ನವದೆಹಲಿ: ಐದನೇ ಹಂತದ ಲಾಕ್‌ಡೌನ್ ಮುಂದುವರಿಸಿರುವುದನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ.
ಐದನೇ ಹಂತದ ಲಾಕ್‌ಡೌನ್ ಜಾರಿಯ ಮಾರ್ಗಸೂಚಿಗಳು ಹೊರ ಬಿದ್ದ ಬಳಿಕ ಈ ಬಗ್ಗೆ ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಅವರು, ಲಾಕ್‌ಡೌನ್ ಎನ್ನುವುದು ಒಂದು ಪರಿಮಿತ ಕಾಲಕ್ಕೆ ಮಾತ್ರ ಸೀಮಿತವಾಗಬೇಕು. 4ನೇ ಹಂತದ ಲಾಕ್‌ಡೌನ್ ಮುಗಿದಿದೆ. ಅನ್‌ಲಾಕ್ 1.0 ಏಕೆ ಆರಂಭಿಸಬಾರದು ಎಂದು ಪ್ರಶ್ನಾರ್ಥಕವಾಗಿ ಬರೆದುಕೊಂಡಿದ್ದಾರೆ.
ಆರೋಗ್ಯ ರಕ್ಷಣೆಗಾಗಿ ಪದೇ ಪದೆ ಲಾಕ್‌ಡೌನ್ ಮುಂದುವರಿಕೆ ಮಾಡಿದರೇ ಆರ್ಥಿಕತೆಯ ಕುಸಿತಕ್ಕೆ ಹಾದಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ, ಮಾನಸಿಕ ರೋಗಗಳು ಸಂಖ್ಯೆ ಹೆಚ್ಚಳವಾಗುತ್ತದೆ. ಆರೋಗ್ಯ ಬಿಕ್ಕಟ್ಟುಗಳು ತಲೆ ಎತ್ತುವ ಸಾಧ್ಯತೆ ಇದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕಠಿಣ ನಿರ್ಣಯಗಳನ್ನು ಕೈಗೊಳ್ಳುವ ನೀತಿ ನಿರೂಪಕರಿಗೆ ಇದು ತುಂಬಾ ಕಷ್ಟಕರವಾಗಿದೆ. ಲಾಕ್‌ಡೌನ್ ಅವಧಿ ವಿಸ್ತರಣೆಯಿಂದ ಯಾವುದೇ ಪ್ರಯೋಜನೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.