ETV Bharat / business

ಕೊರೊನಾ ವಿರುದ್ಧ ಭಾರತ ಅತ್ಯದ್ಭುತವಾಗಿ ಹೋರಾಡಿದೆ: ಕಿರಣ್ ಮಜುಂದಾರ್ ಷಾ

author img

By

Published : Apr 28, 2020, 10:54 PM IST

ಐಎಎನ್​ಎಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಿರಣ್ ಮಜುಂದಾರ್ ಷಾ, ಕೋವಿಡ್-19 ಸೋಂಕಿತರ ವಕ್ರರೇಖೆಯು ದೇಶ ಅತ್ಯದ್ಭುತ ಕೆಲಸ ಮಾಡಿದೆ ಎಂಬುದನ್ನು ದತ್ತಾಂಶಗಳ ಮೂಲಕ ಸೂಚಿಸುತ್ತದೆ. ಕೇಂದ್ರ ಸರ್ಕಾರ ಮೇ 3ರಿಂದ ಲಾಕ್​ಡೌನ್ ತೆರೆಯಲು ಆರಂಭಿಸಬೇಕು. ಮುಂದೆ ಜೂನ್ ಅಂತ್ಯದ ವೇಳೆಗೆ ಚಟುವಟಿಕೆಗಳು ಸಂಪೂರ್ಣವಾಗಿ ಕಾರ್ಯಾಚರಣೆಗೆ ಇಳಿಯುತ್ತವೆ ಎಂದರು.

Biocon Executive Kiran Mazumdar Shaw
ಕಿರಣ್ ಮಜುಂದಾರ್ ಷಾ

ನವದೆಹಲಿ: ಭಾರತ ಕೊರೊನಾ ಸಂಕಷ್ಟದಿಂದ ಸುರಕ್ಷಿತ ವಲಯಕ್ಕೆ ಪ್ರವೇಶಿಸುತ್ತಿದೆ ಎಂದು ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.

ಐಎಎನ್​ಎಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕಿತರ ವಕ್ರರೇಖೆಯು ದೇಶ ಅತ್ಯದ್ಭುತ ಕೆಲಸ ಮಾಡಿದೆ ಎಂಬುದನ್ನು ದತ್ತಾಂಶಗಳ ಮೂಲಕ ಸೂಚಿಸುತ್ತದೆ. ಕೇಂದ್ರ ಸರ್ಕಾರ ಮೇ 3ರಿಂದ ಲಾಕ್​ಡೌನ್ ತೆರೆಯಲು ಆರಂಭಿಸಬೇಕು. ಮುಂದೆ ಜೂನ್ ಅಂತ್ಯದ ವೇಳೆಗೆ ಚಟುವಟಿಕೆಗಳು ಸಂಪೂರ್ಣವಾಗಿ ಕಾರ್ಯಾಚರಣೆಗೆ ಇಳಿಯುತ್ತವೆ ಎಂದರು.

ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳಾದ್ಯಂತ ಕೈಗಾರಿಕಾ ಉತ್ಪಾದನೆ ವೃದ್ಧಿಸಲು ಸರ್ಕಾರ ದೊಡ್ಡ ಪ್ರಮಾಣ ಆರ್ಥಿಕ ಪ್ರಚೋದನೆ ಒದಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಸರ್ವೈಲೆನ್ಸ್ ಮತ್ತು ಸುರಕ್ಷತೆಯ ಸಾಧನಗಳ ಜತೆ ಆರ್ಥಿಕತೆಯನ್ನು ಪುನಃ ಆರಂಭಿಸಲಿದೆ. ಲಾಕ್​ಡೌನ್ ತೆರೆದ ಬಳಿಕ ಕೆಲವು ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಿದೆ. ಅದನ್ನು ನಾವೆಲ್ಲರೂ ಅಳವಡಿಸಿಕೊಳ್ಳಲೇಬೇಕು. ಸಾಮಾಜಿಕ ಅಂತರವನ್ನು ಯಥಾವತ್ತಾಗಿ ಮುಂದುವರಿಯಬೇಕು. ದೊಡ್ಡ ಮಟ್ಟದ ಸಾರ್ವಜನಿಕ ಸಭೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಸುತ್ತಲಿನ ರಾಷ್ಟ್ರ ಹಾಗೂ ಪಾಶ್ಚಿಮಾತ್ಯಗಳಲ್ಲಿ ವಿಡ್-19 ಭಾರೀ ಅವಘಡಗಳನ್ನು ಸೃಷ್ಟಿಸಿದೆ ಎಂಬುದು ಮಾಧ್ಯಮಗಳ ವರದಿಗಳು ಹೇಳುತ್ತಿವೆ. ಇಲ್ಲಿನ ಜನಸಂಖ್ಯೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ತುಂಬಾ ಹೆಚ್ಚಿದೆ. ಅಲ್ಲಿನ ಸೋಂಕಿನ ಪ್ರಮಾಣ ಅತ್ಯಧಿಕವಾಗಿದೆ. ಭಾರತದಲ್ಲಿನ ಅಂಕಿಅಂಶಗಳು ಗಮನಿಸಿದರೇ ತೀರಾ ಕಡಿಮೆ ಇದೆ ಎಂಬುದು ತಿಳಿಯುತ್ತದೆ ಎಂದರು.

ನಾವು ಕಾಲುವೆ, ವಿದ್ಯುತ್ ಸ್ಥಾವರ, ಬಂದರು, ಗೋದಾಮು, ಕೈಗೆಟುಕುವ ದರದಲ್ಲಿ ವಸತಿ ಮುಂತಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ತೊಡಗಬೇಕಿದೆ. ತಯಾರಿಕಾ, ಸೇವೆ ವಲಯ, ನಾವೀನ್ಯತೆ ಮತ್ತು ಸ್ಟಾರ್ಟ್ಅಪ್​ಗಳಿಗೆ ಧನಸಹಾಯ ನೀಡಬೇಕು ಎಂದು ಷಾ ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.