ETV Bharat / business

ಕನ್ನಡ ಭಾಷೆಯಲ್ಲೂ ರೈಲ್ವೆ, ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಮೋದಿ ಸಂಪುಟ ಒಪ್ಪಿಗೆ - Business News

ರಾಷ್ಟ್ರೀಯ ನೇಮಕ ಏಜೆನ್ಸಿ ಅಡಿಯಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳು, ರೈಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಇನ್​ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಗಳನ್ನು ತರಲಾಗುವುದು. ಪ್ರಸ್ತುತ ಕೇಂದ್ರ ಸರ್ಕಾರದ ಅಡಿಯಲ್ಲಿ ಎಸ್​ಎಸ್​ಸಿ, ಆರ್​ಆರ್​ಬಿ, ಐಬಿಪಿಎಸ್​, ಎನ್​ಟಿಎ, ಯುಪಿಎಸ್​​ಸಿ, ಪಿಇಬಿ, ಎಸ್​ಎಸ್​ಬಿ ಸೇರಿ 20ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳಿವೆ.

Recruitment
ನೇಮಕಾತಿ
author img

By

Published : Aug 19, 2020, 8:33 PM IST

ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು 'ರಾಷ್ಟ್ರೀಯ ನೇಮಕಾತಿ ಏಜೆನ್ಸಿ' ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ.

ಗೆಜೆಟೆಡ್ ಅಲ್ಲದ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರುತ್ತದೆ. ಗ್ರೂಪ್​ 'ಬಿ' ಮತ್ತು 'ಸಿ' ಹುದ್ದೆಗಳಿಗೆ ಅನ್ವಯಿಸಲಿದೆ. ಈ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಸಂಸ್ಥೆಗಳಿಗೆ ಉನ್ನತ ಮಟ್ಟದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಪಡೆದ ಅಂಕಗಳು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಯ ಯೋಗ್ಯತೆ ಮತ್ತು ಆದ್ಯತೆಗಳನ್ನು ಅವಲಂಬಿಸಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆ ಪ್ರಯತ್ನಗಳಿಗೆ ಯಾವುದೇ ನಿಯಮಿತ ನಿರ್ಬಂಧ ಇರುವುದಿಲ್ಲ.

ಈ ಪ್ರತಿಯೊಂದು ಪರೀಕ್ಷೆಯಲ್ಲಿ ಸರಾಸರಿ 2.5- 3 ಕೋಟಿ ಅಭ್ಯರ್ಥಿಗಳು ಹಾಜರಾಗುತ್ತಾರೆ. ಭವಿಷ್ಯದಲ್ಲಿ ಎಲ್ಲಾ ನೇಮಕಾತಿಗಳಿಗೆ ಅಭ್ಯರ್ಥಿಗಳು ಪಡೆದ ಸಿಇಟಿ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ. ಪ್ರಾಯೋಗಿಕ ಎಂಬಂತೆ ಆರಂಭದಲ್ಲಿ ಮೂರು ವಲಯಗಳಲ್ಲಿ ಮಾತ್ರ ಕಾರ್ಯಗತಗೊಳಿಸಲಾಗುತ್ತದೆ.

ಕೇಂದ್ರ ಸರ್ಕಾರಿ ಸಂಸ್ಥೆಗಳು, ರೈಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಇನ್​ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಗಳನ್ನು ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ ಅಡಿಯಲ್ಲಿ ತರಲಾಗುವುದು. ಪ್ರಸ್ತುತ ಕೇಂದ್ರ ಸರ್ಕಾರದ ಅಡಿಯಲ್ಲಿ ಎಸ್​ಎಸ್​ಸಿ, ಆರ್​ಆರ್​ಬಿ, ಐಬಿಪಿಎಸ್​, ಎನ್​ಟಿಎ, ಯುಪಿಎಸ್​​ಸಿ, ಪಿಇಬಿ, ಎಸ್​ಎಸ್​ಬಿ ಸೇರಿ 20ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳಿವೆ.

