ETV Bharat / business

'ಉದ್ಯಮ ಕೊರೊನಾಘಾತದಿಂದ ಮೇಲೇಳಲು 10 ಲಕ್ಷ ಕೋಟಿ ರೂ. ಪ್ಯಾಕೇಜ್ ಬೇಕು' - Indian Economy

ಉದ್ಯಮಕ್ಕೆ ಬಾಕಿ ಇರುವ ಎಲ್ಲ ಪಾವತಿಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ಬ್ಯಾಂಕ್​ಗಳಿಗೆ ಆದೇಶಿಸಬೇಕು. ಇದಲ್ಲದೆ ಸಿಜಿಹೆಚ್ಎಸ್, ಇಎಸ್ಐ ಇತ್ಯಾದಿಗಳಿಂದ ಆಸ್ಪತ್ರೆಗಳಿಗೆ ಪಾವತಿ ಸೇರಿದಂತೆ ಮರುಪಾವತಿಯನ್ನು ತಕ್ಷಣವೇ ತೆರವುಗೊಳಿಸಬೇಕು. ಜಿಎಸ್​ಟಿ ಸೇರಿದಂತೆ ಎಲ್ಲ ನ್ಯೂನತೆ ಮತ್ತು ತೆರಿಗೆ ಮರುಪಾವತಿಗಳನ್ನು ತೆಗೆದುಹಾಕಬೇಕು ಎಂದು ಪಿಕ್ಕಿ ಹೇಳಿದೆ.

stimulus package
ಉತ್ತೇಜನ ಪ್ಯಾಕೇಜ್
author img

By

Published : Apr 8, 2020, 7:13 PM IST

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಭಾರತೀಯ ಉದ್ಯಮಕ್ಕೆ ದೇಶದ ಜಿಡಿಪಿಯ ಶೇ 4- 5ರಷ್ಟು ಪಾಲಿನ 9- 10 ಲಕ್ಷ ಕೋಟಿ ರೂ.ಯಷ್ಟು ಪ್ಯಾಕೇಜ್ ಅಗತ್ಯವಿದೆ ಎಂದು ಎಫ್‌ಐಸಿಸಿಐ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಇತರ ದೇಶಗಳು ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ. ಭಾರತದ ಸಾಲದಿಂದ ಜಿಡಿಪಿ ಅನುಪಾತವನ್ನು ನಿರ್ವಹಿಸಬಹುದಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ.

ಶ್ರೇಣಿಕೃತ ಪಿರಮಿಡ್​ನ ಕೆಳಭಾಗದಲ್ಲಿರುವ ಜನರು, ಅನೌಪಚಾರಿಕ ಕಾರ್ಮಿಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಇತರ ಕ್ಷೇತ್ರಗಳಿಗೆ ಈ ಹಣ ವಿನಿಯೋಗಿಸಬೇಕಾಗುತ್ತದೆ ಎಂದು ಹೇಳಿದೆ.

2 ಲಕ್ಷ ಕೋಟಿ ರೂ. ಮೀಸಲಿಟ್ಟು 'ಭಾರತ್ ಸ್ವಾವಲಂಬನೆ ನಿಧಿ' ಸ್ಥಾಪಿಸಲು ಉದ್ಯಮ ಸಂಸ್ಥೆ ಸೂಚಿಸಿದೆ. ಆಮದು ಅವಲಂಬನೆಯ ಉತ್ಪನ್ನಗಳನ್ನು ತಗ್ಗಿಸುವುದು, ಸ್ವಾವಲಂಬಿ ಉದ್ಯಮ ಸಮೂಹಗಳನ್ನು ರಚಿಸಲು, ಬಲವಾದ ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸಲು ಈ ನಿಧಿಯನ್ನು ಬಳಸಬಹುದು ಎಂದಿದೆ.

ವ್ಯವಹಾರಗಳ ಸಂಪೂರ್ಣ ಸ್ಥಗಿತ ಗಮನಿಸಿದರೆ ಇದನ್ನು ಎಚ್ಚರಿಕೆಯಿಂದ ನಿರ್ಣಯಿಸುವ ಅವಶ್ಯಕತೆಯಿದೆ. ಅಗತ್ಯವಿದ್ದರೆ ಸಾಲದ ನಿಷೇಧದ ಸಮಯ ವಿಸ್ತರಿಸಬೇಕು ಎಂದು ಸಲಹೆ ನೀಡಿದೆ.

ಎನ್‌ಪಿಎ ವ್ಯಾಖ್ಯಾನ ಮತ್ತು ಸಾಲ ಪುನಾರಚನೆಯಲ್ಲಿ ಕಠಿಣ ನಿಲುಗಳಿಂದ ಹೊರಬರಬೇಕಿದೆ. ಎನ್‌ಪಿಎ ಗುರುತಿಸುವಿಕೆಯ ಅವಧಿಯನ್ನು 90 ದಿನಗಳಿಂದ ಕನಿಷ್ಠ 360 ದಿನಗಳವರೆಗೆ ವಿಸ್ತರಿಸಬೇಕಿದೆ ಎಂದು ಹೇಳಿದೆ.

ಯಾವುದೇ ದಂಡ ವಿಧಿಸದೇ ಜಿಎಸ್​ಟಿ ಪಾವತಿ ಸೇರಿದಂತೆ ಎಲ್ಲ ತೆರಿಗೆ ಪಾವತಿಗಳನ್ನು ಆರು ತಿಂಗಳವರೆಗೆ ಮುಂದೂಡಬೇಕು ಎಂದು ಸಮೀಕ್ಷೆಯ ಸೂಚಿಸಿದೆ.

ಬ್ಯಾಂಕ್ ಖಾತರಿಗಳನ್ನು ನಗದಾಗಿ ಮಾಡದೆ ಕನಿಷ್ಠ 6 ತಿಂಗಳ ಅವಧಿಗೆ ವಿಸ್ತರಣೆ ನೀಡಬೇಕು. ಇದೇ ಮಾದರಿಯನ್ನು ಒತ್ತಡದ ಆಸ್ತಿ ನಿಧಿಗಳಿಗೂ ವಿಸ್ತರಿಸಬೇಕು ಎಂದು ಶಿಫಾರಸು ಮಾಡಿದೆ.

ಉದ್ಯಮಕ್ಕೆ ಬಾಕಿ ಇರುವ ಎಲ್ಲಾ ಪಾವತಿಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ಬ್ಯಾಂಕ್​ಗಳಿಗೆ ಆದೇಶಿಸಬೇಕು. ಇದಲ್ಲದೆ ಸಿಜಿಹೆಚ್ಎಸ್, ಇಎಸ್ಐ ಇತ್ಯಾದಿಗಳಿಂದ ಆಸ್ಪತ್ರೆಗಳಿಗೆ ಪಾವತಿ ಸೇರಿದಂತೆ ಮರುಪಾವತಿಯನ್ನು ತಕ್ಷಣವೇ ತೆರವುಗೊಳಿಸಬೇಕು. ಜಿಎಸ್​ಟಿ ಸೇರಿದಂತೆ ಎಲ್ಲಾ ನ್ಯೂನತೆ ಮತ್ತು ತೆರಿಗೆ ಮರುಪಾವತಿಗಳನ್ನು ತೆಗೆದುಹಾಕಬೇಕು ಎಂದು ಫಿಕ್ಕಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.