ETV Bharat / business

ಕಾಶ್ಮೀರದ ’ವಿಧಿ’ ಬದಲಿಸಿದ ಮೋದಿ, ಆಗಸ್ಟ್​ 15ಕ್ಕೆ ಮತ್ತೊಂದು ಶಾಕ್​... ಏನ್​​ ಗೊತ್ತೆ? - ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಸ್ಥಿತಿ ಸುಧಾರಿಸುವ  ಮೂಲ ಸೌಕರ್ಯಗಳ ಅಭಿವೃದ್ಧಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದೊಡ್ಡ- ದೊಡ್ಡ ಯೋಜನೆಗಳನ್ನು ಮೋದಿ ಅವರು ಘೋಷಿಸಲಿದ್ದಾರೆ. ಕಣಿವೆ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿದೆ.

ಪಿಎಂ ಮೋದಿ
author img

By

Published : Aug 6, 2019, 8:41 PM IST

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ಹಿಂಪಡೆದ ಮೇಲೆ ಅಲ್ಲಿನ ನಾಗರಿಕರಿಗೆ ಉಡುಗೊರೆಗಳನ್ನು ನೀಡಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮೂಲ ಸೌಕರ್ಯಗಳ ಅಭಿವೃದ್ಧಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದೊಡ್ಡ - ದೊಡ್ಡ ಯೋಜನೆಗಳನ್ನು ಮೋದಿ ಅವರು ಘೋಷಿಸಲಿದ್ದಾರೆ. ಕಣಿವೆ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭಿಸಬಹುದಾದ ಮೂಲ ಸೌಕರ್ಯ ಯೋಜನೆಗಳ ವಿವರವಾದ ಪಟ್ಟಿಯನ್ನು ತಯಾರಿಸಲು ಪಿಎಂಒ ಸಂಬಂಧಿತ ಸಚಿವಾಲಯಗಳಿಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭವಾಗಲಿರುವ ಮೂಲ ಸೌಕರ್ಯಗಳ ಯೋಜನೆಗಳನ್ನು ತಮ್ಮ ಭಾಷಣದಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳನ್ನು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳಿಸಬೇಕು. ಪಿಎಂಒ ಈ ಸ್ಥಳದಲ್ಲಿ ಎಲ್ಲ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ ಎಂದು ರೈಲ್ವೆ ಸಚಿವಾಲಯವು ನಿಯೋಜಿತ ಕಾಮಗಾರಿಗಳ ಅಧಿಕಾರಿಗಳಿಗೆ ಎಚ್ಚರಿಸಿದೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್ ಸುಬ್ರಮಣ್ಯಂ ಅವರು ಯೋಜನೆಗಳ ಪ್ರಗತಿಯ ವರದಿಯ ಪ್ರತಿಯನ್ನು ಪ್ರತಿ ಸೋಮವಾರ ರೈಲ್ವೆ ಸಚಿವಾಲಯಕ್ಕೆ ಕಳುಹಿಸಬೇಕಿದೆ ಎಂಬುದು ಸಹ ತಿಳಿದುಬಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.