ETV Bharat / business

ಮೋದಿಯ 5 ಟ್ರಿಲಿಯನ್ ಆರ್ಥಿಕತೆ ಕನಸು ಭಗ್ನ... ದೇಶದಲ್ಲಿ 4 ಟ್ರಿಲಿಯನ್ ಡಾಲರ್​ ಸಾಲ

ದೇಶದಲ್ಲಿನ ಸರ್ಕಾರಗಳ, ವ್ಯವಹಾರಗಳ ಮತ್ತು ಮನೆಗಳ ಒಟ್ಟು ಸಾಲವು 300 ಲಕ್ಷ ಕೋಟಿ ರೂ. ಅಥವಾ 4 ಟ್ರಿಲಿಯನ್ ಡಾಲರ್‌ ನಷ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾರೆ ಸಾಲ ಸುಮಾರು 140 ಲಕ್ಷ ಕೋಟಿ ರೂ., ಎಲ್ಲಾ ರೀತಿಯ ವ್ಯವಹಾರಗಳ ಬಾಕಿ ಅಂದಾಜು 100 ಲಕ್ಷ ಕೋಟಿ ರೂ. ಹಾಗೂ ಮನೆಗಳು ಹೊಂದಿರುವ ಸಾಲ ಸುಮಾರು 50 ಲಕ್ಷ ಕೋಟಿ ರೂ.ಯಷ್ಟಿದೆ ಎಂದು ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.

stridently businesses
ವ್ಯವಹಾರದ ಬಿಕ್ಕಟ್ಟು
author img

By

Published : Apr 23, 2020, 12:02 AM IST

ನವದೆಹಲಿ: ಕೋವಿಡ್ -19 ಬಿಕ್ಕಟ್ಟು ಮತ್ತು ಆರ್ಥಿಕ ಲಾಕ್‌ಡೌನ್ ಸಾಲದಾತರು, ವ್ಯವಹಾರಗಳಿಗೆ ಅತ್ಯಂತ ಕಠಿಣ ಸವಾಲೊಡ್ಡಿ ಸರ್ಕಾರಗಳ ಹಣಕಾಸಿನ ವೆಚ್ಚ ಹೆಚ್ಚಿಸಿದೆ ಎಂದು ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್​​ ಹೇಳಿದ್ದಾರೆ.

ಬ್ಯಾಂಕ್​ ಮತ್ತು ಬ್ಯಾಂಕೇತರ ಸಾಲಗಾರರನ್ನು ಹಿಂಭಾಗ ಗಿರಕಿ ಹೊಡೆಯುವಂತೆ (ಟೈಲ್‌ಸ್ಪಿನ್‌) ಮಾಡಿ ಎಸೆದಿದೆ. ಸಾರಿಗೆ, ಪ್ರಯಾಣ, ಮನರಂಜನೆ, ಕ್ರೀಡೆ ಸೇರಿದಂತೆ ಹಲವಾರು ವ್ಯವಹಾರಗಳಿಗೆ ಮಾರಣಾಂತಿಕ ಹೊಡೆತ ನೀಡುತ್ತಿದೆ. ಇದು ಕಾರ್ಯನಿರ್ವಹಿಸದ ಸ್ವತ್ತುಗಳಲ್ಲಿ ತೀವ್ರ ಪ್ರಚೋದನೆ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.

ಕ್ರೆಡಿಟ್ ಪೂರೈಕೆದಾರರಾದ ಬ್ಯಾಂಕ್​ ಮತ್ತು ಬ್ಯಾಂಕೇತರರ ಸಮಾನವಾಗಿ ಕಾರ್ಯನಿರ್ವಹಿಸದ ಸಾಲಗಳಲ್ಲಿ ಗಮನಾರ್ಹವಾಗಿ ತೀಕ್ಷ್ಣವಾದ ಪರಿಸ್ಥಿತಿ ಸನ್ನಿಹಿತವಾಗಿದೆ ಎಂದು ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್ -19 ಬಿಕ್ಕಟ್ಟು ಉಂಟಾಗುವ ಮೊದಲೇ ವ್ಯವಹಾರಗಳಿಗೆ ಸಾಲದ ಶೇ 15ರಷ್ಟು ಅಥವಾ ಸುಮಾರು 15 ಲಕ್ಷ ಕೋಟಿ ರೂ. ಇದಿತ್ತು. ಕಾರ್ಯನಿರ್ವಹಿಸದ ವ್ಯಾಪಾರ ಸಾಲ ಸುಮಾರು 30 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಂಡರೆ ಆಶ್ಚರ್ಯವೇನಿಲ್ಲ ಎಂದು ಗರ್ಗ್ ಹೇಳಿದರು.

