ನವದೆಹಲಿ: ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಮೂರನೇ ತ್ರೈಮಾಸಿಕದಲ್ಲಿ ಸಣ್ಣ ಸಕಾರಾತ್ಮಕ ಬೆಳವಣಿಗೆ ದಾಖಲಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ.
ಹಣದುಬ್ಬರದ ವಿರುದ್ಧ ಹೋರಾಟದ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕಾಗಿ ಇರುವುದರಿಂದ ಪ್ರಾರಂಭಿಕ ಬೆಳವಣಿಗೆಯ ಪ್ರಚೋದನೆಗಳಿಗೆ ಧಕ್ಕೆ ಇರುವುದಿಲ್ಲ ಎಂದು ಡಿಸೆಂಬರ್‌ನಲ್ಲಿ ಆರ್‌ಬಿಐ ಹೊರಡಿಸಿದ ಆರ್ಥಿಕ ವರದಿಯ ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಆರ್ಥಿಕತೆಯು ಕೋವಿಡ್ -19ರ ಆಳವಾದ ಪ್ರಪಾತದಿಂದ ಹೊರಬರುತ್ತಿದೆ. ಹೆಚ್ಚಿನ ಮುನ್ಸೂಚನೆಗಳನ್ನು ವೇಗವಾಗಿ ಪ್ರತಿಫಲಿಸುತ್ತಿವೆ. ಏನೆಲ್ಲ ಆರ್ಥಿಕ ತಲೆನೋವುಗಳು ಇದ್ದರೂ ಎಲ್ಲ ಪಾಲುದಾರರ ಅಚಲ ಪ್ರಯತ್ನಗಳು ಭಾರತವನ್ನು ವೇಗವಾಗಿ ಬೆಳವಣಿಗೆಯ ಪಥದಲ್ಲಿ ಸಾಗಿಸಬಹುದು ಎಂದು ವರದಿ ಹೇಳಿದೆ.
ಇದನ್ನೂ ಓದಿ: ರಿಲಯನ್ಸ್, ಹಣಕಾಸು ಷೇರುಗಳ ಗಳಿಕೆ: ಸೆನ್ಸೆಕ್ಸ್, ನಿಫ್ಟಿ ಅಂಶಗಳಲ್ಲಿ ಏರಿಕೆ
ಕೃಷಿ ಮತ್ತು ಉತ್ಪಾದನಾ ಚಟುವಟಿಕೆಯ ಪ್ರಗತಿಯು 2020ರ ನವೆಂಬರ್ನಲ್ಲಿ ಸುಧಾರಣೆ ಆಗುತ್ತಿರುವುದು ಕಂಡು ಬಂದಿದೆ. ಜೂನ್-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ವರ್ಷದಿಂದ ವರ್ಷಕ್ಕೆ ಮೈನಸ್ ಶೇ 7.5ರಷ್ಟು ಸಂಕುಚಿತಗೊಂಡಿದೆ. ಹಿಂದಿನ ತ್ರೈಮಾಸಿಕದಲ್ಲಿ ಮೈನಸ್ ಶೇ 23.9ರಷ್ಟಿತ್ತು.
ತನ್ನ ಕೊನೆಯ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಜುಲೈ- ಸೆಪ್ಟೆಂಬರ್‌ನಲ್ಲಿ ಜಿಡಿಪಿ ಸಂಕೋಚನ ತಗ್ಗಿಸಿದ ನಂತರ ವೇಗವಾಗಿ ಚೇತರಿಸಿಕೊಳ್ಳುವ ಹಿಂದಿನ ಚಿಹ್ನೆಗಳ ಆದಾರದ ಮೇಲೆ 2021ರ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆ ಮೈನಸ್ ಶೇ 7.5ಕ್ಕೆ ಪರಿಷ್ಕರಿಸಿತು. ಇದು ಹಿಂದಿನ ಅಂದಾಜು ಮೈನಸ್ ಶೇ 9.5ರಿಂದ ಮೇಲ್ಮುಖವಾಗಿ ಪರಿಷ್ಕರಿಸಲಾಗಿತ್ತು.