ETV Bharat / business

ಚೀನಾ ವಿರುದ್ಧದ ಹೋರಾಟದಲ್ಲಿ ಭಾರತದ ಜತೆ ಅಮೆರಿಕ ನಿಲ್ಲುತ್ತೆ - ಮೈಕ್​ ಪಾಂಪಿಯೋ ಭರವಸೆ

author img

By

Published : Oct 27, 2020, 4:37 PM IST

ಭಾರತದ ಪ್ರವಾಸದಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಚೀನಾದ ಆಡಳಿತರೂಢ ಕಮ್ಯೂನಿಸ್ಟ್​ ಪಕ್ಷ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಈ ಬೆದರಿಕೆಯನ್ನು ಭಾರತ ಹಾಗೂ ಅಮೆರಿಕ ಒಗ್ಗೂಡಿ ಎದುರಿಸಲಿವೆ. ಲಡಾಖ್ ಗಡಿ ಘರ್ಷಣೆಯಲ್ಲಿ ಭಾರತದೊಂದಿಗೆ ಅಮೆರಿಕ ಗಟ್ಟಿಯಾಗಿ ನಿಲ್ಲಲಿದೆ ಎಂದು ಅಭಯ ನೀಡಿದರು.

India, US
ಭಾರತ ಅಮೆರಿಕ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಮಂಗಳವಾರ ಒಂದು ಹೊಸ ಹೆಗ್ಗುರುತಿನ ರಕ್ಷಣಾ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದವು. ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಎರಡೂ ರಾಷ್ಟ್ರಗಳ ನಡುವೆ ಅಂತಿಮ ಮಾಹಿತಿ ಹಂಚಿಕೊಳ್ಳಲು ಈ ಒಪ್ಪಂದ ನೆರವಾಗಲಿದೆ.

ಭಾರತ - ಅಮೆರಿಕ ನಡುವಿನ ಮೂರನೇ ವಾರ್ಷಿಕ 2+2 ಸಚಿವರ ಮಟ್ಟದ ದೀರ್ಘ ಅವಧಿಯ ಮಾತುಕತೆ ನಡೆಸಿದ ಬಳಿಕ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದದ (ಬಿಇಸಿಎ) ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದವು. ಇದು ರಕ್ಷಣಾ ಮತ್ತು ಮಿಲಿಟರಿ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬುದನ್ನು ಸೂಚಿಸುತ್ತದೆ. ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತ ಗಡಿ ಉದ್ವಿಗ್ನ ನಡುವೆ ಈ ಬೆಳವಣಿಗೆ ನಡೆದಿದ್ದು, ಮತ್ತೊಂದು ಮಹತ್ವದ್ದಾಗಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಎರಡೂ ಕಡೆಯವರು ಉನ್ನತ ಮಟ್ಟದ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು ಒಪ್ಪಂದಕ್ಕೆ ನೆರವಾದರು.

2 + 2 ಸಂವಾದದಲ್ಲಿ ಉಭಯ ದೇಶಗಳು ಉಗ್ರರ ನಿಗ್ರಹಕ್ಕೆ ಈಗಾಗಲೇ ನಿಕಟ ಸಂಬಂಧ ಹೊಂದಿದ್ದು, ಇದನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳು ಮತ್ತು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಒಮ್ಮತವಾದ ವಿಶಾಲ ದೃಷ್ಟಿಕೋನದಲ್ಲಿ ಸಮಸ್ಯೆಗಳ ನಿರ್ಣಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಈ ವೇಳೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಚೀನಾದ ಆಡಳಿತರೂಢ ಕಮ್ಯೂನಿಸ್ಟ್​ ಪಕ್ಷ ಜಾಗತಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ. ಈ ಬೆದರಿಕೆಯನ್ನು ಭಾರತ ಹಾಗೂ ಅಮೆರಿಕ ಒಗ್ಗೂಡಿ ಎದುರಿಸಲಿವೆ. ಲಡಾಖ್ ಗಡಿ ಘರ್ಷಣೆಯಲ್ಲಿ ಭಾರತದೊಂದಿಗೆ ಅಮೆರಿಕ ಗಟ್ಟಿಯಾಗಿ ನಿಲ್ಲಲಿದೆ ಎಂದು ಅಭಯ ನೀಡಿದರು.

ಜನರಲ್ ಸೆಕ್ಯುರಿಟಿ ಆಫ್ ಮಿಲಿಟರಿ ಇನ್ಫಾರ್ಮೇಷನ್ ಅಗ್ರಿಮೆಂಟ್ (ಜಿಎಸ್ಒಮಿಯಾ) ಎಂಬ ಮುಖ್ಯ ಒಪ್ಪಂದವನ್ನು ಉಭಯ ದೇಶಗಳು 2002ರಲ್ಲಿ ಸಹಿ ಹಾಕಿದ್ದವು. ಅಮೆರಿಕ- ಭಾರತದೊಂದಿಗೆ ಹಂಚಿಕೊಂಡಿರುವ ನಿರ್ಣಾಯಕ ಮಾಹಿತಿ ರಕ್ಷಿಸಲು ಭದ್ರತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಕ್ರಮಗಳನ್ನು ಜಿಎಸ್​ ಒಮಿಯಾ ಒಳಗೊಂಡಿದೆ.

2016ರಲ್ಲಿ ರಕ್ಷಣಾ ವ್ಯಾಪಾರ ಮತ್ತು ತಂತ್ರಜ್ಞಾನ ಹಂಚಿಕೆಯನ್ನು ಹತ್ತಿರದ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರರನ್ನು ಹೊಸ ಎತ್ತರಕ್ಕೆ ಏರಿಸುವ ಉದ್ದೇಶದಿಂದ ಯುಎಸ್ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಆಯ್ದುಕೊಂಡಿತು.

ಉಭಯ ದೇಶಗಳು 2016ರಲ್ಲಿ ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಮ್ ಆಫ್ ಅಗ್ರಿಮೆಂಟ್ (ಲೆಮೋಎ) ಗೆ ಸಹಿ ಹಾಕಿದ್ದವು. ಇದು ತಮ್ಮ ಮಿಲಿಟರಿಗಳ ಪರಸ್ಪರರ ನೆಲೆಗಳನ್ನು ದುರಸ್ತಿ ಮತ್ತು ಮರು ನಿಯೋಜನೆಗೆ ಬಳಸಲು ಅನುವು ಮಾಡಿಕೊಡುತ್ತದೆ.

ಭಾರತ ಮತ್ತು ಯುಎಸ್ 2018ರಲ್ಲಿ ಸಿಎಂಎಂಸಿಎಎಸ್​ಎ (ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ) ಎಂಬ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಇದು ಉಭಯ ರಾಷ್ಟ್ರಗಳ ನಡುವೆ ಉಗ್ರ ನಿಗ್ರಹ ಕಾರ್ಯಾಚರಣೆಯ ಪರಸ್ಪರ ಕಾರ್ಯಸಾಧ್ಯತೆ ಒದಗಿಸುತ್ತದೆ. ಅಮೆರಿಕದಿಂದ ಭಾರತಕ್ಕೆ ಉನ್ನತ ಮಟ್ಟದ ತಂತ್ರಜ್ಞಾನ ಮಾರಾಟ ಮಾಡಲು ಈ ಒಪ್ಪಂದ ನೆರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.