ಮುಂಬೈ: ಕೊರೊನಾದ ಲಾಕ್‌ಡೌನ್ ಸಮಯದಲ್ಲಿ ಬ್ಯಾಂಕಿನಲ್ಲಿ ಪಡೆದ ಸಾಲಗಳಿಗೆ ಬಡ್ಡಿ ದರವನ್ನು ಮನ್ನಾ ಮಾಡುವುದರಿಂದ ಠೇವಣಿದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಠೇವಣಿದಾರರ ಸಂಘ (ಎಐಬಿಡಿಎ) ಅಭಿಪ್ರಾಯಪಟ್ಟಿದೆ.
ಬ್ಯಾಂಕ್ನಲ್ಲಿ ಸಾಲದ ಮೇಲೆ ವಿಧಿಸಲಾದ ಬಡ್ಡಿ ದರಗಳನ್ನು ಮನ್ನಾ ಮಾಡಿದರೆ, ಬ್ಯಾಂಕಿನಲ್ಲಿ ಠೇವಣಿ ಇರಿಸಿದ ಠೇವಣಿದಾರರಿಗೆ ತೀವ್ರ ಹೊಡೆತ ಬೀಳಲಿದೆ. ಏಕೆಂದರೆ ಬ್ಯಾಂಕುಗಳು ಅನಿವಾರ್ಯವಾಗಿ ಠೇವಣಿ ಬಡ್ಡಿ ದರಗಳಲ್ಲಿನ ಕಡಿತದ ಮೂಲಕ ತಮ್ಮ ಸಂಭಾವ್ಯ ಅಥವಾ ಬಡ್ಡಿ ಆದಾಯದ ನಿಜವಾದ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತವೆ ಎಂದು ಅದು ಎಐಬಿಬಡಿಎ ಹೇಳಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡಲಾದ ಸಾಲಕ್ಕೆ ಬಡ್ಡಿ ಮನ್ನಾ ಮಾಡಿದರೆ ಮತ್ತು ಸಾಲಗಾರರ ವಿವೇಕಯುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಾವು ತೀವ್ರವಾಗಿ ಚಿಂತಿತರಾಗಿದ್ದೇವೆ ಎಂದು ಸಂಘದ ಕಾರ್ಯದರ್ಶಿ ಅಮಿತಾ ಸೆಹಗಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಬಗ್ಗೆ ಪರಿಶೀಲನೆ ನಡೆಸಿ, ಯಾವುದೇ ರೀತಿಯ ಬಡ್ಡಿ ಮನ್ನಾವನ್ನು ಮಾಡದಂತೆ ಆದೇಶ ನೀಡಬೇಕು ಎಂದಿದ್ದಾರೆ. ಅದಲ್ಲದೆ, ಸಾಲ ಮನ್ನಾ ಮಾಡುವುದರಿಂದಾಗಿ ಆ ಬ್ಯಾಂಕಿನ ಆರ್ಥಿಕತೆಯೂ ಕುಂಠಿತಗೊಳ್ಳುತ್ತದೆ ಹಾಗೂ ಬ್ಯಾಂಕುಗಳ ಎಲ್ಲಾ ವ್ಯವಹಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ಎಐಬಿಡಿಎ ಹೇಳಿದೆ.
ಲಾಕ್ಡೌನ್ನಿಂದಾಗಿ ಕ್ರೆಡಿಟ್ ಬೇಡಿಕೆ ಕೂಡ ಕಡಿಮೆಯಾಗಿದೆ. ಆದ್ರೆ, ಲಾಕ್‌ಡೌನ್ ಸಡಿಲಿಕೆ ನಂತರ ಮತ್ತೆ ಪುನರುಜ್ಜೀವನಗೊಳ್ಳುತ್ತದೆ. ಆರ್‌ಬಿಐನಿಂದ ಲಭ್ಯವಿರುವ ಕಡಿಮೆ ವೆಚ್ಚದ ಹಣವನ್ನು ನಿಯೋಜಿಸಲಾಗುವುದು ಎಂಬ ಕಾರಣಕ್ಕೆ ಠೇವಣಿದಾರರ ಹಣವನ್ನು ಬಳಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.