ETV Bharat / business

ಮತ್ತೆ ಲಾಕ್​ಡೌನ್​ ಜಾರಿಯಾದರೆ ದೇಶಕ್ಕಾಗುವ ಆರ್ಥಿಕ ನಷ್ಟ ಎಷ್ಟು ಗೊತ್ತೇ? - ಜಿಡಿಪಿ ಮೇಲೆ ಲಾಕ್​ಡೌನ್ ಪ್ರಭಾವ

ಶೇ.60ರಷ್ಟು ಆರ್ಥಿಕತೆಯು ಪರಿಣಾಮ ಎದುರಿಸಲಿದೆ. ಎಲ್ಲಾ ಪ್ರಮುಖ ಸೋಂಕಿನ ತಾಣಗಳಲ್ಲಿ ಮುಂಬೈ ಮತ್ತು ಪುಣೆ ಹೆಚ್ಚು ಹಾನಿಗೊಳಗಾಗಿವೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆ ರಾಷ್ಟ್ರೀಯ ಹಣಕಾಸು ಮಟ್ಟದಲ್ಲಿ ಒಟ್ಟು ಮೌಲ್ಯವರ್ಧಿತ ಬೆಳವಣಿಗೆ ಈ ಹಣಕಾಸು ವರ್ಷದಲ್ಲಿ ಶೇ.0.32ರಷ್ಟು ನಿಧಾನವಾಗಲಿದೆ ಎಂದು ಕೇರ್ ರೇಟಿಂಗ್ಸ್ ವರದಿ ಮಾಡಿದೆ. ಇದು ರಾಷ್ಟ್ರೀಯ ಜಿಡಿಪಿಗೆ ಶೇ.16ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ..

Lockdowns
Lockdowns
author img

By

Published : Apr 14, 2021, 6:02 PM IST

ಮುಂಬೈ : ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳ ಮಧ್ಯೆ ಅನೇಕ ರಾಜ್ಯಗಳು ಸಾರ್ವಜನಿಕ ಚಟುವಟಿಕೆ ನಿಯಂತ್ರಣ ಮತ್ತು ವ್ಯವಹಾರಗಳನ್ನು ನಿಗ್ರಹಿಸಲು ಮುಂದಾಗುತ್ತಿವೆ. ಪ್ರಮುಖ ಆರ್ಥಿಕ ಕೇಂದ್ರಗಳಲ್ಲಿನ ಈ ಸ್ಥಳೀಯ ಲಾಕ್‌ಡೌನ್‌ಗಳು ಪ್ರತಿ ವಾರ ಆರ್ಥಿಕತೆಗೆ ಸರಾಸರಿ 1.25 ಶತಕೋಟಿ ಡಾಲರ್​ ವೆಚ್ಚವಾಗಬಹುದು ಮತ್ತು ಮೊದಲನೇ ತ್ರೈಮಾಸಿಕದ ನಾಮಮಾತ್ರ ಜಿಡಿಪಿಯಿಂದ 140 ಬಿಪಿಎಸ್‌ ಕಡಿತವಾಗಬಹುದು ಎಂದು ವರದಿಯೊಂದು ಹೇಳಿದೆ.

ಭಾರತದಲ್ಲಿನ ಲಾಕ್‌ಡೌನ್‌ಗಳು ಆರ್ಥಿಕತೆಗೆ ವಾರಕ್ಕೆ 1.25 ಬಿಲಿಯನ್ ಡಾಲರ್​ ವೆಚ್ಚಕ್ಕೆ ಕಾರಣವಾಗಲಿದೆ. 140 ಬಿಪಿಎಸ್ ಜಿಡಿಪಿಯಿಂದ ಕಡಿತಗೊಳಿಸಬಹುದು ಎಂದು ಬ್ರಿಟಿಷ್ ದಲ್ಲಾಳಿ ಬಾರ್ಕ್ಲೇಸ್ ತಿಳಿಸಿದೆ. ಮೇ ಅಂತ್ಯದ ವೇಳೆಗೆ ಪ್ರಸ್ತುತ ಸುಂಕಗಳು ಜಾರಿಯಲ್ಲಿದ್ದರೆ ಆರ್ಥಿಕ ಮತ್ತು ವ್ಯಾಪಾರ ಕಾರ್ಯಾಚರಣೆಗಳ ನಷ್ಟವು ಸುಮಾರು 10.5 ಬಿಲಿಯನ್ ಅಥವಾ ಜಿಡಿಪಿಯಲ್ಲಿ 34 ಬಿಪಿಎಸ್ ಆಗಿರುತ್ತದೆ ಎಂದು ಹೇಳಿದರು.

