ನವದೆಹಲಿ: ಜೂನ್ 5ರಂದು ಮಂಡನೆಯಾಗಲಿರುವ ಎನ್ಡಿಎ - 2 ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ನ ಪೂರ್ವಭಾವಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ವಲಯದ ಪರಿಣಿತರೊಂದಿಗೆ ಸಮಾಲೋಚನೆ ನಡೆಸಿದರು.
ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಆರ್ಬಿಐ ಅಧಿಕಾರಿಗಳ ವರ್ಗ, ಬ್ಯಾಂಕ್ಗಳ ಮುಖಂಡರು, ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಭೆಯಲ್ಲಿ ಭಾಗವಹಿಸಿದ್ದಾರೆ.
ಮುಂಬರುವ ಬಜೆಟ್ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ಉತ್ತೇಜನ, ವಸೂಲಾಗದ ಸಾಲದ (ಎನ್ಪಿಎ) ಸ್ಥಿತಿಗತಿ ಹಾಗೂ ಆದ್ಯತಾ ವಲಯಗಳಾದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಮತ್ತು ಕೃಷಿ ಕ್ಷೇತ್ರಕ್ಕೆ ಗಮನ ನೀಡುವಂತೆ ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
-
Delhi: Finance Minister Nirmala Sitharaman chairs Pre-Budget meeting. Sitharaman will present her first Budget on July 5. MOS Finance Anurag Thakur also present. pic.twitter.com/hJZsS4ftGW
— ANI (@ANI) June 13, 2019 " class="align-text-top noRightClick twitterSection" data="
">Delhi: Finance Minister Nirmala Sitharaman chairs Pre-Budget meeting. Sitharaman will present her first Budget on July 5. MOS Finance Anurag Thakur also present. pic.twitter.com/hJZsS4ftGW
— ANI (@ANI) June 13, 2019Delhi: Finance Minister Nirmala Sitharaman chairs Pre-Budget meeting. Sitharaman will present her first Budget on July 5. MOS Finance Anurag Thakur also present. pic.twitter.com/hJZsS4ftGW
— ANI (@ANI) June 13, 2019
ಸಭೆಯಲ್ಲಿ ವಿಮಾ ವಲಯ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದು, ವಿಮಾ ನಿಯಂತ್ರಣ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ ಡಿಎ) ನಿಧಿ ಸಂಗ್ರಹಣ ಪ್ರಮಾಣ ಅಥವಾ ಅನುಪಾತ (ಫಂಡ್ ಇನ್ಫ್ಯೂಸನ್) 1.5 ಉಳಿಸಿಕೊಳ್ಳಲು ಅನುದಾನ ಒದಗಿಸುವಂತೆ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.