ನವದೆಹಲಿ: 2020-21ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಬಜೆಟ್ ಹಣಕಾಸಿನ ಕೊರತೆಯು 9.13 ಲಕ್ಷ ಕೋಟಿ ರೂ. ಅಥವಾ ಬಜೆಟ್ ಅಂದಾಜಿನ (ಬಿಇ) ಶೇ 114.8 ರಷ್ಟಿದೆ.
2020-21ರ ಕೊರತೆ - ಆದಾಯ ಮತ್ತು ಖರ್ಚಿನ ನಡುವಿನ ವ್ಯತ್ಯಾಸ ಕಳೆದ ಹಣಕಾಸು ವರ್ಷದಲ್ಲಿ ಪರಿಷ್ಕೃತ 7.66 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ 7.96 ಲಕ್ಷ ಕೋಟಿ ರೂ.ನಷ್ಟಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿಯ ಅಂಕಿ - ಅಂಶಗಳ ಪ್ರಕಾರ, ಹಿಂದಿನ ಹಣಕಾಸು ವರ್ಷದ ಇದೇ ತಿಂಗಳಿನಲ್ಲಿ ಹಣಕಾಸಿನ ಕೊರತೆಯು ಆ ವರ್ಷದ ಗುರಿಯ ಶೇ 92.6 ರಷ್ಟಿತ್ತು. ಕೇಂದ್ರ ಸರ್ಕಾರದ ಒಟ್ಟು ಖರ್ಚು 14.79 ಲಕ್ಷ ಕೋಟಿ ರೂ. (ಬಿಇ ಶೇ 48.6) ಆಗಿದ್ದರೆ, ಒಟ್ಟು ಸ್ವೀಕೃತಿ 5.65 ಲಕ್ಷ ಕೋಟಿ ರೂ.ನಷ್ಟಿದೆ.