ETV Bharat / business

ಬ್ರಿಟನ್, ಜರ್ಮನ್, ಜಪಾನ್ ಆರ್ಥಿಕತೆ ಹಿಂದಿಕ್ಕಿ 3ನೇ ಸ್ಥಾನಕ್ಕೇರುವ ಭಾರತ : ಯಾವಾಗ?

author img

By

Published : Dec 26, 2020, 1:38 PM IST

ರೂಪಾಯಿ ದೌರ್ಬಲ್ಯದ ಪರಿಣಾಮವಾಗಿ ಇಂಗ್ಲೆಂಡ್​ 2020ರಲ್ಲಿ ಭಾರತವನ್ನು ಮತ್ತೆ ಹಿಂದಿಕ್ಕಿದೆ. 2021ರಲ್ಲಿ ಭಾರತದ ಆರ್ಥಿಕತೆಯು ಶೇ.9ರಷ್ಟು ಮತ್ತು 2022ರಲ್ಲಿ ಶೇ.7ರಷ್ಟು ವಿಸ್ತರಿಸಲಿದೆ ಎಂದು ಸಿಇಬಿಆರ್ ಅಂದಾಜಿಸಿದೆ..

India
ಭಾರತ

ನವದೆಹಲಿ : 2020ರಲ್ಲಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯೊಂದು ಹಿಂದಕ್ಕೆ ತಳ್ಳಲ್ಪಟ್ಟಂತೆ ಕಾಣುತ್ತಿರುವ ಭಾರತವು ಮತ್ತೆ ಬ್ರಿಟನ್ ಹಿಂದಿಕ್ಕಿ 2025ರಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ಮುಂದುವರಿದು 2030ರ ವೇಳೆಗೆ ಮೂರನೇ ಸ್ಥಾನಕ್ಕೆ ತಲುಪಲಿದೆ ಎಂದು ಥಿಂಕ್ ಟ್ಯಾಂಕ್ ಶನಿವಾರ ತಿಳಿಸಿದೆ.

ಭಾರತವು 2019ರಲ್ಲಿ ಇಂಗ್ಲೆಂಡ್ ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿತ್ತು. ಆದರೆ, 2020ರಲ್ಲಿ ಕೊರೊನಾ ಹೊಡತಕ್ಕೆ ಸಿಲುಕಿ 6ನೇ ಸ್ಥಾನಕ್ಕೆ ಕೆಳಗಿಳಿಯಲ್ಪಟ್ಟಿದೆ.

ಸಾಂಕ್ರಾಮಿಕ ವೈರಸ್‌ ಪರಿಣಾಮದಿಂದ ಭಾರತವನ್ನು ಸ್ವಲ್ಪಮಟ್ಟಿಗೆ ಹಿಂದಕ್ಕೆ ತಳ್ಳಲಾಗಿದೆ. ಇದರ ಪರಿಣಾಮವಾಗಿ 2019ರಲ್ಲಿ ಬ್ರಿಟನ್​ ಹಿಂದಿಕ್ಕಿದ ನಂತರ, ಈ ವರ್ಷ ಯುಕೆ ಭಾರತವನ್ನು ಹಿಮ್ಮೆಟ್ಟಿಸಿತು.

ಭಾರತ 2024ರವರೆಗೆ ಇದೇ ಸ್ಥಾನದಲ್ಲಿ ಮುಂದುವರಿಯುತ್ತದೆ. 2025ರ ಬಳಿಕ 5ನೇ ಸ್ಥಾನವನ್ನು ಮರಳಿ ಪಡಿಯಲಿದೆ ಎಂದು ಕೇಂದ್ರ ಅರ್ಥಶಾಸ್ತ್ರ ಮತ್ತು ವ್ಯವಹಾರ ಸಂಶೋಧನೆ (ಸಿಇಬಿಆರ್) ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ರೂಪಾಯಿ ದೌರ್ಬಲ್ಯದ ಪರಿಣಾಮವಾಗಿ ಇಂಗ್ಲೆಂಡ್​ 2020ರಲ್ಲಿ ಭಾರತವನ್ನು ಮತ್ತೆ ಹಿಂದಿಕ್ಕಿದೆ. 2021ರಲ್ಲಿ ಭಾರತದ ಆರ್ಥಿಕತೆಯು ಶೇ.9ರಷ್ಟು ಮತ್ತು 2022ರಲ್ಲಿ ಶೇ.7ರಷ್ಟು ವಿಸ್ತರಿಸಲಿದೆ ಎಂದು ಸಿಇಬಿಆರ್ ಅಂದಾಜಿಸಿದೆ.

