ETV Bharat / business

ವಿಜಯ್ ಮಲ್ಯ 13 ಸಾವಿರ ಕೋಟಿ ರೂ ಕೊಡ್ತೀನಿ ಅಂದ್ರೂ ಬ್ಯಾಂಕ್‌ಗಳೇಕೆ ಒಪ್ಪುತ್ತಿಲ್ಲ?

author img

By

Published : Jul 18, 2020, 7:10 PM IST

ಬ್ಯಾಂಕ್​ನಿಂದ 9,000 ಕೋಟಿ ರೂ. ಸಾಲ ಪಡೆದು ಸುಸ್ತಿದಾರರನಾಗಿರುವ ಮಲ್ಯ, ಸಾಲ ತೀರಿಸುವುದಾಗಿ ಹೇಳುತ್ತಲೇ ಬಂದಿದ್ದು, ಈಗ ಸಾಲದ ಮೊತ್ತವನ್ನು ಸಹ ಸೂಚಿಸಿದ್ದಾರೆ. ಆದರೆ, ಬ್ಯಾಂಕ್​ಗಳು ಅವರ ಮನವಿಯನ್ನು ತಿರಸ್ಕರಿಸಿವೆ. 'ತೆಗೆದುಕೊಂಡ ಸಾಲ ತೀರಿಸುತ್ತೇನೆ ಎಂದರೂ ಬ್ಯಾಂಕ್​ಗಳು ತಮ್ಮ ಮನವಿ ಪುರಸ್ಕರಿಸುತ್ತಿಲ್ಲ' ಎಂದು ಮಲ್ಯ ಆಪಾದಿಸಿಕೊಂಡು ಬರುತ್ತಿದ್ದಾರೆ.

Vijay Mallya
ವಿಜಯ್ ಮಲ್ಯ

ನವದೆಹಲಿ: ಎಸ್‌ಬಿಐ, ಐಡಿಬಿಐ ಮತ್ತು ಇತರ ಬ್ಯಾಂಕ್​ಗಳಿಂದ 9,000 ಕೋಟಿ ರೂ. ಮೌಲ್ಯದಷ್ಟು ಸಾಲ ಪಡೆದು ಮರುಪಾವತಿಸದೆ ಪರಾರಿಯಾದ ಮದ್ಯದ ದೊರೆ ವಿಜಯ್ ಮಲ್ಯ ಅವರು 'ಸಾಲ ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ' ಎಂದರೂ ಯಾವುದೇ ಬ್ಯಾಂಕ್​ಗಳು ಒಪ್ಪಿಕೊಳ್ಳುತ್ತಿಲ್ಲ ಎಂದು ಉನ್ನತ ಬ್ಯಾಂಕರ್ ಒಬ್ಬರು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟವು 2016ರಲ್ಲಿ ವಿಜಯ್ ಮಲ್ಯ ಅವರ ಪಾಸ್‌ಪೋರ್ಟ್‌ ವಶಪಡಿಸಿಕೊಳ್ಳಲು ಒತ್ತಡ ಹೇರುತ್ತಿದ್ದಂತೆ, ಮಲ್ಯ ದೇಶದಿಂದ ಪಲಾಯನಗೈದರು.

ಇಂಗ್ಲೆಂಡ್​​ನಲ್ಲಿರುವ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರ ನಡುವೆ ರಾಜಿ- ಸಂಧಾನದ ಮೂಲಕ ಸಾಲದ ವಿವಾದ ಇತ್ಯರ್ಥ ಪಡಿಸಿಕೊಳ್ಳಲು, ತಮ್ಮ ಸಾಲಕ್ಕೆ ಸಂಬಂಧಿಸಿದಂತೆ 13,960 ಕೋಟಿ ರೂ. ಸೆಟ್ಲ್​ಮೆಂಟ್​ ಪ್ಯಾಕೇಜ್​ ಆಹ್ವಾನವನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಬ್ಯಾಂಕ್​ನಿಂದ 9,000 ಕೋಟಿ ರೂ. ಸಾಲಪಡೆದು ಸುಸ್ತಿದಾರರನಾಗಿರುವ ಮಲ್ಯ, ಸಾಲ ತೀರಿಸುವುದಾಗಿ ಹೇಳುತ್ತಲೇ ಬಂದಿದ್ದು, ಈಗ ಸಾಲದ ಮೊತ್ತವನ್ನು ಸಹ ಸೂಚಿಸಿದ್ದಾರೆ. ಆದರೆ, ಬ್ಯಾಂಕ್​ಗಳು ಅವರ ಮನವಿಯನ್ನು ತಿರಸ್ಕರಿಸಿವೆ. 'ತೆಗೆದುಕೊಂಡ ಸಾಲ ತೀರಿಸುತ್ತೇನೆ ಎಂದರೂ ಬ್ಯಾಂಕ್​ಗಳು ತಮ್ಮ ಮನವಿ ಪುರಸ್ಕರಿಸುತ್ತಿಲ್ಲ' ಎಂದು ಮಲ್ಯ ಆಪಾದಿಸಿಕೊಂಡು ಬರುತ್ತಿದ್ದಾರೆ.

ಮಲ್ಯ ಅವರು ಹಣ ಪಾವತಿಸುವುದಾಗಿ ಮತ್ತೆ-ಮತ್ತೆ ಹೇಳುತ್ತಿದ್ದಾರೆ. ಅವರಿಗೆ ಪಾವತಿಸಲು ಹಣ ಸಿಕ್ಕಿದೆ. ಅದನ್ನು ತೆಗೆದುಕೊಂಡು ಕ್ಲೀನ್ ಚಿಟ್ ಪಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೊಡುತ್ತೇನೆ ಎನ್ನುತ್ತಿದ್ದಾರೆ ಎಂದು ಇಂಗ್ಲೆಂಡ್​ ಎಸ್‌ಬಿಐನ ಮಾಜಿ ಸಿಇಒ ಪ್ರಭಾಕರ್ ಕಾಜಾ ಹೇಳಿದರು.

ಇತರ ಯಾವುದೇ ಉದ್ಯಮಿಗಳಂತೆ ವಿಜಯ್ ಮಲ್ಯ ಅವರು ತಮ್ಮ ಹಣವನ್ನು ಷೇರು, ಬ್ಯಾಂಕ್ ಖಾತೆಗಳು, ಆಸ್ತಿ ಮತ್ತು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟದ ಮುಖ್ಯಸ್ಥರು ಅವನನ್ನು ಮರುಪಾವತಿ ಮಾಡಲು ಕೇಳಿದಾಗ, ಪ್ರತಿ ಬಾರಿಯೂ ಅವರು ಸಂಪೂರ್ಣ ಪಟ್ಟಿಯನ್ನು ನೀಡುತ್ತಾರೆ. ಅವನು ಆ ದರದಲ್ಲಿ ಇದನ್ನೆಲ್ಲಾ ದಿವಾಳಿ ಮಾಡಿದರೇ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ ಕಾಜಾ ಹೇಳಿದರು.

ಮಲ್ಯ ಅವರು ಕಿಂಗ್‌ಫಿಶರ್ ಏರ್‌ಲೈನ್ಸ್ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. 2019ರ ಜನವರಿಯಲ್ಲಿ ನ್ಯಾಯಾಲಯವು ಅವರನ್ನು ಆರ್ಥಿಕ ಅಪರಾಧಿ ಮತ್ತು ಪರಾರಿಯಾದ ಉದ್ಯಮಿ ಎಂದು ಘೋಷಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.