ನವದೆಹಲಿ: ಕಳೆದ ವರ್ಷ ಮೈನಸ್ ಶೇ 7.1ರಷ್ಟಿದ್ದ ಭಾರತದ ಆರ್ಥಿಕತೆಯು 2021ರಲ್ಲಿ ಶೇ 12ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹತ್ತಿರದ ಅವಧಿಯ ಭವಿಷ್ಯವು ಹೆಚ್ಚು ಅನುಕೂಲಕರವಾಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ಹೇಳಿದೆ.
ಹಿಂದಿನ ಮೂರು ತಿಂಗಳಲ್ಲಿ ಶೇ 7.5ರಷ್ಟು ಸಂಕೋಚನದ ನಂತರ ಡಿಸೆಂಬರ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ 0.4ರಷ್ಟಿತ್ತು. ಇದು ಭಾರತದ ಸಮೀಪದ ಅವಧಿಯ ಭವಿಷ್ಯವು ಹೆಚ್ಚು ಅನುಕೂಲಕರಗೊಳಿಸಿದೆ ಎಂದಿದೆ.
ನಿರ್ಬಂಧಗಳನ್ನು ಸಡಿಲಿಸಿದಾಗಿನಿಂದ ದೇಶೀಯ ಮತ್ತು ಬಾಹ್ಯ ಬೇಡಿಕೆಯು ಸರಿಹಾದಿಗೆ ಬರುತ್ತಿದೆ. ಇದು ಇತ್ತೀಚಿನ ತಿಂಗಳಲ್ಲಿ ಉತ್ಪಾದನಾ ಪ್ರಮಾಣ ಸುಧಾರಿಸಲು ಕಾರಣವಾಗಿದೆ.
ಖಾಸಗಿ ಬಳಕೆ ಮತ್ತು ವಸತಿ ರಹಿತ ಹೂಡಿಕೆಯು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಮೇಲ್ಮುಖವಾಗಲಿದೆ. ಇದು 2021ರಲ್ಲಿ ದೇಶೀಯ ಬೇಡಿಕೆಯ ಪುನರುಜ್ಜೀವನ ಬಲಪಡಿಸುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: 2020ರಲ್ಲಿ 7.5 ಕೋಟಿ ಭಾರತೀಯರನ್ನು ಬಡತನ ರೇಖೆಗಿಂತ ಕಡು ಬಡತನಕ್ಕೆ ತಳ್ಳಿದ ಕೊರೊನಾ!
2021ರ ಕ್ಯಾಲೆಂಡರ್ ವರ್ಷದಲ್ಲಿ ಮೂಡಿಸ್ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ 12ರಷ್ಟು ಅಂದಾಜಿಸಿದೆ. ಈ ಮುನ್ಸೂಚನೆಯು ನೈಜ ಜಿಡಿಪಿಗೆ ಸಮನಾಗಿರುತ್ತದೆ. 2021ರ ಅಂತ್ಯದ ವೇಳೆಗೆ ಕೋವಿಡ್-19 ಮಟ್ಟಕ್ಕಿಂತ (2020ರ ಮಾರ್ಚ್) ಶೇ 4.4ರಷ್ಟು ಅಥವಾ 2020ರ ಡಿಸೆಂಬರ್‌ನಲ್ಲಿನ ಜಿಡಿಪಿ ಮಟ್ಟಕ್ಕಿಂತ ಶೇ 5.7ರಷ್ಟು ಹೆಚ್ಚಾಗಲಿದೆ ಎಂದಿದೆ.
ವಿತ್ತೀಯ ಮತ್ತು ಹಣಕಾಸಿನ ನೀತಿಗಳು ಬೆಳವಣಿಗೆಗೆ ಅನುಕೂಲಕರವಾಗಿ ಉಳಿಯುತ್ತಿವೆ. ಬೆಂಚ್‌ಮಾರ್ಕ್ ಮರುಖರೀದಿ ದರವನ್ನು ಕಾಯ್ದುಕೊಳ್ಳುತ್ತಿರುವ ಪ್ರಸ್ತುತ ಶೇ 4ಕ್ಕಿಂತ ಈ ವರ್ಷ ಯಾವುದೇ ಹೆಚ್ಚುವರಿ ದರ ಕಡಿತವನ್ನು ನಾವು ನಿರೀಕ್ಷಿಸುವುದಿಲ್ಲ ಎಂದು ಹೇಳಿದೆ.