ETV Bharat / business

ಭಾರತದ ಆರ್ಥಿಕತೆ ತಜ್ಞರ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ: ಹಣಕಾಸು ಕಾರ್ಯದರ್ಶಿ ತರುಣ್ ಬಜಾಜ್ - ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಹಣಕಾಸು ಕಾರ್ಯದರ್ಶಿ

ಭಾರತದ ಆರ್ಥಿಕತೆಯು ಎಲ್ಲಾ ನಿಯತಾಂಕಗಳಲ್ಲಿ ಸುಧಾರಣೆಯನ್ನು ನಾವು ಕಾಣುತ್ತಿದ್ದೇವೆ. ನವೆಂಬರ್ ತಿಂಗಳಲ್ಲಿ ಮತ್ತಷ್ಟು ಸುಧಾರಣೆ ನಿರೀಕ್ಷಿಸುತ್ತಿದ್ದು, ಇದು ಹೀಗೆ ಮುಂದುವರಿಯಬೇಕು. ಆಶಾದಾಯಕವಾಗಿ ಆರ್ಥಿಕತೆಯು ಬೆಳವಣಿಗೆಯ ಹಳಿಗಳ ಮೇಲೆ ಹಿಂತಿರುಗಬೇಕು. ಇದು ಬಹಳಷ್ಟು ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚಲಿಸುತ್ತಿದೆ ಎಂದು ಹಣಕಾಸು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

Indian economy
ಭಾರತದ ಆರ್ಥಿಕತೆ
author img

By

Published : Nov 3, 2020, 10:42 PM IST

ನವದೆಹಲಿ: ಭಾರತದ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಮತ್ತು ಎಲ್ಲಾ ನಿಯತಾಂಕಗಳು ಸುಧಾರಣೆ ತೋರಿಸಲು ಪ್ರಾರಂಭಿಸಿರುವುದರಿಂದ ಶೀಘ್ರದಲ್ಲೇ ಮತ್ತೆ ಹಳಿಗಳತ್ತ ಸಾಗಲಿದೆ ಎಂದು ಹಣಕಾಸು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಎಲ್ಲಾ ನಿಯತಾಂಕಗಳಲ್ಲಿ ಸುಧಾರಣೆಯನ್ನು ನಾವು ಕಾಣುತ್ತಿದ್ದೇವೆ. ನವೆಂಬರ್ ತಿಂಗಳಲ್ಲಿ ಮತ್ತಷ್ಟು ಸುಧಾರಣೆ ನಿರೀಕ್ಷಿಸುತ್ತಿದ್ದು, ಇದು ಹೀಗೆ ಮುಂದುವರಿಯಬೇಕು. ಆಶಾದಾಯಕವಾಗಿ ಆರ್ಥಿಕತೆಯು ಬೆಳವಣಿಗೆಯ ಹಳಿಗಳ ಮೇಲೆ ಹಿಂತಿರುಗಬೇಕು. ಇದು ಬಹಳಷ್ಟು ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚಲಿಸುತ್ತಿದೆ ಎಂದರು.

ಕಳೆದ ತಿಂಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಭಾರತೀಯ ಆರ್ಥಿಕತೆಯು ಈ ವರ್ಷ ಶೇ 10.3ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂದಾಜಿಸಿತ್ತು.

2021ರಲ್ಲಿ ಶೇ 8.8ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತವು ಶೇ 4.2ರಷ್ಟು ಬೆಳವಣಿಗೆ ಕಂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ಶೇ 9.5ರಷ್ಟು ಸಂಕೋಚನ ನಿರೀಕ್ಷಿಸಿದೆ.

ಕಳೆದ ವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯಲ್ಲಿ ಪುನರುಜ್ಜೀವನದ ಲಕ್ಷಣಗಳು ಕಂಡುಬರುತ್ತವೆ. ಜಿಡಿಪಿ ಬೆಳವಣಿಗೆಯು ನಕಾರಾತ್ಮಕ ವಲಯದಲ್ಲಿರಬಹುದು ಅಥವಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೂನ್ಯಕ್ಕೆ ಹತ್ತಿರದಲ್ಲಿ ಇರಬಹುದು ಎಂದು ಹೇಳಿದ್ದರು.