ಪ್ರಸ್ತುತ ನಿರ್ಬಂಧಗಳು ಮೇ-ಅಂತ್ಯದವರೆಗೆ ಇದ್ದಲ್ಲಿ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಯ ಒಟ್ಟು ನಷ್ಟವು ಸುಮಾರು 10.5 ಬಿಲಿಯನ್ ಅಥವಾ ನಾಮಮಾತ್ರ ಜಿಡಿಪಿಯ 34 ಬಿಪಿಎಸ್ ಆಗಬಹುದು. ದೇಶವು ಈಗ ಹೊಸ ಕೊರೊನಾ ಸೋಕಿನ ವ್ಯಾಪಕ ಪ್ರಕರಣಗಳನ್ನು ಎದುರಿಸುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್‌ನ ಎರಡನೇ ಮತ್ತು ಮೂರನೇ ಅತ್ಯಧಿಕ ರಾಷ್ಟ್ರಗಳಿಗಿಂತ ಮಂಗಳವಾರ 1.62 ಲಕ್ಷ ಪ್ರಕರಣಗಳ ಸೋಂಕು ಮತ್ತು 879 ಸಾವು ಸಂಭವಿಸಿವೆ.

ಇದುವರೆಗೆ ಕೊರೊನಾ ಪ್ರಕರಣಗಳ ಸಂಖ್ಯೆ 1.37 ಕೋಟಿ ಮತ್ತು ಸಾವಿನ ಸಂಖ್ಯೆ 1,71,058ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಪಾಯದ ದೃಷ್ಟಿಯಿಂದ ಮಹಾರಾಷ್ಟ್ರವು 2 ವಾರಗಳ ಸಂಪೂರ್ಣ ಲಾಕ್‌ಡೌನ್ ಆಲೋಚನೆಯೊಂದಿಗೆ ಮುಂದುವರಿಯುತ್ತಿದೆ. ಶೇ.81ಕ್ಕಿಂತ ಹೆಚ್ಚು ಪ್ರಕರಣಗಳು ಕೇವಲ 8 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ. ಅವುಗಳಲ್ಲಿ ಹೆಚ್ಚಿನವು ಆರ್ಥಿಕವಾಗಿ ಸಕ್ರಿಯವಾಗಿರುವ ರಾಜ್ಯಗಳಾಗಿವೆ. ಆದ್ದರಿಂದ ಇದು ಆರ್ಥಿಕತೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ರಾಜಸ್ಥಾನಗಳಂತಹ ಪ್ರಮುಖ ಹಣಕಾಸು ಕೇಂದ್ರಗಳಿರುವ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಶೇ.60ರಷ್ಟು ಆರ್ಥಿಕತೆಯು ಪರಿಣಾಮ ಎದುರಿಸಲಿದೆ. ಎಲ್ಲಾ ಪ್ರಮುಖ ಸೋಂಕಿನ ತಾಣಗಳಲ್ಲಿ ಮುಂಬೈ ಮತ್ತು ಪುಣೆ ಹೆಚ್ಚು ಹಾನಿಗೊಳಗಾಗಿವೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆ ರಾಷ್ಟ್ರೀಯ ಹಣಕಾಸು ಮಟ್ಟದಲ್ಲಿ ಒಟ್ಟು ಮೌಲ್ಯವರ್ಧಿತ ಬೆಳವಣಿಗೆ ಈ ಹಣಕಾಸು ವರ್ಷದಲ್ಲಿ ಶೇ.0.32ರಷ್ಟು ನಿಧಾನವಾಗಲಿದೆ ಎಂದು ಕೇರ್ ರೇಟಿಂಗ್ಸ್ ವರದಿ ಮಾಡಿದೆ. ಇದು ರಾಷ್ಟ್ರೀಯ ಜಿಡಿಪಿಗೆ ಶೇ.16ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ.

ಹೊಸ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳಿಗೆ ಸುಮಾರು 40,000 ಕೋಟಿ ರೂ.ಗಳ ಜಿವಿಎ ನಷ್ಟವಾಗಲಿದೆ. ದೀರ್ಘಕಾಲದ ನಿರ್ಬಂಧಗಳ ಪರಿಣಾಮವಾಗಿ ಅತಿಯಾದ ಉತ್ಪಾದನಾ ನಷ್ಟಗಳು ಸಂಭವಿಸುತ್ತವೆ. ಅರ್ಥಶಾಸ್ತ್ರಜ್ಞರು 2021-22 ಹಣಕಾಸು ವರ್ಷದಲ್ಲಿ ಭಾರತದ ಶೇ.11ರಷ್ಟು ಬೆಳವಣಿಗೆಯ ಮುನ್ಸೂಚ ನೀಡಿದ್ದರು. ಆದರೆ, ಇತರ ರಾಜ್ಯಗಳಲ್ಲಿನ ಕಠಿಣ ನಿರ್ಬಂಧಗಳಿಂದ ಈ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಹೊಸ ಸಕ್ರಿಯ ಪ್ರಕರಣಗಳ ಸಂಖ್ಯೆ ಮೇ ಅಂತ್ಯದ ವೇಳೆಗೆ ಸ್ಥಿರಗೊಳ್ಳುವ ಸಾಧ್ಯತೆಯಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.