ಆರ್ಥಿಕ ಲಾಕ್‌ಡೌನ್ ಹಲವು ಹೊಡೆತಗಳನ್ನು ನೀಡುತ್ತಿದೆ. ಅನಿವಾರ್ಯವಲ್ಲದ ವ್ಯವಹಾರಗಳು ನಷ್ಟ ಅನುಭವಿಸಲಿವೆ. ಇದರಿಂದ ಅವರ ಖಚಿತವಾಗಿ ತಮ್ಮ ಕಾರ್ಯನಿರತ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್​) ಕಳೆದುಕೊಳ್ಳುವರು. ಅನೇಕ ವ್ಯವಹಾರಗಳಿಗೆ ಹೆಚ್ಚುವರಿ ವರ್ಕಿಂಗ್ ಕ್ಯಾಪಿಟಲ್​ನ ಅಗತ್ಯವಿರುತ್ತದೆ ಎಂದು ಬರೆದಿದ್ದಾರೆ.

ಹಲವು ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಕೋವಿಡ್ -19 ಅಪಾಯದ ಮುಕ್ತವಾಗಿಸಲು ಹೆಚ್ಚುವರಿ ಹೂಡಿಕೆ ಮಾಡಬೇಕಾಗುತ್ತದೆ. ಕೆಲವು ವ್ಯವಹಾರಗಳು ಹೊಸ ಅಥವಾ ವರ್ಧಿತ ಅವಕಾಶ ಸೆರೆಹಿಡಿಯಲು ಹೆಚ್ಚುವರಿ ಹೂಡಿಕೆಗಳನ್ನು ಮಾಡುತ್ತವೆ.

ವ್ಯವಹಾರಗಳನ್ನು ಪುನರುಜ್ಜೀವನಗೊಳಿಸಲು, ಕೋವಿಡ್ -19 ಅಪಾಯ ನಿರ್ವಹಿಸಲು, ಹೆಚ್ಚಿನ ಕಾರ್ಯನಿರತ ಬಂಡವಾಳ ಕಾಪಾಡಿಕೊಳ್ಳಲು, ವ್ಯವಹಾರಗಳ ಪುನರ್ರಚನೆಗೆ ಹೂಡಿಕೆ ಮಾಡಲು ಸಾಮಾನ್ಯ ವಾರ್ಷಿಕ ಅಗತ್ಯಕ್ಕಿಂತ ಹೆಚ್ಚಿನ ಮತ್ತು ಸುಮಾರು 10 ಲಕ್ಷ ಕೋಟಿ ರೂ. ಅಗತ್ಯವಿದೆ ಎಂದಿದ್ದಾರೆ.

ಗಾರ್ಗ್ ಪ್ರಕಾರ, ದೇಶದಲ್ಲಿನ ಸರ್ಕಾರಗಳ, ವ್ಯವಹಾರಗಳ ಮತ್ತು ಮನೆಗಳ ಒಟ್ಟು ಸಾಲವು 300 ಲಕ್ಷ ಕೋಟಿ ರೂ. ಅಥವಾ 4 ಟ್ರಿಲಿಯನ್ ಡಾಲರ್‌ ನಷ್ಟಿದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾರೆ ಸಾಲ ಸುಮಾರು 140 ಲಕ್ಷ ಕೋಟಿ ರೂ., ಎಲ್ಲಾ ರೀತಿಯ ವ್ಯವಹಾರಗಳ ಬಾಕಿ ಅಂದಾಜು 100 ಲಕ್ಷ ಕೋಟಿ ರೂ. ಹಾಗೂ ಮನೆಗಳು ಹೊಂದಿರುವ ಸಾಲ ಸುಮಾರು 50 ಲಕ್ಷ ಕೋಟಿ ರೂ.ಯಷ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.