ETV Bharat / business

2,000 ನೋಟು ಬ್ಯಾನ್ ವದಂತಿ... ಮಹತ್ವದ ಘೋಷಣೆ ಹೊರಡಿಸಿದ ವಿತ್ತ ಸಚಿವಾಲಯ

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ ₹ 500 ಮತ್ತು ₹ 200 ನೋಟುಗಳಿಗೆ ಸಂರಚನೆ ಮಾಡುತ್ತಿದ್ದೇವೆ ಎಂದರು.

2000 Rupees Note
2000 ನೋಟು
author img

By

Published : Mar 16, 2020, 10:16 PM IST

ನವದೆಹಲಿ: ಕೇಂದ್ರ ಸರ್ಕಾರವು 2,000 ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ ₹ 500 ಮತ್ತು ₹ 200 ನೋಟುಗಳಿಗೆ ಸಂರಚನೆ ಮಾಡುತ್ತಿದ್ದೇವೆ ಎಂದರು.

2019-20ರಲ್ಲಿ ₹ 2,000 ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಯಾವುದೇ ಇಂಡೆಂಟ್ ಅನ್ನು ಮುದ್ರಣಾಲಯದಲ್ಲಿ ಇರಿಸಲಾಗಿಲ್ಲ. ₹ 2,000 ನೋಟುಗಳ ಮುದ್ರಣವನ್ನು ನಿಲ್ಲಿಸುವ ಯಾವುದೇ ನಿರ್ಧಾರವಿಲ್ಲ ಎಂದರು.

ಹೊಸ ₹ 2,000 ಕರೆನ್ಸಿ ನೋಟುಗಳ ಮುದ್ರಣವನ್ನು ಸರ್ಕಾರ ನಿಲ್ಲಿಸಿದೆ ಮತ್ತು ಎಟಿಎಂಗಳ ಮೂಲಕ ₹ 2,000 ನೋಟುಗಳ ಚಲಾವಣೆಯನ್ನು ನಿಲ್ಲಿಸಲು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಯಾವುದೇ ಸುತ್ತೋಲೆ ಹೊರಡಿಸಿವೆಯೇ ಎಂಬ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸುತ್ತಿದ್ದಾರೆ.

₹ 500 ಮತ್ತು ₹ 200 ವರ್ಗದ ಕರೆನ್ಸಿ ನೋಟುಗಳ ಹೆಚ್ಚಿನ ಚಲಾವಣೆ ಮತ್ತು ₹ 2,000 ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಗ್ರಾಹಕರು ಎದುರಿಸುತ್ತಿರುವ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್​ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್​ಗಳಿಗೆ ಈ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ₹ 500 ಮತ್ತು ₹ 200 ಮುಖಬೆಲೆಯ ಕರೆನ್ಸಿ ನೋಟುಗಳಿಗಾಗಿ ಎಟಿಎಂಗಳ ಸಂರಚನೆಯ ಕಾರ್ಯ ನಡೆಯುತ್ತಿದೆ ಎಂದು ಠಾಕೂರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.