ಚೆನ್ನೈ: ನೌಕರರ ಲಾಭದ ಯೋಜನೆಗಳನ್ನು ಎಲ್ಲ ಉದ್ಯೋಗಿಗಳಿಗೆ ವಿಸ್ತರಿಸಲಾಗುತ್ತಿರುವುದರಿಂದ 10 ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ನಾಲ್ಕನೆ ಹಂತದಲ್ಲಿ ಒಗ್ಗೂಡಿಸುವುದು ಕಳೆದ ಎರಡು ತಿಂಗಳಿನಿಂದ ಯಾವುದೇ ಅಡ್ಡಿಯಿಲ್ಲದೇ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಅಧಿಕಾರಿ ತಿಳಿಸಿದ್ದಾರೆ.
ಎಐಬಿಇಎ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ವಿಭಾಗವನ್ನು ಪ್ರತಿನಿಧಿಸುವ ಅತಿದೊಡ್ಡ ಒಕ್ಕೂಟವಾಗಿದೆ.
ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಮಾತನಾಡಿ, 10 ಬ್ಯಾಂಕ್‌ಗಳ ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಗಳನ್ನು ಇನ್ನೂ ನಾಲ್ಕು ಬ್ಯಾಂಕ್ಗಳಲ್ಲಿ ಸಂಯೋಜಿಸಲು ಆಗಿಲ್ಲ. ಆದರೂ ಸಂಯೋಜನೆಯು ಈವರೆಗೆ ಸುಗಮವಾಗಿ ಸಾಗುತ್ತಿದೆ ಎಂದರು.
ಪ್ರತಿ ಬ್ಯಾಂಕ್‌ಗೂ ತನ್ನದೇ ಆದ ಉದ್ಯೋಗಿ ಲಾಭದ ಯೋಜನೆಗಳು ಇದ್ದವು. ಉದ್ಯೋಗಿಗಳಿಗೆ ಹೆಚ್ಚು ಪ್ರಯೋಜನಕಾರಿಯಾದ ಯೋಜನೆಯನ್ನು ಸಂಯೋಜಿತ ಘಟಕದ ಎಲ್ಲಾ ಉದ್ಯೋಗಿಗಳಿಗೆ ವಿಸ್ತರಿಸಲಾಯಿತು. ಇದಕ್ಕೆ ಅಡ್ಡಿ- ಆತಂಕ ಸೃಷ್ಟಿಯಾಗಿಲ್ಲ ಎಂದು ವೆಂಕಟಾಚಲಂ ಐಎಎನ್‌ಎಸ್‌ಗೆ ತಿಳಿಸಿದರು.
ಮುಂದಿನ ಹಂತವು ವೈಯಕ್ತಿಕ ಬ್ಯಾಂಕುಗಳ ನೀತಿಗಳನ್ನು ಗಣನೆಗೆ ತೆಗೆದುಕೊಂಡು ಸಂಯೋಜಿತ ಘಟಕಗಳ ವೃತ್ತಿ, ವರ್ಗಾವಣೆ ಮತ್ತು ಇತರ ನೀತಿಗಳನ್ನು ರೂಪಿಸಲಾಗುವುದು. ಇಲ್ಲಿಯವರೆಗೆ ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗಿಲ್ಲ. ಆದರೆ, ಲಾಕ್ಡೌನ್ ಬಳಿಕ ಶಾಖೆಗಳ ತರ್ಕಬದ್ಧಗೊಳಿಸುವಿಕೆ ಇರಲಿದೆ ಎಂದು ಹೇಳಿದರು .