ಮುಂಬೈ : ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಸರಕುಗಳ ಆಮದು ಕಡಿಮೆಯಾದ ಕಾರಣ ದೇಶದ ಚಾಲ್ತಿ ಖಾತೆ ಮಿಗತೆ ಜೂನ್ ತ್ರೈಮಾಸಿಕದಲ್ಲಿ 19.8 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ 3.9ಕ್ಕೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಮಿಗತೆ 0.6 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ0.1ರಷ್ಟಿದ್ರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ 15 ಬಿಲಿಯನ್ ಡಾಲರ್ ಅಥವಾ ಜಿಡಿಪಿಯ ಶೇ.2.1ರಷ್ಟಿತ್ತು.
2020-21ರ ಪ್ರಥಮ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆಯಲ್ಲಿನ ಉಳಿತಾಯ ಮೊತ್ತವು ವ್ಯಾಪಾರ ಕೊರತೆಯನ್ನು 10.0 ಶತಕೋಟಿ ಡಾಲರ್‌ಗೆ ತೀವ್ರವಾಗಿ ಕುಗ್ಗಿಸಿದೆ. ವರ್ಷದಿಂದ ವರ್ಷಕ್ಕೆ ರಫ್ತಿಗೆ ಹೋಲಿಸಿದ್ರೆ ಸರಕುಗಳ ಆಮದಿನ ತೀವ್ರ ಕುಸಿತದಿಂದಾಗಿ ಇದು ಸಂಭವಿಸಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.