ETV Bharat / business

ಇ-ಪಾವತಿಗಳ ಮೇಲಿನ ಶುಲ್ಕಗಳಿಗೆ ಬಿಗ್ ಬ್ರೇಕ್.. ಜ.1ರ ಬಳಿಕ ವಿಧಿಸಿದ್ದ ಶುಲ್ಕಗಳು ವಾಪಸ್​.. - ಯುಪಿಐ ವಹಿವಾಟುಗಳು

ಡಿಜಿಟಲ್ ಪಾವತಿ ಉತ್ತೇಜಿಸಲು 2020ರ ಜನವರಿ 1ರಿಂದ ರುಪೇ ಮತ್ತು ಯುಪಿಐ ಪ್ಲಾಟ್‌ಫಾರ್ಮ್‌ಗಳ ವಹಿವಾಟಿನ ಮೇಲೆ ಯಾವುದೇ ಎಂಡಿಆರ್ ಶುಲ್ಕ ಅನ್ವಯಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಡಿಸೆಂಬರ್​​ನಲ್ಲಿ ಘೋಷಿಸಿದ್ದರು..

UPI transactions
ಇ-ಪಾವತಿ
author img

By

Published : Sep 4, 2020, 9:56 PM IST

ನವದೆಹಲಿ : ನಿಧಾನವಾಗಿ ಹಣದಿಂದ ದೂರ ಸರಿಯುತ್ತಿರುವ ಆರ್ಥಿಕತೆಯಲ್ಲಿ ಡಿಜಿಟಲ್ ಪಾವತಿ ಮತ್ತಷ್ಟು ಹೆಚ್ಚಳಕ್ಕೆ ಕೇಂದ್ರ ಉತ್ತೇಜಿಸುತ್ತಿದೆ. ಸರ್ಕಾರವು ಈ ವಾರದ ಆರಂಭದಲ್ಲಿ ಬ್ಯಾಂಕ್​ಗಳು, ಗ್ರಾಹಕರಿಗೆ ಏಕೀಕೃತ ಪಾವತಿ ಇಂಟರ್​ಫೇಸ್ (ಯುಪಿಐ) ಆಧಾರಿತ ವಹಿವಾಟುಗಳಿಗೆ ಶುಲ್ಕ ವಿಧಿಸುವಂತಿಲ್ಲ ಎಂದು ಪುನರುಚ್ಚರಿಸಿತು.

ಪಾವತಿ ಅಥವಾ ಹಣ ವರ್ಗಾವಣೆಗೆ ಯುಪಿಐ ಸೌಲಭ್ಯ ಬಳಸುವ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚ ಭರಿಸದೆ ವಹಿವಾಟು ನಡೆಸಬಹುದಾಗಿದೆ. ರುಪೇ ಕಾರ್ಡ್, ಭೀಮ್​ನಂತಹ ಯುಪಿಐ ಮೂಲಕ ವಹಿವಾಟು ನಡೆಸಿದ್ದಕ್ಕೆ ಶುಲ್ಕ ವಿಧಿಸಿದ್ರೆ, ವಾಪಸ್ ಮಾಡುವಂತೆ ಬ್ಯಾಂಕ್​ಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಜನವರಿ 1ರ ಬಳಿಕ ಯುಪಿಐ ವ್ಯವಹಾರಕ್ಕೆ ಇದು ಅನ್ವಯವಾಗಲಿದೆ. ಇದಲ್ಲದೆ, ಎಲೆಕ್ಟ್ರಾನಿಕ್ ವಹಿವಾಟು,ಇ-ಪೇಮೆಂಟ್ ವಿಧಾನದಲ್ಲಿ ಹೆಚ್ಚುವರಿ ಶುಲ್ಕ ವಿಧಿಸದಂತೆ ಬ್ಯಾಂಕ್​ಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಪ್ರಮುಖ ಸಮಸ್ಯೆ ಏನು? : ಡಿಜಿಟಲ್ ಪಾವತಿ ಉತ್ತೇಜಿಸಲು 2020ರ ಜನವರಿ 1ರಿಂದ ರುಪೇ ಮತ್ತು ಯುಪಿಐ ಪ್ಲಾಟ್‌ಫಾರ್ಮ್‌ಗಳ ವಹಿವಾಟಿನ ಮೇಲೆ ಯಾವುದೇ ಎಂಡಿಆರ್ ಶುಲ್ಕ ಅನ್ವಯಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಡಿಸೆಂಬರ್​​ನಲ್ಲಿ ಘೋಷಿಸಿದ್ದರು. ಕೆಲವು ಖಾಸಗಿ ಬ್ಯಾಂಕ್​ಗಳು ಯುಪಿಐ ಪೀರ್-ಟು-ಪೀರ್ (ಪಿ2ಪಿ) ಪಾವತಿಗಳಿಗೆ (ಅಥವಾ ಹಣ ವರ್ಗಾವಣೆಗೆ) ನಿಗದಿತ ಮಾನದಂಡ ವಿರುದ್ಧವಾಗಿ ಶುಲ್ಕ ವಿಧಿಸುತ್ತಿವೆ ಎಂದು ವರದಿಯಾಗಿದೆ.

