ಧೇಮಾಜಿ: ಮುಂಬರುವ ಚುನಾವಣೆಗೆ ಅಸ್ಸೊಂನತ್ತ ದೃಷ್ಟಿ ಹರಿಸಿರುವ ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗುರಿಯಾಗಿಸಿಕೊಂಡು, ಸ್ವಾತಂತ್ರ್ಯದ ನಂತರ ದೇಶವನ್ನು ಆಳಿದ ಕಾಂಗ್ರೆಸ್ ದಶಕಗಳ ಕಾಲ ರಾಜ್ಯ ಮತ್ತು ಈಶಾನ್ಯ ಭಾರತವನ್ನು ನಿರ್ಲಕ್ಷ್ಯ ತೋರಿದೆ ಎಂದು ಟೀಕಿಸಿದರು.
3,222 ಕೋಟಿ ರೂ. ಮೌಲ್ಯದ ಪೆಟ್ರೋಲಿಯಂ ವಲಯದ ಮೂರು ಪ್ರಮುಖ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೋದಿ, ಒಂದು ತಿಂಗಳಲ್ಲಿ ಅಸ್ಸೊಂಗೆ ಮೂರನೇ ಬಾರಿ ಭೇಟಿ ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ಸರ್ಬಾನಂದ ಸೋನೊವಾಲ್ ಮತ್ತು ಕೇಂದ್ರದ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಇದನ್ನೂ ಓದಿ: ಮತ್ತೊಂದು ಸುತ್ತಿನ ಕೊರೊನಾ ಲಾಕ್ಡೌನ್ಗೆ ಬೆದರಿದ ಗೂಳಿ: 1145 ಅಂಕ ಕುಸಿದ ಸೆನ್ಸೆಕ್ಸ್
ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಆಳಿದವರು ಡಿಸ್ಪೂರ್ ದೆಹಲಿಯಿಂದ ತುಂಬಾ ದೂರದಲ್ಲಿದ್ದಾರೆ ಎಂದು ನಂಬಿದ್ದರು. ದಿಲ್ಲಿ ಅಬ್ ದೂರ್ ನಹಿ, ಆಪ್ಕೆ ದರ್ವಾಜೆ ಪರ್ ಹೈ' (ದೆಹಲಿ ಈಗ ದೂರದಲ್ಲಿಲ್ಲ, ಅದು ನಿಮ್ಮ ಮನೆ ಬಾಗಿಲ ಬಳಿ ನಿಂತಿದೆ' ಎಂದು ಬೃಹತ್ ಸಮಾವೇಶ ಉದ್ದೇಶಿಸಿ ಹೇಳಿದರು.
ಹಿಂದಿನ ಸರ್ಕಾರಗಳು ಮಲತಾಯಿ ಧೋರಣೆ ತಳಿದು ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮವನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.
ನಾನು ಈ ಮೊದಲು ರಾಜ್ಯದ ಉತ್ತರ ದಂಡೆಯಲ್ಲಿರುವ ಗೊಗಾಮುಕ್‌ಗೆ ಬಂದಿದ್ದೇನೆ. ಅಸ್ಸೊಂ ಮತ್ತು ಈಶಾನ್ಯವು ದೇಶದ ಹೊಸ ಬೆಳವಣಿಗೆಯ ಎಂಜಿನ್ ಆಗಲಿದೆ. ಈಗ ಈ ನಂಬಿಕೆಯು ಫಲ ನೀಡುತ್ತದೆ ಎಂದರು.