ನವದೆಹಲಿ: ದೇಶದ ಉತ್ಪಾದನಾ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಅಲ್ಪ ಹೆಚ್ಚಾಗಿದ್ದು, ಕಾರ್ಖಾನೆಗಳ ಆರ್ಡರ್ ಮತ್ತು ಉತ್ಪಾದನೆ ದರ ಸಾಧಾರಣ ಮಟ್ಟದಲ್ಲಿ ಇರುವುದರಿಂದ ಬೆಳವಣಿಗೆಯ ಏರಿಕೆ ಕಡಿಮೆಯಾಗಿದೆ ಎಂದು ಮಾಸಿಕ ಸಮೀಕ್ಷೆ ತಿಳಿಸಿದೆ.
ಕಾರ್ಖಾನೆಗಳ ಆರ್ಡರ್ಗಳು ಹಾಗೂ ಉತ್ಪಾದನಾ ದರ ಕ್ಷೀಣಿಸಿದ್ದು 2 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆಯಾಗಿಯು ನವೆಂಬರ್‌ನಲ್ಲಿ ಅಲ್ಪ ಚೇತರಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ 50.6 ನಷ್ಟು ಇದದ್ದು ನವೆಂಬರ್‌ನಲ್ಲಿ 51.2ಕ್ಕೆ ಏರಿದೆ. ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಕ್ಷೇತ್ರದ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಸೂಚಿಸುತ್ತದೆ ಎಂದು ಐಹೆಚ್ಎಸ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ (ಪಿಎಂಐ) ಸಮೀಕ್ಷೆ ಮೂಲಕ ತಿಳಿಸಿದೆ.
ಐಹೆಚ್ಎಸ್ ಮಾರ್ಕೆಟ್ ಸಮೀಕ್ಷೆ ಉತ್ಪಾದನಾ ಕ್ಷೇತ್ರ ಅಕ್ಟೋಬರ್ ನಲ್ಲಿಯೂ ಕುಗ್ಗಿದ್ದು, ತತ್ಪರಿಣಾಮವಾಗಿ ಉದ್ಯೋಗ ಸೃಷ್ಟಿಯೂ 6 ತಿಂಗಳಲ್ಲೇ ಅತ್ಯಂತ ಕಡಿಮೆಯಾಗಿದೆ.