ನವದೆಹಲಿ: ಮುಂದಿನ ತಿಂಗಳ ನವೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್‌ನ ಮನೆ ವಿತರಣಾ ವ್ಯವಸ್ಥೆ ದೊಡ್ಡ ಬದಲಾವಣೆ ಕಾಣಲಿದೆ.
ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ಮನೆ ಬಾಗಿಲಿಗೆ ತಲುಪಿಸಲು ಒನ್ - ಟೈಮ್ ಪಾಸ್ವರ್ಡ್ (ಒಟಿಪಿ) ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಎಲ್‌ಪಿಜಿ ಸಿಲಿಂಡರ್‌ನ ಹೊಸ ಒಟಿಪಿ ಆಧಾರಿತ ವಿತರಣೆಗೆ ಸಂಬಂಧಿಸಿದ ಪ್ರಮುಖ ನವೀಕರಣಗಳು ಹೀಗಿವೆ:
- ತೈಲ ಕಂಪನಿಗಳು ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿವೆ. ಇದನ್ನು ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಎಂದು ಕರೆಯಲಾಗುತ್ತದೆ. ಕಳ್ಳತನ ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ಈ ವ್ಯವಸ್ಥೆ ನೆರವಾಗಲಿದೆ
- ಆರಂಭದಲ್ಲಿ 100 ಸ್ಮಾರ್ಟ್ ಸಿಟಿಗಳಲ್ಲಿ ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಜಾರಿಗೆ ಬರಲಿದೆ. ರಾಜಸ್ಥಾನದ ಜೈಪುರ ನಗರದಲ್ಲಿ ಪ್ರಾಯೋಗಿಕ ಯೋಜನೆ ಪ್ರಾರಂಭವಾಗಿದೆ.
- ಎಲ್‌ಪಿಜಿ ಸಿಲಿಂಡರ್‌ಗಳ ಕಳ್ಳತನ ನಿಲ್ಲಿಸಲು, ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ವಿತರಣಾ ವ್ಯಕ್ತಿಗೆ ಕೋಡ್ ತೋರಿಸದ ಹೊರತು ವಿತರಣೆ ಆಗುವುದಿಲ್ಲ. ಈ ಕೋಡ್ ಅನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ
- ಎಲ್‌ಪಿಜಿ ಸಿಲಿಂಡರ್‌ಗಳ ಗ್ರಾಹಕರು ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದರೆ, ಕೂಡಲೇ ಮೊಬೈಲ್ ಸಂಖ್ಯೆ ನವೀಕರಿಸದಿದ್ದರೆ ಸಿಲಿಂಡರ್ ವಿತರಣೆ ಸ್ಥಗಿತವಾಗುತ್ತೆ
- ಗ್ಯಾಸ್ ಏಜೆನ್ಸಿಯೊಂದಿಗೆ ನಮೂದಿಸಲಾದ ವಿಳಾಸವು ಅವರು ವಾಸಿಸುವ ವಿಳಾಸಕ್ಕಿಂತ ಭಿನ್ನವಾಗಿದ್ದರೆ ಗ್ರಾಹಕರು ತಮ್ಮ ನಿವಾಸದ ವಿಳಾಸವನ್ನೂ ನವೀಕರಿಸಬೇಕು
- ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಅನ್ವಯಿಸುವುದಿಲ್ಲ