ಬ್ಯಾಂಕ್​ಗಳು ಕಾನೂನಿಗೆ ವಿರುದ್ಧ ಹೇಗೆ ಶುಲ್ಕ ವಿಧಿಸುತ್ತವೆ? : ಐಐಟಿ ಬಾಂಬೆಯ ಆಶಿಶ್ ದಾಸ್ ಪ್ರಕಟಿಸಿದ ವರದಿ ಅನ್ವಯ, 'ಯುಪಿಐ ಪಾವತಿಗಳು' ಉಚಿತವಾಗಿದ್ದರೂ ಬ್ಯಾಂಕ್​ಗಳು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಾನೂನನ್ನು ವ್ಯಾಖ್ಯಾನಿಸಿ ವರ್ಗಾವಣೆಗೆ ಶುಲ್ಕ ವಿಧಿಸುತ್ತಿವೆ.

ಯುಪಿಐ ಪಿ2ಪಿ ವಹಿವಾಟಿಗೆ ಬ್ಯಾಂಕ್​ಗಳು ಎಷ್ಟು ಶುಲ್ಕ ವಿಧಿಸುತ್ತಿದ್ದವು?: ಖಾಸಗಿ ಬ್ಯಾಂಕ್​ಗಳಾದ ಹೆಚ್‌ಡಿಎಫ್‌ಸಿ, ಆಕ್ಸಿಸ್, ಐಸಿಐಸಿಐ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ತಮ್ಮ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ಕೇವಲ 20 ಉಚಿತ ಯುಪಿಐ ಪೀರ್-ಟು-ಪೀರ್ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿದೆ. ನಿಗದಿತ ಮಿತಿ ಮೀರಿದ ಪ್ರತಿ ವಹಿವಾಟಿಗೆ 2.5 ರಿಂದ 5 ರೂ. (ಜಿಎಸ್​​ಟಿ ಹೊರತುಪಡಿಸಿ).

ಉದಾಹರಣೆ : ಕೋಟಾಕ್ ಮಹೀಂದ್ರಾ ಬ್ಯಾಂಕ್ ಯುಪಿಐ ವಹಿವಾಟಿಗೆ ರೂ .2.5ರೂ. ಮತ್ತು 1,000 ರೂ.ಗಳ ವಹಿವಾಟಿನ ಮೊತ್ತದ ಮೇಲೆ 5 ರೂ. ವಿಧಿಸಲಿದೆ. ವಹಿವಾಟಿನ ಸಂಖ್ಯೆಯ ಹೆಚ್ಚಳದೊಂದಿಗೆ ಅದು ವಿಧಿಸುವ ದರವು ಹೆಚ್ಚಾಗಬಹುದು.

ಯುಪಿಐ ಪಿ2ಪಿ ವಹಿವಾಟಿನ ಮೇಲಿನ ಶುಲ್ಕಗಳು ಯಾವಾಗ ಪರಿಚಯ?: ಲಾಕ್‌ಡೌನ್ ಅವಧಿಯಲ್ಲಿ ಖಾಸಗಿ ಬ್ಯಾಂಕ್​ಗಳು ಈ ಶುಲ್ಕ ವಿಧಿಸಲು ಪ್ರಾರಂಭಿಸಿದವು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಾವತಿ ವಹಿವಾಟುಗಳ ಸಂಖ್ಯೆ ಅನೇಕ ಪಟ್ಟು ಹೆಚ್ಚಾಯಿತು. ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಈ ಶುಲ್ಕ 2020ರ ಮೇ 3ರಿಂದ ವಿಧಿಸಲು ಪ್ರಾರಂಭಿಸಿದ್ರೆ, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್ ಕ್ರಮವಾಗಿ 2020ರ 1 ಜೂನ್ ಮತ್ತು 2020ರ 1 ಏಪ್ರಿಲ್‌ನಿಂದ ಶುಲ್ಕ ಹೇರತೊಡಗಿದವು.

ಬ್ಯಾಂಕ್​ಗಳು ಈ ಆರೋಪಗಳನ್ನು ಹೇಗೆ ಸಮರ್ಥಿಸುತ್ತಿವೆ? : ಖಾಸಗಿ ಬ್ಯಾಂಕ್​ಗಳು ಕ್ಷುಲ್ಲಕ ಯುಪಿಐ ವಹಿವಾಟು ತಡೆಗಟ್ಟಲು ಈ ಶುಲ್ಕಗಳನ್ನು ಪರಿಚಯಿಸಿವೆ ಎಂದು ಹೇಳುತ್ತವೆ. ಕೆಲವು ಅಪ್ಲಿಕೇಷನ್‌ಗಳು ಪ್ರತಿಫಲಗಳ ಆಮಿಷ ಮತ್ತು ಪ್ರಯೋಜನಗಳ ಮೂಲಕ ಜನರಲ್ಲಿ ಡಿಜಿಟಲ್​ ಹಣ ವರ್ಗಾವಣೆ ಉತ್ತೇಜಿಸುತ್ತಿವೆ. ಇದು ಗ್ರಾಹಕರ ನಡುವೆ ಪಾವತಿ ಹಾಗೂ ಮರುಪಾವತಿಗೆ ಕಾರಣವಾಗುತ್ತಿವೆ. ಪಾವತಿ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.