ಸರ್ಕಾರವು ರಾಷ್ಟ್ರೀಯ ನೇಮಕಾತಿ ಸಂಸ್ಥೆಗೆ 1517.57 ಕೋಟಿ ರೂ.ಯನ್ನು ಮೂರು ವರ್ಷಗಳ ಅವಧಿಯಲ್ಲಿ ವೆಚ್ಚ ಮಾಡಲಿದೆ. ಎನ್‌ಆರ್‌ಎ ಸ್ಥಾಪಿಸುವುದರ ಹೊರತಾಗಿ 117 ಜಿಲ್ಲೆಗಳಲ್ಲಿ ಪರೀಕ್ಷಾ ಮೂಲಸೌಕರ್ಯ ಸ್ಥಾಪಿಸಲು ಈ ಹಣ ಬಳಸಿಕೊಳ್ಳಲಿದೆ.

ಸೊಸೈಟಿ​ ಕಾಯ್ದೆಯಡಿ ಎನ್‌ಆರ್‌ಎ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದು ಟೈರ್​ -1 ಪರೀಕ್ಷೆ, ಸಾಮಾನ್ಯ ಅರ್ಹತಾ ಪರೀಕ್ಷೆ, ಸಿಇಟಿ ಪರೀಕ್ಷೆಗಳನ್ನು ನಡೆಸಲಿದೆ. ಇದರಲ್ಲಿ ಸಿಇಟಿ ಆನ್‌ಲೈನ್ ಮೂಲಕ ಆಯೋಜಿಸಲಿದೆ. ಪ್ರತಿ ಜಿಲ್ಲೆಯಲ್ಲಿ ಕಡಿಮೆ ಎಂದರು ಒಂದು ಪರೀಕ್ಷೆಯಾದರೂ ನಡೆಸಲಿದೆ. ಇಲ್ಲಿಯವರೆಗೆ ಕೇವಲ ಎರಡು ಭಾಷೆಗಳಿಗೆ ಮಾತ್ರ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿತ್ತು, ಆದರೆ ಇದರ ಮೂಲಕ ವಿದ್ಯಾರ್ಥಿಗಳು 12 ಭಾಷೆಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಸಾಮಾನ್ಯ ನೋಂದಣಿ, ಏಕ ಶುಲ್ಕ ಮತ್ತು ಸಾಮಾನ್ಯ ಪಠ್ಯಕ್ರಮವು ಪರೀಕ್ಷಾರ್ಥಿಗಳಿಗೆ ಅನುಕೂಲವಾಗಿದೆ. ಆರಂಭದಲ್ಲಿ ವರ್ಷಕ್ಕೆ ಎರಡು ಬಾರಿ ಸಿಇಟಿ ನಡೆಸುವ ಯೋಜನೆ ಹಾಕಿಕೊಂಡಿದೆ. ಪರೀಕ್ಷೆಯ ಎಲ್ಲ ಕಾರ್ಯಗಳು ಆನ್‌ಲೈನ್‌ನಲ್ಲಿ ಕಾರ್ಯಗತಗೊಳಿಸಲಾಗುತ್ತದೆ.

ಪರೀಕ್ಷಾ ಅಂಕಗಳ ಸಿಂಧುತ್ವವು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ವಯಸ್ಸಿನ ಮಿತಿಗೆ ಒಳಪಟ್ಟ ಪರೀಕ್ಷಾ ಪ್ರಯತ್ನಗಳಿಗೆ ಯಾವುದೇ ನಂಬರ್​ಗಳ ನಿರ್ಬಂಧ ಇರುವುದಿಲ್ಲ.

