ನವದೆಹಲಿ: ಹಳಿ ತಪ್ಪಿದ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಭಾರತ, ಮತ್ತೆ ಸರಿಯಾದ ದಾರಿಗೆ ತರಲು ಬಯಸಿದರೆ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ನಾಯಕರು ಜಾಗತಿಕ ಮಾನದಂಡಗಳ ಆಡಳಿತಾತ್ಮದ ನಿಲುವುಗಳಿಗೆ ತಮ್ಮನ್ನು ತಾವು ಹೊಣೆಗಾರರನ್ನಾಗಿ ಮಾಡಿಕೊಳ್ಳಬೇಕು ಎಂದು ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬದಲಾಗುತ್ತಿರುವ ಸಮಯದೊಂದಿಗೆ ನಾವೂ ಹೆಜ್ಜೆ ಹಾಕಬೇಕಾಗುತ್ತದೆ. ವ್ಯವಹಾರದ ತತ್ವಶಾಸ್ತ್ರದಲ್ಲಿ ಷೇರುದಾರರು, ಬಂಡವಾಳಶಾಹಿಗಳಿಂದ ಹೂಡಿಕೆದಾರರು, ಗ್ರಾಹಕರು, ಉದ್ಯೋಗಿಗಳಂತಹ ಸರಳಪಳಿ ಮಾದರಿಯ ಪಾಲುದಾರರನ್ನು ಒಳಗೊಂಡು ವೇಗವಾಗಿ ಚಲಿಸುತ್ತಿದೆ ಎಂದರು.
ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಭಾರತವು ಮತ್ತೆ ಮರುರೂಪಿಸಲು ಬಯಸಿದ್ದರೆ ಭಾರತೀಯ ಕಂಪನಿಗಳು/ ಕಾರ್ಪೊರೇಟ್ ಸಂಸ್ಥೆಗಳು ಜಾಗತಿಕ ಮಾನದಂಡಗಳ ಆಡಳಿತಾತ್ಮಕ ನಿಲುವುಗಳಿಗೆ ತಮ್ಮನ್ನು ತಾವು ಹೊಣೆಗಾರರನ್ನಾಗಿ ಮಾಡಬೇಕು. ಆ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅಲ್ಪಸಂಖ್ಯಾತ ಷೇರುದಾರರ ಮೇಲೆ ಒರಟುತನ ನಡೆಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಬಿರ್ಲಾ ಹೇಳಿದರು.
ಕಂಪನಿಗಳ ಮತ್ತು ಸಂಸ್ಥೆಗಳ ವೃತ್ತಿಪರ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳು (ಸಿಇಒ) ಪ್ರವರ್ತಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥಾಪಕರು ಅನಗತ್ಯ ಹಾಗೂ ಅಸಮಾನವಾದ ಪ್ರಭಾವ ಹೊಂದಿದ್ದಾರೆ. ಇಂತಹ ಸಂಗತಿಗಳು ಸಹ ಬದಲಾಗಬೇಕಾಗಿದೆ ಎಂದು ಸಲಹೆ ನೀಡಿದರು.