ನವದೆಹಲಿ : ಕೇಂದ್ರ ಸರ್ಕಾರವು ಶುಕ್ರವಾರ ಎನ್ 95 ಮುಖಗವಸು ಮತ್ತು ಕೈ ಗ್ಲೌಸ್ ಸೇರಿದಂತೆ ಇತರೆ ವೈದ್ಯಕಿಯ ಚಿಕಿತ್ಸಾ ಉಪಕರಣಗಳನ್ನು ತಾತ್ಕಾಲಿಕ 'ಅಗತ್ಯ ಸರಕುಗಳು' ಪಟ್ಟಿಗೆ ಸೇರಿಸಿದೆ. ಕೊರೊನಾ ಸೋಂಕು ಹಬ್ಬುವ ಭೀತಿ ಹೆಚ್ಚಾಗಿರುವ ಹಿನ್ನೆಲ್ಲೆಯಲ್ಲಿ ಈ ವಸ್ತುಗಳ ಕೊರತೆ ಮತ್ತು ಬ್ಲ್ಯಾಕ್ ಮಾರಾಟವನ್ನು ನಿಯಂತ್ರಿಸುವ ದೃಷ್ಟಿಯಿಂದ ಸರ್ಕಾರ ನಿರ್ಧಾರ ತೆಗೆದು ಕೊಂಡಿದೆ. ಸ್ಯಾನಿಟರಿ ಹಾಗೂ ಮಾಸ್ಕ್ ಸೇರಿದಂತೆ ಕೆಲವು ವಸ್ತುಗಳು ಜೂನ್ ಅಂತ್ಯದವರೆಗೆ ಅಗತ್ಯ ಸರಕುಗಳ ವಿಭಾಗದಲ್ಲಿ ಉಳಿಯುತ್ತವೆ.
2020ರ ಜೂನ್ 30ರವರೆಗೆ ಮುಖಗವಸು (2ಪ್ಲೈ ಮತ್ತು 3ಪ್ಲೈ ಸರ್ಜಿಕಲ್ ಮಾಸ್ಕ್, ಎನ್95 ಮಾಸ್ಕ್) ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಅಗತ್ಯ ಸರಕುಗಳಾಗಿ ಘೋಷಿಸುವ ಆದೇಶವನ್ನು ಸರ್ಕಾರ ಘೋಷಿಸಿದೆ. ಉತ್ಪಾದನೆ, ಗುಣಮಟ್ಟ, ಮುಖವಾಡಗಳ ವಿತರಣೆ ಮತ್ತು ಕೈ ಸ್ಯಾನಿಟೈಜರ್‌ಗಳನ್ನು ನಿಯಂತ್ರಿಸಲು ಕೇಂದ್ರಕ್ಕೆ ಮತ್ತು ರಾಜ್ಯಗಳಿಗೆ ಅಧಿಕಾರ ನೀಡಿದೆ. ಈ ವಸ್ತುಗಳ ಮಾರಾಟ ಮತ್ತು ಲಭ್ಯತೆಯನ್ನು ಸುಗಮಗೊಳಿಸಲಿದೆ. ಊಹಾಪೋಹ ಹೆಬ್ಬಿಸುವವರ ವಿರುದ್ಧ ಶಿಸ್ತು ಕ್ರಮಕ್ಕೆ ಅಧಿಕಾರ ನೀಡಿದಂತಾಗಲಿದೆ.