ETV Bharat / business

ಸಂಕಷ್ಟದ ವ್ಯವಹಾರಗಳ ರಕ್ಷಣೆಗೆ ಕಾರ್ಮಿಕರ ಕಾನೂನು ಬಲಿ: ಐಎಸ್ಎಫ್ ಶ್ಲಾಘನೆ - ಲಾಕ್​ಡೌನ್ ಬಿಕ್ಕಟ್ಟಲ್ಲಿ ವ್ಯವಹಾರಗಳು

ಉದ್ಯಮಗಳು ಬಿಕ್ಕಟ್ಟಿನಿಂದ ಹೊರಬರಲು ಮತ್ತು ಅವರ ಹೂಡಿಕೆಗಳನ್ನು ಹೆಚ್ಚಿಸಲು ಇದು ನೆರವಾಗಲಿದೆ. ಮುಂದಿನ ಮೂರು ವರ್ಷಗಳವರೆಗೆ ಹಲವಾರು ಕಾರ್ಮಿಕ ಕಾನೂನು ನಿಬಂಧನೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಇಂಡಿಯಾ ಸ್ಟಾಫಿಂಗ್ ಫೆಡರೇಷನ್ ಸ್ವಾಗತಿಸುತ್ತದೆ.

Labour laws
ಕಾರ್ಮಿಕರ ಕಾನೂನು
author img

By

Published : May 11, 2020, 5:33 PM IST

Updated : May 11, 2020, 5:46 PM IST

ನವದೆಹಲಿ: ಕೋವಿಡ್​ -19 ಬಿಕ್ಕಟ್ಟಿನಿಂದ ಪೀಡಿತವಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸಲು ಮುಂದಿನ ಮೂರು ವರ್ಷಗಳವರೆಗೆ ಕೆಲವು ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸ್ಥಗಿತಗೊಳಿಸುವ ಕುರಿತ ಕೆಲವು ರಾಜ್ಯಗಳ ನಿರ್ಧಾರವನ್ನು ಐಎಸ್‌ಎಫ್ ಒಕ್ಕೂಟ ಶ್ಲಾಘಿಸಿದೆ.

ಸರಳೀಕೃತ ಕಾರ್ಮಿಕ ಕಾನೂನುಗಳು ವೇಗದ ಬೆಳವಣಿಗೆ ಮತ್ತು ನೇಮಕಾತಿಯನ್ನು ಮುಂದೂಡುತ್ತವೆ. ಇದು ಉದ್ಯೋಗದಾತರಿಗೆ ಅವಕಾಶಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಇಂಡಿಯಾ ಸ್ಟಾಫಿಂಗ್ ಫೆಡರೇಷನ್ (ಐಎಸ್ಎಫ್) ಹೇಳಿದೆ.

ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತಮ್ಮ ರಾಜ್ಯಗಳಿಗೆ ಹೂಡಿಕೆಯನ್ನು ಆಕರ್ಷಿಸಲು ಕಾರ್ಮಿಕ ಕಾನೂನುಗಳ ಅವಕಾಶ ಪಡೆಯುತ್ತಿವೆ ಎಂದು ಐಎಸ್ಎಫ್ ಅಧ್ಯಕ್ಷ ಲೋಹಿತ್ ಭಾಟಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಯಕ್ಕೆ ಅನುಗುಣವಾಗಿ ಕಾರ್ಮಿಕ ಕಾನೂನು ಸಡಿಲಿಕೆ ಪರಿಚಯಿಸುವ ಮೂಲಕ ಹೂಡಿಕೆದಾರರಿಗೆ ಆಕರ್ಷಕಣೆತ ರಾಜ್ಯಗಳಾಗಿವೆ. ವ್ಯಾಪಾರ ಮಾಡುವ ಸುಲಭತೆ ಉತ್ತೇಜಿಸುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರಗಳು ಕ್ಯಾಬಿನೆಟ್ ಸಭೆ ನಡೆಸಿ ಬಹುಶಃ ಇದನ್ನು ಆರ್ಡಿನೆನ್ಸ್ ಮಾರ್ಗದ ಮೂಲಕ ಅನುಷ್ಠಾನಕ್ಕೆ ತರಬಹುದು.

ಸುಮಾರು 70 ವರ್ಷಗಳಿಂದ ಕೇಂದ್ರ ತನ್ನ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಆಗಿಲ್ಲ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಕೇತಗಳಿಗೆ ಇಳಿಸಲು ಪ್ರಯತ್ನಿಸಿದೆ. ಆದರೆ, ರಾಜ್ಯ ಸರ್ಕಾರಗಳು ಪ್ರಸ್ತುತ ಫಲಿತಾಂಶಗಳ ಮೇಲೆ ಇದನ್ನು ಸಾಧಿಸುವ ಸಾಧ್ಯತೆ ದಟ್ಟವಾಗಿವೆ ಎಂದು ಭಾಟಿಯಾ ಹೇಳಿದ್ದಾರೆ.

Last Updated : May 11, 2020, 5:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.