ಭಾರತವು ಹೆಚ್ಚು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಂತ ಬೆಳವಣಿಗೆಯು ಸ್ವಾಭಾವಿಕವಾಗಿ ನಿಧಾನವಾಗಲಿದೆ. ವಾರ್ಷಿಕ ಜಿಡಿಪಿ ಬೆಳವಣಿಗೆಯು 2035ರಲ್ಲಿ ಶೇ 5.8ಕ್ಕೆ ಮುಳುಗುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ.

ಇದನ್ನೂ ಓದಿ: 105 ಕೋಟಿ ರೂ. ನಕಲಿ ಬಿಲ್​ ಸೃಷ್ಟಿ : ₹19.25 ಕೋಟಿ ಜಿಎಸ್​ಟಿ ವಂಚನೆ

ಈ ಬೆಳವಣಿಗೆಯ ಪಥವು 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2025ರಲ್ಲಿ ಇಂಗ್ಲೆಂಡ್​ 2027ರಲ್ಲಿ ಜರ್ಮನಿ ಮತ್ತು 2030ರಲ್ಲಿ ಜಪಾನ್ ಹಿಂದಿಕ್ಕಲಿದೆ ಎಂದು ಹೇಳಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಉಭಯ ದೇಶಗಳು ಚೇತರಿಸಿಕೊಳ್ಳುವುದರಿಂದಾಗಿ 2028ರಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಯುಕೆ ಮೂಲದ ಥಿಂಕ್ ಟ್ಯಾಂಕ್ ಮುನ್ಸೂಚನೆ ನೀಡಿದೆ.

ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಉಳಿಯುತ್ತದೆ, ಡಾಲರ್ ದೃಷ್ಟಿಯಿಂದ 2030ರ ದಶಕದ ಆರಂಭದವರೆಗೆ ಭಾರತವನ್ನು ಹಿಂದಿಕ್ಕುವವರೆಗೆ ಆ ಸ್ಥಾನ ಖಾಯಂ ಆಗಿರಲಿದೆ. ಕೋವಿಡ್​-19 ಬಿಕ್ಕಟ್ಟಿನಿಂದ ಉಂಟಾದ ಆಘಾತಕ್ಕಿಂತಲೂ ಭಾರತದ ಆರ್ಥಿಕತೆಯು ವೇಗವನ್ನು ಕಳೆದುಕೊಳ್ಳುತ್ತಿದೆ ಎಂದು ಸಿಇಬಿಆರ್ ಹೇಳಿದೆ.

ಜಿಡಿಪಿ ಬೆಳವಣಿಗೆಯ ದರವು 2019ರಲ್ಲಿ ಹತ್ತು ವರ್ಷಗಳಿಗಿಂತಲೂ ಕಡಿಮೆ ಶೇ.4.2ಕ್ಕೆ ಇಳಿದಿದೆ. ಇದು ಹಿಂದಿನ ವರ್ಷದ ಶೇ.6.1ರಿಂದ ಮತ್ತು 2016ರಲ್ಲಿ ದಾಖಲಾದ ಶೇ.8.3ರಷ್ಟು ಬೆಳವಣಿಗೆಯ ದರದಲ್ಲಿ ಅರ್ಧದಷ್ಟು ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.