ETV Bharat / business

ಮತ್ತೆ ಗಗನಮುಖಿಯಾದ ನಿರುದ್ಯೋಗ: ನಗರ ಭಾರತಕ್ಕಿಂತ ಗ್ರಾಮೀಣ ಭಾರತದಲ್ಲಿ ಹೆಚ್ಚಳ! - ಭಾರತದಲ್ಲಿ ಉದ್ಯೋಗ

ಆಗಸ್ಟ್​​ ತಿಂಗಳ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳ ಕುಸಿತವು ಗ್ರಾಮೀಣ ಭಾರತದತ್ತ ಕೇಂದ್ರೀಕೃತವಾಗಿದೆ. ಎರಡೂ ಪ್ರದೇಶಗಳಲ್ಲಿ (ನಗರ ಮತ್ತು ಗ್ರಾಮೀಣ) ನಿರುದ್ಯೋಗ ದರವು ಏರಿಕೆಯಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

unemployment
ನಿರುದ್ಯೋಗ
author img

By

Published : Sep 3, 2020, 9:11 PM IST

ನವದೆಹಲಿ: ಚಿಂತಕರ ಚಾವಡಿಯ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ ಜುಲೈನಲ್ಲಿ ಕೋವಿಡ್ ಪೂರ್ವ ಮಟ್ಟಕ್ಕೆ ಕುಸಿದ ನಂತರ ಆಗಸ್ಟ್​ ತಿಂಗಳಲ್ಲಿ ಭಾರತದ ನಿರುದ್ಯೋಗ ದರವು ಮತ್ತೆ ಹೆಚ್ಚಳವಾಗಿದೆ.

ಏಪ್ರಿಲ್ ನಂತರ ನಿರುದ್ಯೋಗ ದರವು ಆಗಸ್ಟ್​ನಲ್ಲಿ ಶೇ 8.4ರಷ್ಟು ಏರಿಕೆಯಾಗಿದೆ ಎಂದು ಸಿಎಂಐಇ ದತ್ತಾಂಶದ ಮೂಲಕ ಸಾಬೀತುಪಡಿಸಿದೆ.

ಆಗಸ್ಟ್​​ ತಿಂಗಳ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳ ಕುಸಿತವು ಗ್ರಾಮೀಣ ಭಾರತದತ್ತ ಕೇಂದ್ರೀಕೃತವಾಗಿದೆ. ಎರಡೂ ಪ್ರದೇಶಗಳಲ್ಲಿ (ನಗರ ಮತ್ತು ಗ್ರಾಮೀಣ) ನಿರುದ್ಯೋಗ ದರವು ಏರಿಕೆಯಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ತುಸು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಿಎಂಐಟಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದರು.

ಆಗಸ್ಟ್​​ ವೇಳೆ ಗ್ರಾಮೀಣ ಭಾರತದಲ್ಲಿ ಉದ್ಯೋಗವು 3.6 ಮಿಲಿಯನ್​ ಕ್ಷೀಣಿಸಿದೆ. ಇದರಿಂದಾಗಿ ಅಲ್ಲಿನ ನಿರುದ್ಯೋಗಿಗಳ ಸಂಖ್ಯೆ 2.8 ದಶಲಕ್ಷಕ್ಕೆ ಏರಿಕೆಯಾಗಿದೆ.

ಉದ್ಯೋಗ ಕಳೆದುಕೊಂಡವರು ಕಾರ್ಮಿಕ ಮಾರುಕಟ್ಟೆ ತೊರೆದಿದ್ದಾರೆ. ಹೀಗಾಗಿ, ಗ್ರಾಮೀಣ ಭಾರತದಲ್ಲಿ ಕಾರ್ಮಿಕ ಬಲವು 0.8 ದಶಲಕ್ಷದಷ್ಟು ಕುಗ್ಗಿದೆ. ಗ್ರಾಮೀಣ ಕಾರ್ಮಿಕ ಬಲ ಕಡಿಮೆ ಆಗುವುದರ ಜೊತೆಗೆ ಉದ್ಯೋಗದಲ್ಲಿ ತೀವ್ರ ಕುಸಿತವು ಆಂತರಿಕ ಒತ್ತಡದ ಸಂಕೇತವಾಗಿದೆ ಎಂದು ವ್ಯಾಸ್ ಅಭಿಪ್ರಾಯಪಟ್ಟರು.

ಸಿಎಂಐಇ ತನ್ನ ಸಂಶೋಧನೆಗಳನ್ನು ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂಜಿಎನ್‌ಆರ್‌ಇಜಿಎಸ್) ಕಂಡುಬರುವ ಉದ್ಯೋಗ ಪ್ರವೃತ್ತಿಗಳೊಂದಿಗೆ ಹೋಲಿಕೆ ಆಗುತ್ತವೆ ಎಂದು ಸೂಚಿಸಿದೆ.

ಈ ವರ್ಷದ ಜೂನ್ ಮತ್ತು ಜುಲೈನಲ್ಲಿ ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಸೃಜಿಸಲಾದ ಉದ್ಯೋಗದ ದಿನಗಳು 2019ರ ಅದೇ ತಿಂಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಆದರೆ, ಆಗಸ್ಟ್‌ನಲ್ಲಿ ಎಂಜಿಎನ್‌ಆರ್‌ಇಜಿಎಸ್ ವ್ಯಕ್ತಿಗತ ದಿನವಾಹಿ ಉದ್ಯೋಗದ ಬೆಳವಣಿಗೆ ಕೇವಲ ಶೇ.14ರಷ್ಟಿದೆ (ವರ್ಷದಿಂದ ವರ್ಷಕ್ಕೆ).

ಎಂಜಿಎನ್‌ಆರ್‌ಇಜಿಎಸ್ ಉದ್ಯೋಗದ ಕುಸಿತವು ಆಗಸ್ಟ್‌ನಲ್ಲಿನ ಕೃಷಿ ಚಟುವಟಿಕೆಗಳಲ್ಲಿನ ಕ್ಷೀಣಿಕೆಯ ಜೊತೆಗೆ ನಂಟು ಹೊಂದಿದೆ. ಜುಲೈ ಅಂತ್ಯದ ವೇಳೆಗೆ ಖಾರಿಫ್ ಬಿತ್ತನೆ ಪ್ರಮಾಣ ಶೇ 83ರಷ್ಟು ಪೂರ್ಣಗೊಂಡಿದೆ. ಆಗಸ್ಟ್‌ ಮಾಸಿಕದಲ್ಲಿ ಶೇ 20ರಷ್ಟಕ್ಕಿಂತ ಕಡಿಮೆ ಬಿತ್ತನೆ ಆಯಿತು.

ನಗರ ಮಾರುಕಟ್ಟೆಗಳಿಂದ ಗ್ರಾಮೀಣ ಭಾಗದತ್ತ ವಲಸೆ ಬಂದಿರುವ ನಗರ ಕಾರ್ಮಿಕರು, ಇದರಿಂದಾಗಿಯೇ ಗ್ರಾಮೀಣದಲ್ಲಿ ನಿರುದ್ಯೋಗ ದರ ಹೆಚ್ಚಳ ಆಗಿರಬಹುದು. ನಗರ ಭಾರತದಲ್ಲಿನ ಉತ್ತಮ ಉದ್ಯೋಗಗಳ ಆಮಿಷಕ್ಕೆ ಒಳಗಾಗಿ ಮತ್ತೆ ಹಿಂದುರುಗಬಹುದು ಎಂದು ವ್ಯಾಸ್ ಅವರು ಅಭಿಮತ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.