ಪರೀಕ್ಷಾ ಬರವಣಿಗೆಯು ಬಹು ಆಯ್ಕೆಯ ವಸ್ತುನಿಷ್ಠ ಪ್ರಕಾರದ ಪ್ರಶ್ನೆ ಪತ್ರಿಕೆ ಇರುತ್ತದೆ. ವಿಶೇಷ ಪರೀಕ್ಷೆಗಳಲ್ಲಿ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ ಒಟ್ಟು ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇ 5ರಷ್ಟಕ್ಕೆ ತಗ್ಗಿಸಲಾಗುತ್ತದೆ. ಅಭ್ಯರ್ಥಿಗಳು ಸಿಇಟಿಯಲ್ಲಿ ಪಡೆದ ಅಂಕಗಳನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳ, ಪಿಎಎಸ್​ಯು, ಖಾಸಗಿ ವಲಯದೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಪರೀಕ್ಷೆಗಳನ್ನು ನಿಗದಿಪಡಿಸಬಹುದು ಮತ್ತು ಅವರ ಆಯ್ಕೆಯ ಶೇಕಡಾ ಮರು ಆಯ್ಕೆ ಮಾಡಬಹುದಾಗಿದೆ. ಪದವಿ, ಹೈಯರ್ ಸೆಕೆಂಡರಿ (12ನೇ ತರಗತಿ), ಮೆಟ್ರಿಕ್ಯುಲೇಟ್​ನಂತೆ (10ನೇ ತರಗತಿ) ಮೂರು ಹಂತಗಳಿಗೆ ಪ್ರತ್ಯೇಕ ಸಿಇಟಿ ನಡೆಸಬೇಕು ಎಂದು ಪ್ರಸ್ತಾಪಿಸುತ್ತದೆ.

ಎನ್​ಆರ್​ಎ ಜಾರಿಯಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸರಳತೆ ಅನುಷ್ಠಾನಕ್ಕೆ ಬರಲಿದೆ. ಪ್ರಸ್ತುತ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಬಹು ಏಜೆನ್ಸಿಗಳಲ್ಲಿ ಹಂಚಿಕೆಯಾಗಿ ತೀವ್ರ ಗೊಂದಲಕ್ಕೆ ಈಡಾಗಿದ್ದಾರೆ. ಅಭ್ಯರ್ಥಿಗಳು ಪುನರಾವರ್ತಿತ ಶುಲ್ಕ ಪಾವತಿಸುವುದನ್ನು ತಪ್ಪಿಸಬಹುದು. ದೂರದೂರಿನ ನೇಮಕಾತಿ ಕೇಂದ್ರಗಳಿಗೆ ಅಲೆಯುವುದನ್ನು ತಡೆಯಬಹುದು. ವರ್ಷಕ್ಕೆ ಹಲವು ಬಾರಿ ಬಹು ಸರ್ಕಾರ ಪರೀಕ್ಷೆ ನಡೆಯುವುದು ಸ್ಥಗಿತವಾಗಲಿದೆ.

ಕೇಂದ್ರೀಯ ಸರ್ವರ್‌ನಲ್ಲಿ ಬಹು ಆಯಾಮದ ಪ್ರಶ್ನೆಗಳನ್ನು ಹೊಂದಿರುವ ಪ್ರಮಾಣೀಕೃತ ಕ್ವಷನ್​ ಬ್ಯಾಂಕ್ ರಚಿಸಲಾಗುತ್ತದೆ. ವಿಭಿನ್ನವಾದ ಪ್ರಶ್ನೆಗಳನ್ನು ತೆಗೆಯಲು ಅಲ್ಗಾರಿದಮ್ ಬಳಸಲಾಗುತ್ತದೆ. ಇದರಿಂದಾಗಿ ಪ್ರತಿಯೊಬ್ಬ ಅಭ್ಯರ್ಥಿಯು ಬೇರೆ- ಬೇರೆ ಪ್ರಶ್ನೆ ಪತ್ರಿಕೆ ಪಡೆಯುತ್ತಾನೆ. ಮೋಸ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.