಂಕ್​ಗಳು ಒಟ್ಟು ಉದ್ಯಮದ ಶೇ 59ರಷ್ಟನ್ನು ಹೊಂದಿವೆ. 2020ರ ದ್ವಿತೀಯಾರ್ಧದಲ್ಲಿ ಎನ್‌ಪಿಎಗಳು ಕುಸಿಯುತ್ತವೆ ಎಂದು ಅರ್ಧದಷ್ಟು ಬ್ಯಾಂಕ್​​ಗಳು ತಿಳಿಸಿವೆ. ಶೇ 78ರಷ್ಟು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಇದೇ ರೀತಿಯ ಮಾಹಿತಿ ನೀಡಿವೆ.

* ಶೇ 68ರಷ್ಟು ಬ್ಯಾಂಕರ್‌ಗಳು 2021ರ ಮೊದಲ 6 ತಿಂಗಳಲ್ಲಿ ಎನ್‌ಪಿಎ ಶೇ 10ಕ್ಕಿಂತ ಹೆಚ್ಚು ನೋಂದಾಯಿಸಿಕೊಳ್ಳಬಹುದು. ಶೇ 37ರಷ್ಟು ಬ್ಯಾಂಕರ್‌ಗಳು ಎನ್‌ಪಿಎಗಳು ಶೇ 12ರಷ್ಟು ತಲುಪುವುದಿಲ್ಲ ಎಂದಿವೆ.

* ಪ್ರವಾಸೋದ್ಯಮ, ಆತಿಥ್ಯ, ಎಂಎಸ್‌ಎಂಇ, ವಾಯುಯಾನ ಮತ್ತು ರೆಸ್ಟೋರೆಂಟ್‌ಗಳು ಎನ್‌ಪಿಎ ಹೆಚ್ಚಿರುವ ಪ್ರದೇಶಗಳಾಗಿವೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿನ ಎನ್‌ಪಿಎಗಳು ಹೆಚ್ಚು ಬೆಳೆಯುತ್ತವೆ ಎಂದು ಶೇ 55ರಷ್ಟು ಬ್ಯಾಂಕರ್‌ಗಳು ಊಹಿಸಿದರೆ, 45 ಪ್ರತಿಶತದಷ್ಟು ಜನರು ಮಧ್ಯಮವಾಗಿ ಬೆಳೆಯುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಜಾಗತಿಕ ಗೃಹ ಬೆಲೆ ಸೂಚ್ಯಂಕ: 13 ಸ್ಥಾನ ಕಳೆದುಕೊಂಡ ಭಾರತ

* ಎಂಎಸ್‌ಎಂಇ ಕ್ಷೇತ್ರದಲ್ಲಿ ಎನ್‌ಪಿಎ ಹೆಚ್ಚಾಗುತ್ತದೆ ಎಂದು ಶೇ 84ರಷ್ಟು ಬ್ಯಾಂಕರ್‌ಗಳು ಬಹಿರಂಗಪಡಿಸಿದ್ದಾರೆ.

* ತೊಂಬತ್ತೆಂಟು ಪ್ರತಿಶತದಷ್ಟು ಜನರು ಎನ್‌ಪಿಎ ರೆಸ್ಟೋರೆಂಟ್ ವಲಯದಲ್ಲಿ ಬೆಳೆಯುತ್ತವೆ ಎಂದಿದ್ದು, ಈ ವಲಯದಲ್ಲಿ ಎನ್‌ಪಿಎಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ ಎಂದು ಶೇ 26ರಷ್ಟು ಸಂವಾದಿಗಳು ವಿವರಿಸಿದರು.

* ಮೂಲಸೌಕರ್ಯ, ಫಾರ್ಮಾ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಸಾಲದ ಬೇಡಿಕೆ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

* ಶೇ 45ರಷ್ಟು ಬ್ಯಾಂಕರ್‌ಗಳು ದೀರ್ಘಕಾಲೀನ ಸಾಲಗಳಿಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.