ನವದೆಹಲಿ: ಕೊರೊನಾ ವೈರಸ್ ಕಾಳಗದ ವಿರುದ್ಧ ಹೋರಾಟಕ್ಕೆ ಹೆಚ್ಚಿನ ವೆಚ್ಚ ಹಾಗೂ ಲಾಕ್ಡೌನ್ನಿಂದಾಗಿ ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ಶೂನ್ಯಕ್ಕೆ ಕುಸಿತವಾಗಲಿದೆ ಎಂದು ಮೂಡಿಸ್ ಅಂದಾಜಿಸಿದೆ.
ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್, ಭಾರತದ 2021ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೂನ್ಯದಷ್ಟು ಇರಲಿದೆ ಎಂದು ಪರಿಷ್ಕರಿಸಿದೆ. ಹಣಕಾಸಿನ ಮಾಪನಗಳು ದುರ್ಬಲಗೊಂಡರೇ ದೇಶದ ಸಾರ್ವಭೌಮ ರೇಟಿಂಗ್ ಅನ್ನು ಇನ್ನಷ್ಟು ತಗ್ಗಿಸಬಹುದು ಎಂದು ಎಚ್ಚರಿಸಿದೆ. ಫಿಚ್ ರೇಟಿಂಗ್ ಸಹ ಇದೇ ರೀತಿಯ ಎಚ್ಚರಿಕೆ ನೀಡಿತ್ತು.
ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳ ಮೂಲಕ ಸರ್ಕಾರ, ಬಲವಾದ ಉತ್ಪಾದನೆ ಮರುಸ್ಥಾಪಿಸಲು ಸಾಧ್ಯ ಆಗಬಹುದು ಎಂಬ ಸೀಮಿತ ನಿರೀಕ್ಷೆ ಇರಿಸಿಕೊಂಡಿದೆ. ಬೆಳವಣಿಗೆಯ ದೀರ್ಘ ಅಥವಾ ಆಳವಾದ ಮಂದಗತಿಯ ಹಿನ್ನೆಲೆಯಲ್ಲಿ ಶೂನ್ಯ ಬೆಳವಣಿಗೆ ಸಂಭವಿಸಬಹುದು ಎಂದು ರೇಟಿಂಗ್ ಏಜೆನ್ಸಿ ಅಂದಾಜಿಸಿದೆ.
ನವೆಂಬರ್ನಲ್ಲಿ ಮೂಡಿಸ್ ಭಾರತದ ರೇಟಿಂಗ್ ತನ್ನ ಅಂದಾಜಿನ ದೃಷ್ಟಿಕೋನವನ್ನು ಸ್ಥಿರದಿಂದ ಋಣಾತ್ಮಕಕ್ಕೆ ಪರಿಷ್ಕರಿಸಿದೆ. ಕ್ರೆಡಿಟ್ ರೇಟಿಂಗ್ Baa2, ಎರಡನೇ ಅತಿ ಕಡಿಮೆ ಹೂಡಿಕೆ ದರ್ಜೆಯ ಸ್ಕೋರ್ ನೀಡಿದೆ. ಇದು ಎಸ್ & ಪಿ ಹಾಗೂ ಫಿಚ್ಗಿಂತ ಉತ್ತಮವಾಗಿದೆ.