ETV Bharat / business

ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಕರ್ನಾಟಕ ಬ್ಯಾಂಕ್‌ಗೆ 146 ಕೋಟಿ ರೂ.ಲಾಭ - Karnataka Bank posts net profit of Rs 146.42 cr

ರಾಜ್ಯದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್‌ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ 146 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ..

Karnataka Bank posts net profit of Rs 146.42 cr
ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಕರ್ನಾಟಕ ಬ್ಯಾಂಕ್‌ಗೆ 146 ಕೋಟಿ ರೂ.ಲಾಭ
author img

By

Published : Jan 29, 2022, 12:45 PM IST

ಬೆಂಗಳೂರು : ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಖಾಸಗಿ ಕ್ಷೇತ್ರದ ಕರ್ನಾಟಕ ಬ್ಯಾಂಕ್‌ 146.42 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಈ ಬ್ಯಾಂಕ್‌ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ಪ್ರಮಾಣ ದರ ಶೇ.8.16ರಷ್ಟು ಇದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಕರ್ನಾಟಕ ಬ್ಯಾಂಕ್‌ 135.37 ಕೋಟಿ ರೂಪಾಯಿ ಲಾಭ ಮಾಡಿತ್ತು. ತ್ರೈಮಾಸಿಕದ ಹಣಕಾಸು ಫಲಿತಾಂಶ ಮತ್ತು 9 ತಿಂಗಳ ಅವಧಿ 2021ರ ಡಿಸೆಂಬರ್‌ 31ಕ್ಕೆ ಕೊನೆಗೊಂಡಿದೆ. ಬ್ಯಾಂಕ್‌ನ ಆಡಳಿತ ಮಂಡಳಿ ನಿನ್ನೆ ಸಭೆ ಬಳಿಕ ಸಂಸ್ಥೆಯ ಲಾಭದ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಬ್ಯಾಂಕ್‌ನ ಆಸ್ತಿಯ ಗುಣಮಟ್ಟವೂ ಗಮನಾರ್ಹವಾಗಿ ಸುಧಾರಿಸಿದೆ. 2021ರ ಸೆಪ್ಟೆಂಬರ್‌ನಲ್ಲಿ ಅನುಕ್ರಮ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಒಟ್ಟು ಅನುತ್ಪಾದಕ ಆಸ್ತಿಗಳು (ಜಿಎನ್‌ಪಿಎ) 39 ಮೂಲ ಅಂಶಗಳಿಂದ (ಬಿಪಿಎಸ್) ಶೇ.4.50 ರಿಂದ 4.11ಕ್ಕೆ ತಗ್ಗಿದೆ.

ಹಿಂದಿನ ತ್ರೈಮಾಸಿಕದಲ್ಲಿ ಅನುತ್ಪಾದಕ ಆಸ್ತಿಗಳು 170.60 ಕೋಟಿ ರೂಪಾಯಿ ಇದೆ. ಅದೇ ರೀತಿ ಎನ್‌ಎನ್‌ಪಿಎ ಸಹ ಅನುಕ್ರಮವಾಗಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 39 ಅಂಶಗಳಿಂದ ಶೇ. 2.84 ರಿಂದ 2.45ಕ್ಕೆ ಇಳಿಕೆ ಕಂಡಿದೆ. ಎನ್‌ಎನ್‌ಪಿಎ ಮೊತ್ತವು 186.37 ಕೋಟಿ ಇದೆ.

ಬ್ಯಾಂಕ್ ಡಿಸೆಂಬರ್ 31, 2021ರವರೆಗೆ ಶೇ.5.44ರ ಬೆಳವಣಿಗೆಯೊಂದಿಗೆ 1,33,918.07 ಕೋಟಿ ವಹಿವಾಟು ನಡೆಸಿದೆ. ಶೇ.6.24ರ ಬೆಳವಣಿಗೆಯಿಂದ 78,428.71 ಕೋಟಿ ರೂಪಾಯಿಗಳ ಠೇವಣಿಗಳು ಹಾಗೂ ಶೇ.4.33ರ ಬೆಳವಣಿಗೆಯೊಂದಿಗೆ 55,489.36 ಕೋಟಿ ರೂಪಾಯಿಗಳ ಮುಂಗಡಗಳನ್ನು ಹೊಂದಿದೆ ಎಂದು ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂಎಸ್ ಮಹಾಬಲೇಶ್ವರ ಫಲಿತಾಂಶ ಪ್ರಕಟಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.