ETV Bharat / business

2022ರ ವಿತ್ತೀಯ ವರ್ಷದಲ್ಲಿ ಶೇ.10.1ಕ್ಕೆ ಜಿಗಿಯಲಿರುವ ಭಾರತದ ಜಿಡಿಪಿ : ಇಕ್ರಾ ರೇಟಿಂಗ್ಸ್​ - 2022ರಲ್ಲಿ ಜಿಡಿಪಿ ಅಂದಾಜು

2022ರ ಆರ್ಥಿಕ ವರ್ಷದಲ್ಲಿ ಬಹು-ವೇಗದ ಚೇತರಿಕೆ ನಿರೀಕ್ಷಿಸಲಾಗುತ್ತಿದೆ. ಸಂಪರ್ಕ ಸಾಧನ ಕ್ಷೇತ್ರಗಳ ಚೇತರಿಕೆ, ಗ್ರಾಹಕರ ವಿವೇಚನೆ ಬಳಕೆ ಮತ್ತು ಖಾಸಗಿ ವಲಯದ ಹೂಡಿಕೆಯ ಪ್ರಯಾಸಕರವಾದ ಬೆಳವಣಿಗೆಯು ಕೋವಿಡ್​ ಪೂರ್ವ ಮಟ್ಟ ಸಾಧಿಸಲಿದೆ..

GDP
ಜಿಡಿಪಿ
author img

By

Published : Jan 11, 2021, 6:52 PM IST

ಮುಂಬೈ : 2022ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.10.1ರಷ್ಟು ಏರಿಕೆಯಾಗಲಿದೆ ಎಂದು ದೇಶೀಯ ರೇಟಿಂಗ್ ಏಜೆನ್ಸಿ ಇಕ್ರಾ ಅಂದಾಜಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿಯ ಮೌಲ್ಯವು 2020ರ ಹಣಕಾಸು ವರ್ಷದಲ್ಲಿ ದಾಖಲಾದ ಮಟ್ಟವನ್ನು ಸ್ವಲ್ಪಮಟ್ಟಿಗೆ ಮೀರಿಸುತ್ತದೆ ಎಂದು ಹೇಳಿದೆ.

ಪ್ರಸ್ತುತ ನಡೆಯುತ್ತಿರುವ ಹಣಕಾಸು ವರ್ಷದಲ್ಲಿ (2021ರ) ಶೇ.7.8ರಷ್ಟು ಸಾಂಕ್ರಾಮಿಕ ರೋಗದಿಂದ ಕುಗ್ಗಿದ ನಂತರ, ಭಾರತದ ನೈಜ ಜಿಡಿಪಿ 2022ರ ವಿತ್ತೀಯ ವರ್ಷದಲ್ಲಿ ಶೇ.10.1ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ.

ಕೋವಿಡ್​-19 ಲಸಿಕೆಗಳ ವಿತರಣೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿನ ಸಾಮಾನ್ಯೀಕರಣದಿಂದ ತೀಕ್ಷ್ಣವಾದ ವಿಸ್ತರಣೆ ಕಂಡು ಬರಲಿದೆ ಎಂದು ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ವರದಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿಯ ಆ ಒಂದು ಘೋಷಣೆಗೆ ಗೂಳಿ ಗುಟುರು: ಹಳೆ ದಾಖಲೆ ಕುಟ್ಟಿ ಪುಡಿಪುಡಿ ಮಾಡಿದ ಸೆನ್ಸೆಕ್ಸ್!

2022ರ ಆರ್ಥಿಕ ವರ್ಷದಲ್ಲಿ ಬಹು ವೇಗದ ಚೇತರಿಕೆ ನಿರೀಕ್ಷಿಸಲಾಗುತ್ತಿದೆ. ಸಂಪರ್ಕ ಸಾಧನ ಕ್ಷೇತ್ರಗಳ ಚೇತರಿಕೆ, ಗ್ರಾಹಕರ ವಿವೇಚನೆ ಬಳಕೆ ಮತ್ತು ಖಾಸಗಿ ವಲಯದ ಹೂಡಿಕೆಯ ಪ್ರಯಾಸಕರವಾದ ಬೆಳವಣಿಗೆಯು ಕೋವಿಡ್​ ಪೂರ್ವ ಮಟ್ಟ ಸಾಧಿಸಲಿದೆ ಎಂದರು.

ಭಾರತೀಯ ಜಿಡಿಪಿಯ ಒಟ್ಟು ಮೌಲ್ಯವನ್ನು 2022ರ ಆರ್ಥಿಕ ವರ್ಷದಲ್ಲಿ ನೈಜ ಏರಿಕೆ ತೋರಿಸಲಿವೆ. ಇದು 2020ರ ಹಣಕಾಸು ವರ್ಷದಲ್ಲಿ ದಾಖಲಾದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ನಾಯರ್ ಹೇಳಿದರು.

ಸಿಪಿಐ ಹಣದುಬ್ಬರವು 2022ರ ವಿತ್ತೀಯ ವರ್ಷದಲ್ಲಿ 2021ರಲ್ಲಿನ ಶೇ.4.6ರಿಂದ ಶೇ.6.4ಕ್ಕೆ ಇಳಿಯಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ. ಆದರೆ, ಹಣಕಾಸು ನೀತಿ ಸಮಿತಿಯ (ಎಂಪಿಸಿಯ) ಮಧ್ಯಮ ಗುರಿಯ ಶೇ.4ರಷ್ಟಿದ್ದು ಸತತ ಮೂರನೇ ವರ್ಷವೂ ಮೀರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.