ETV Bharat / business

ಉದ್ಯಮಗಳ ಮೇಲಿನ ನಿಯಮ ಹೊರೆ ಇಳಿಕೆ: ಪರಿಶೀಲನೆಗಾಗಿ ರಾಜ್ಯಗಳಿಗೆ ಸೂಚನೆ

ಉದ್ಯಮಗಳ ನಿಯಂತ್ರಕ ಅನುಸರಣೆ ಹೊರೆ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯ ಕ್ಷೇತ್ರವಾಗಿದೆ. ಸಾಕಷ್ಟು ನಿಯಮಗಳ ಹೊರೆಗಳಿದ್ದು, ನಾವು ಅದನ್ನು ಕಡಿಮೆ ಮಾಡಬೇಕಿದೆ. ಪ್ರತಿ ಸಚಿವಾಲಯವು ಇದನ್ನು ಸಮರೋಪಾದಿಯಲ್ಲಿ ಮಾಡುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Parliament
ಸಂಸತ್
author img

By

Published : Dec 28, 2020, 4:36 PM IST

ನವದೆಹಲಿ: ಉದ್ಯಮಗಳು ಪಾಲಿಸುವ ನಿಯಮಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾನೂನು ಮತ್ತು ನಿಬಂಧನೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯಗಳನ್ನು ಕೇಳಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಂತ್ರಕ ಅನುಸರಣೆ ಹೊರೆ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯ ಕ್ಷೇತ್ರವಾಗಿದೆ. ಸಾಕಷ್ಟು ನಿಯಮಗಳ ಹೊರೆಗಳಿದ್ದು, ನಾವು ಅದನ್ನು ಕಡಿಮೆ ಮಾಡಬೇಕಿದೆ. ಪ್ರತಿ ಸಚಿವಾಲಯವು ಇದನ್ನು ಸಮರೋಪಾದಿಯಲ್ಲಿ ಮಾಡುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾರ್ಥಿಕ ವರ್ಷದಲ್ಲಿ ಇಲ್ಲಿಯತನಕ ಐಟಿ ರಿಟರ್ನ್ಸ್​ ಮಾಡಿದವರು ಎಷ್ಟು ಮಂದಿ ಗೊತ್ತೇ?

ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ), ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಬಾಯ್ಲರ್‌ಗಳ ಎರಡು ಕಾನೂನುಗಳಂತಹ ಹಲವು ಕಾಯ್ದೆಗಳನ್ನು ಸಚಿವಾಲಯ ನಿರ್ವಹಿಸುತ್ತದೆ ಎಂದು ಉದಾಹರಣೆ ಉಲ್ಲೇಖಿಸಿ ಅಧಿಕಾರಿ ಹೇಳಿದರು.

ಕ್ರಿಮಿನಲ್ ಕಾನೂನು ಕ್ರಮ ಜರುಗಿಸುವ ಅವಕಾಶ ಇರುವ ಕಾನೂನುಗಳನ್ನು ಪುನರ್​ ಪರಿಶೀಲಿಸಲು ಸಾಧ್ಯವೇ ಎಂಬ ಬಗ್ಗೆ ನಾವು ಅವಲೋಕನ ಮಾಡುತ್ತಿದ್ದೇವೆ. ಅದನ್ನು ಹಿಂತೆಗೆದುಕೊಳ್ಳಬಹುದೇ? ಕ್ರಿಮಿನಲ್ ಶಿಕ್ಷೆ ಅಥವಾ ಸಿವಿಲ್​ ಶಿಕ್ಷೆ ಜರುಗಿಸಿ ದಂಡ ಮಾತ್ರವೇ ವಿಧಿಸಬಹುದೇ ಅಥವಾ ಇನ್ನೇನಾದರೂ ಮಾಡಬಹುದೇ ಎಂಬುದರ ಬಗ್ಗೆಯೂ ಅವಲೋಕನ ನಡೆಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.

ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಭಾರವಾದ ನಿಯಮಗಳು ಮತ್ತು ವ್ಯವಹಾರಗಳಿಗೆ ಆ ಹೊರೆ ಕಡಿಮೆ ಮಾಡುವ ಮಾರ್ಗಗಳನ್ನು ಗುರುತಿಸಲು ಸೂಚಿಸಲಾಗಿದೆ. ಸಚಿವಾಲಯಗಳು ಮತ್ತು ರಾಜ್ಯಗಳು ಕೇಂದ್ರ ಕಾನೂನುಗಳನ್ನು ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.