ETV Bharat / business

ಎಚ್​​-1ಬಿ ವೀಸಾ ನಿರ್ಬಂಧ: ಅಮೆರಿಕಕ್ಕೆ ಎದುರಾಗಲಿದೆ ಪ್ರತಿಭಾನ್ವಿತರ ಕೊರತೆ- ನಾಸ್ಕಾಮ್ ಎಚ್ಚರಿಕೆ

author img

By

Published : Oct 7, 2020, 3:53 PM IST

ಅಮೆರಿಕದ ಕಾರ್ಮಿಕರನ್ನು ರಕ್ಷಿಸುವುದು, ಅವರ ಸಮಗ್ರತೆಯನ್ನು ಪುನಃಸ್ಥಾಪಿಸುವುದು ಮತ್ತು ಅರ್ಹ ಫಲಾನುಭವಿಗಳು ಹಾಗೂ ಅರ್ಜಿದಾರರಿಗೆ ಮಾತ್ರ ಎಚ್ -1ಬಿ ಅರ್ಜಿಗಳನ್ನು ಅನುಮೋದಿಸುವ ಉತ್ತಮ ಉದ್ದೇಶವನ್ನ ಹೊಂದಿದೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟನೆ ನೀಡಿತ್ತು. ಅಮೆರಿಕದ ಈ ಕ್ರಮವು ಸಾವಿರಾರು ಭಾರತೀಯ ಐಟಿ ವೃತ್ತಿಪರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

H-1B visa
ಎಚ್​​-1ಬಿ ವೀಸಾ

ನವದೆಹಲಿ: ಹೊಸ ಎಚ್ -1 ಬಿ ವೀಸಾ ಪ್ರೋಗ್ರಾಂ ಸಂಬಂಧಿಸಿದಂತೆ ಘೋಷಿಸಲಾದ ಬದಲಾವಣೆಗಳು ನುರಿತ ಪ್ರತಿಭಾವಂತರ ಪ್ರವೇಶವನ್ನು ನಿರ್ಬಂಧಿಸುವುದರ ಜೊತೆಗೆ ಅಮೆರಿಕದ ಆರ್ಥಿಕತೆ ಮತ್ತು ಉದ್ಯೋಗಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಕೈಗಾರಿಕಾ ಸಂಸ್ಥೆ ನಾಸ್ಕಾಮ್ ಎಚ್ಚರಿಸಿದೆ.

ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಮೆರಿಕ ತನ್ನ ದೇಶೀಯ ಕಾರ್ಮಿಕರನ್ನು ರಕ್ಷಿಸಲು ಟ್ರಂಪ್ ಆಡಳಿತ, ಎಚ್ -1 ಬಿ ವಲಸೆ ರಹಿತ ವೀಸಾ ಪ್ರೋಗ್ರಾಂ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ.

ಅಮೆರಿಕದ ಕಾರ್ಮಿಕರನ್ನು ರಕ್ಷಿಸುವುದು, ಅವರ ಸಮಗ್ರತೆಯನ್ನು ಪುನಃ ಸ್ಥಾಪಿಸುವುದು ಮತ್ತು ಅರ್ಹ ಫಲಾನುಭವಿಗಳು ಹಾಗೂ ಅರ್ಜಿದಾರರಿಗೆ ಮಾತ್ರ ಎಚ್ -1ಬಿ ಅರ್ಜಿಗಳನ್ನು ಅನುಮೋದಿಸುವ ಉತ್ತಮ ಉದ್ದೇಶ ಹೊಂದಿದೆ ಎಂದು ಸ್ಪಷ್ಟನೆ ನೀಡಿತ್ತು. ಅಮೆರಿಕದ ಈ ಕ್ರಮವು ಸಾವಿರಾರು ಭಾರತೀಯ ಐಟಿ ವೃತ್ತಿಪರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಎಚ್ -1 ಬಿ ವೀಸಾ ಪ್ರೋಗ್ರಾಂಗೆ ಘೋಷಿಸಲಾದ ಬದಲಾವಣೆಗಳು ಪ್ರತಿಭಾನ್ವಿತರ ಪ್ರವೇಶಕ್ಕೆ ನಿರ್ಬಂಧಿಸುತ್ತದೆ. ಅಮೆರಿಕದ ಆರ್ಥಿಕತೆಗೆ ಹಾನಿ ಉಂಟುಮಾಡಲಿದೆ. ಅಮೆರಿಕ ಉದ್ಯೋಗಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಯುಎಸ್ ಹಿತಾಸಕ್ತಿಗಳನ್ನು ಅಪಾಯಕ್ಕೆ ದೂಡುತ್ತದೆ. ಕೋವಿಡ್​ ಬಿಕ್ಕಟ್ಟಿನ ಪರಿಹಾರಗಳಾಗಿ ಆರ್& ಡಿ ಅನ್ನು ನಿಧಾನಗೊಳಿಸುತ್ತದೆ ಎಂದು ನಾಸ್ಕಾಮ್ ಅಭಿಪ್ರಾಯಪಟ್ಟಿದೆ.

ಕೋವಿಡ್​ ಚೇತರಿಕೆಯ ಹಂತದಲ್ಲಿ ಅಮೆರಿಕದ ಮಾರುಕಟ್ಟೆಗೆ ತನ್ನ ವ್ಯವಹಾರಗಳನ್ನು ಸುಲಭಗೊಳಿಸಲು ನುರಿತ ಪ್ರತಿಭಾನ್ವಿತರು ಪ್ರವೇಶಿಸುವುದು ಅವಶ್ಯವಾಗಿದೆ ಎಂದು ನಾಸ್ಕಾಮ್ ಪ್ರಕಟಣೆಯಲ್ಲಿ ತಿಳಿಸಿದೆ.

ಎಚ್​-1ಬಿ ವೀಸಾ ಆಡಳಿತಕ್ಕಾಗಿ ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (ಡಿಹೆಚ್ಎಸ್) ಮತ್ತು ಕಾರ್ಮಿಕ ಇಲಾಖೆ (ಡಿಒಎಲ್) ಸೂಚಿಸಿದ ಹೊಸ ನಿಯಮಗಳು, ವಿಶೇಷ ಉದ್ಯೋಗ, ಉದ್ಯೋಗದಾತ ಮತ್ತು ಉದ್ಯೋಗಿಯ ಸಂಬಂಧದ ವ್ಯಾಖ್ಯಾನಗಳನ್ನು ಬದಲಾಯಿಸಿದೆ. ಮಾನ್ಯತೆಯನ್ನು ಮಿತಿಗೊಳಿಸಿ, ಮೂರನೇ ವ್ಯಕ್ತಿಯ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದು ವರ್ಷಕ್ಕೆ ಎಚ್​-1ಬಿ ವೀಸಾ ಒದಗಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.