ಇದೇ ರೀತಿಯ ಹೇಳಿಕೆ ನೀಡಿದ ಬಜಾಜ್, ಆರ್ಥಿಕತೆ ಪ್ರಾರಂಭವಾದಾಗಿನಿಂದ ಕಳೆದ ಕೆಲವು ತಿಂಗಳಿಂದ ಉತ್ಪಾದನೆಯಲ್ಲಿ ಪ್ರಗತಿ ಕಾಣುತ್ತಿದ್ದೇವೆ. ಉತ್ಪಾದನಾ ಪಿಎಂಐ 58.9 ಅಂಕ ಮುಟ್ಟಿದೆ. ಇದು ಕಳೆದ ದಶಕದಲ್ಲಿ ಗರಿಷ್ಠ ಮಟ್ಟದಾಗಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 2019ರ ಅಕ್ಟೋಬರ್​​ಗಿಂತ ಶೇ 12.10ರಷ್ಟು ಹೆಚ್ಚಾಗಿದೆ. ಇದು ಆರ್ಥಿಕ ಚಟುವಟಿಕೆಯ ಸಂಕೇತವಾಗಿದೆ. ಅದೇ ರೀತಿ ಇ-ವೇ ಬಿಲ್‌ಗಳ ಮೌಲ್ಯವು ಅಕ್ಟೋಬರ್​ನಲ್ಲಿ ಶೇ 19ರಷ್ಟು ಏರಿಕೆಯಾಗಿದೆ. ಇದರ ಮೌಲ್ಯ 16.82 ಲಕ್ಷ ಕೋಟಿ ಮೌಲ್ಯದಷ್ಟಿದೆ. ರೈಲ್ವೆ ಸರಕು ಸಾಗಣೆ ಸೆಪ್ಟೆಂಬರ್‌ನಲ್ಲಿ ಶೇ 15.5ರಷ್ಟು ಮತ್ತು ಅಕ್ಟೋಬರ್‌ನಲ್ಲಿ ಶೇ 14ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.

ಸರಾಸರಿ ದೈನಂದಿನ ಟೋಲ್ ಸಂಗ್ರಹವು ಶೇ 120ರಷ್ಟು ಹೆಚ್ಚಾಗಿದೆ. ಇವು ಆರ್ಥಿಕ ಚಟುವಟಿಕೆಯ ಸಂಕೇತಗಳಾಗಿವೆ. ಜಿಎಸ್​ಟಿ ಸಂಗ್ರಹವು 1.05 ಲಕ್ಷ ಕೋಟಿ ರೂ. ಮುಟ್ಟಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ ಕೆಲವು ಋಣಾತ್ಮಕ ಅಂಕಿ ಅಂಶಗಳಿಗೆ ಹೋಲಿಸಿದರೆ ಎಫ್‌ಪಿಐ ಒಳಹರಿವು ಅಕ್ಟೋಬರ್‌ನಲ್ಲಿ ಸುಮಾರು 3.2 ಬಿಲಿಯನ್ ಡಾಲರ್​ಗೆ ತಲುಪಿದೆ. ಬಂಡವಾಳ ಮಾರುಕಟ್ಟೆಯಲ್ಲಿನ ಸಮಸ್ಯೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಸಾಲದ ಬೆಳವಣಿಗೆಯು ಸೆಪ್ಟೆಂಬರ್‌ನಲ್ಲಿನ ಶೇ 5.3ಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ 5.8ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಸ್ವಲ್ಪ ಸುಧಾರಣೆಯಾಗಿದೆ. ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಎಫ್‌ಡಿಐ 35.73 ಬಿಲಿಯನ್ ಡಾಲರ್ ಆಗಿದೆ. ಬಾಹ್ಯ ವಲಯವು ದೃಢವಾಗಿ ಉಳಿದುಕೊಂಡಿದೆ. ನಮ್ಮ ವಿದೇಶಿ ನಿಧಿಗಳು ಸುಮಾರು 560 ಬಿಲಿಯನ್ ಡಾಲರ್‌ಗೆ ಮುಟ್ಟಿದೆ. ಉತ್ತಮ ಖಾರಿಫ್ ಬೆಳೆ ಇದ್ದು, ಬಂಪರ್ ರಬಿ ಬೆಳೆಗಾಗಿ ಎದುರು ನೋಡುತ್ತಿದ್ದೇವೆ. ಕೋವಿಡ್​ ಪ್ರಕರಣಗಳ ಸಂಖ್ಯೆಯು ಕುಸಿತವನ್ನು ಕಾಣುತ್ತಿದೆ. ಸಾವಿನ ಪ್ರಮಾಣ ಸಹ ಕಡಿಮೆಯಾಗಿದೆ. ಈಗ ಅವು ಸುಮಾರು 5 ಲಕ್ಷ ಪ್ರಕರಣಗಳಿಗೆ ಹತ್ತಿರದಲ್ಲಿವೆ ಎಂದು ತರುಣ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.