ETV Bharat / business

ವ್ಯಾಕ್ಸಿನೇಷನ್​ ಡ್ರೈವ್​ನಿಂದಾಗಿ ಭಾರತದ ಆರ್ಥಿಕತೆ 'ವಿ'ಕಾರದಲ್ಲಿ ಚೇತರಿಕೆ: ಆರ್​ಬಿಐ

ಕೋವಿಡ್​-19ನಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಜನವರಿ 16ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿತ್ತು. 2021 ಹೇಗಿರಲಿದೆ ಎಂಬ ಪ್ರಶ್ನೆಗೆ ಆರ್​ಬಿಐ, ಚೇತರಿಕೆಯ ಆಕಾರವು ಎಲ್ಲಾ ಮುಗಿದ ನಂತರ ವಿ-ಆಕಾರದಲ್ಲಿರುತ್ತದೆ. 'ವಿ' ಎಂಬುದು ಲಸಿಕೆ ಸೂಚಿಸುತ್ತದೆ ಎಂದು ಆರ್​​ಬಿಐ ಜನವರಿ ಮಾಸಿಕದ ಬುಲೆಟಿನ್​ನಲ್ಲಿ 'ಆರ್ಥಿಕ ಸ್ಥಿತಿ' ಕುರಿತು ಪ್ರಕಟಿಸಿದ ಲೇಖನದಲ್ಲಿ ತಿಳಿಸಿದೆ.

rbi
rbi
author img

By

Published : Jan 21, 2021, 3:44 PM IST

ಮುಂಬೈ: ಭಾರತದ ಜಿಡಿಪಿ ಸಕಾರಾತ್ಮಕ ಬೆಳವಣಿಗೆ ಸಾಧಿಸುವ ಗಮನಾರ್ಹ ಅಂತರದಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದ್ದು, ವಿ ಆಕಾರದ ಚೇತರಿಕೆಯು ವ್ಯಾಕ್ಸಿನ್​ನ 'ವಿ' ಅಕ್ಷರ ಪ್ರತಿನಿಧಿಸುತ್ತಿದೆ ಎಂದಿದೆ.

ಕೋವಿಡ್​-19ನಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಜನವರಿ 16ರಂದು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿತ್ತು. 2021 ಹೇಗಿರಲಿದೆ ಎಂಬ ಪ್ರಶ್ನೆಗೆ ಆರ್​ಬಿಐ, ಚೇತರಿಕೆಯ ಆಕಾರವು ಎಲ್ಲಾ ಮುಗಿದ ನಂತರ ವಿ-ಆಕಾರದಲ್ಲಿರುತ್ತದೆ. 'ವಿ' ಎಂಬುದು ಲಸಿಕೆ ಸೂಚಿಸುತ್ತದೆ ಎಂದು ಜನವರಿ ಮಾಸಿಕದ ಬುಲೆಟಿನ್​ನಲ್ಲಿ 'ಆರ್ಥಿಕ ಸ್ಥಿತಿ' ಕುರಿತು ಪ್ರಕಟಿಸಿದ ಲೇಖನದಲ್ಲಿ ತಿಳಿಸಿದೆ.

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಭಾರತ, ಪೋಲಿಯೋ ಮತ್ತು ದಡಾರದ ವಿರುದ್ಧ ಸಾಮೂಹಿಕ ಇನಾಕ್ಯುಲೇಷನ್ ಡ್ರೈವ್‌ಗಳ ಮೂಲಕ ಸಮರ್ಥವಾಗಿ ಎದುರಿಸಿದೆ. ಕೊರೊನಾ ವಿರುದ್ಧ ಮತ್ತೊಂದು ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದೆ.

ಭಾರತದ ಈ ಪ್ರಯತ್ನ ಯಶಸ್ವಿಯಾದರೆ, ಇದು ಅಪಾಯಗಳನ್ನು ಕೆಳಕ್ಕೆ ನೂಕಿ ಅದರ ಸಮತೋಲನ ಮೇಲ್ಮುಖದತ್ತ ತಿರುಗಿಸುತ್ತದೆ ಎಂದು ಆರ್​​ಬಿಐ ಡೆಪ್ಯುಟಿ ಗವರ್ನರ್ ಮೈಕೆಲ್ ದೇಬಾಬ್ರತಾ ಪಾತ್ರಾ ಸೇರಿದಂತೆ ಇತರ ಲೇಖಕರು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ 25 ಹೊಸ ಬಿಎಂಡಬ್ಲ್ಯು ಕಾರುಗಳು

ಈ ಅಂಕಣದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳು ಮತ್ತು ಕೇಂದ್ರೀಯ ಬ್ಯಾಂಕಿನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

ಜಗತ್ತಿನಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಭಾರತದ ಚೇತರಿಕೆಯ ಪ್ರಕಾಶಮಾನವಾದ ತಾಣಗಳಾಗಬಹುದು. ಇವುಗಳು ಖಚಿತವಾಗಿ ಚೇತರಿಸಿಕೊಳ್ಳಲಿವೆ. ಆದರೆ, ಸಾಂಕ್ರಾಮಿಕ ಪೂರ್ವದ ಉತ್ಪಾದನೆ ಮತ್ತು ಉದ್ಯೋಗವು ಬಹು ದೂರದಲ್ಲಿದೆ ಎಂದು ಹೇಳಿದರು.

ಸ್ಥೂಲ ಆರ್ಥಿಕ ಚಿತ್ರಣವು ಇತ್ತೀಚಿನ ಬದಲಾವಣೆಗಳ ಮುನ್ನೋಟ ಜಿಡಿಪಿ ಸಕಾರಾತ್ಮಕ ಪ್ರದೇಶ ತಲುಪುವ ದೂರದಲ್ಲಿ ಮತ್ತು ಹಣದುಬ್ಬರವು ಉದ್ದೇಶಿತ ಗುರಿಯ ಹತ್ತಿರ ಸರಾಗವಾಗಿ ಸಾಗುತ್ತಿವೆ.

ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಸರ್ಕಾರದ ದತ್ತಾಂಶಗಳ ಪ್ರಕಾರ, ಕೋವಿಡ್​-19 ಸಾಂಕ್ರಾಮಿಕ ಪ್ರೇರೇಪಿತ ಜಿಡಿಪಿಯು 2020-21ರ ಅವಧಿಯಲ್ಲಿ ಶೇ 7.7ರಷ್ಟು ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 23.9 ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ 7.5ರಷ್ಟು ಕುಸಿದಿತ್ತು.

ಲಸಿಕೆ ತಯಾರಿಕೆಗೆ ಭಾರತವು ಜಾಗತಿಕ ರಾಜಧಾನಿ ಆಗಿರುವುದರಿಂದ ಜಾಗತಿಕವಾಗಿ ವ್ಯಾಕ್ಸಿನೇಷನ್ ಡ್ರೈವ್‌ಗಳ ಪ್ರಾರಂಭದೊಂದಿಗೆ ಔಷಧೀಯ ರಫ್ತು ದೊಡ್ಡ ಪ್ರಚೋದನೆ ಪಡೆಯುವ ನಿರೀಕ್ಷೆಯಿದೆ. ಕೃಷಿ ರಫ್ತುಗಳು ಚೇತರಿಸಿಕೊಳ್ಳುತ್ತಿವೆ. ಇತ್ತೀಚಿನ ಉತ್ಪಾದನಾ ಲಿಂಕ್ಡ್ (ಪಿಎಲ್ಐ) ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣಾ ಉದ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.