ETV Bharat / business

ಭಾರತದ ವಿದೇಶಿ ವಿನಿಮಯ ಸಂಗ್ರಹ 23,675 ಕೋಟಿ ರೂ. ಹೆಚ್ಚಳ

author img

By

Published : Jul 17, 2020, 10:39 PM IST

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಸಂಖ್ಯೆ ಪ್ರಕಾರ, ಜುಲೈ 3ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು 513.254 ಬಿಲಿಯನ್ ಡಾಲರ್​ನಿಂದ 516.362 ಬಿಲಿಯನ್​ ಡಾಲರ್​ಗೆ ಏರಿಕೆಯಾಗಿದೆ.

India's forex reserves
ವಿದೇಶಿ ವಿನಿಮಯ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಜುಲೈ 10ಕ್ಕೆ ಕೊನೆಗೊಂಡ ವಾರದಲ್ಲಿ 3.108 ಬಿಲಿಯನ್​ ಡಾಲರ್ ಹೆಚ್ಚಳವಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿಸಂಖ್ಯೆ ಪ್ರಕಾರ, ಜುಲೈ 3ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು 513.254 ಬಿಲಿಯನ್ ಡಾಲರ್​ನಿಂದ 516.362 ಬಿಲಿಯನ್​ ಡಾಲರ್​ಗೆ ಏರಿಕೆಯಾಗಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಆಸ್ತಿಗಳು (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗಿನ ದೇಶದ ಮೀಸಲು ಸ್ಥಾನವನ್ನು ಒಳಗೊಂಡಿದೆ.

ವಾರದ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎಗಳು 2.372 ಬಿಲಿಯನ್‌ ಡಾಲರ್​ನಿಂದ 475.635 ಬಿಲಯನ್​ ಡಾಲರ್​ಗೆ ಏರಿದೆ.

ದೇಶದ ಚಿನ್ನದ ಸಂಗ್ರಹದ ಮೌಲ್ಯವು 712 ಬಿಲಿಯನ್​ ಡಾಲರ್​ನಿಂದ 34.729 ಬಿಲಿಯನ್​ ಡಾಲರ್​ಗೆ ತಲುಪಿದೆ. ಎಸ್‌ಡಿಆರ್ ಮೌಲ್ಯವು 5 ಮಿಲಿಯನ್‌ ಡಾಲರ್​ನಷ್ಟು ಏರಿಕೆಯಾಗಿ 1.453 ಬಿಲಿಯನ್‌ ಡಾಲರ್​ಗೆ ಏರಿದೆ. ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು 19 ಮಿಲಿಯನ್‌ ಡಾಲರ್​ನಿಂದ 4.545 ಬಿಲಿಯನ್‌ ಡಾಲರ್​ಗೆ ಏರಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.