ಮುಂಬೈ : ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್, ಭಾರತದ 2022ರ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 10.1ಕ್ಕೆ ಪರಿಷ್ಕರಿಸಿದೆ.
ಈ ಹಿಂದೆ ಶೇ.10.4ಕ್ಕೆ ಅಂದಾಜಿಸಿತ್ತು. ಕೊರೊನಾ ಎರಡನೇ ಅಲೆಯ ಹೆಚ್ಚಳ ಮತ್ತು ಚುಚ್ಚುಮದ್ದಿನ ನಿಧಾನಗತಿ ಉಲ್ಲೇಖಿಸಿ ವೃದ್ಧಿಯ ದರ ಪರಿಷ್ಕರಿಸಿದೆ.
ದೇಶದ ಬಹುತೇಕ ಭಾಗಗಳು ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡ ಅನುಭವಿಸುತ್ತಿರುವ ಸಮಯದಲ್ಲಿ, ಮೇ ಮಧ್ಯದ ವೇಳೆಗೆ ಎರಡನೇ ಅಲೆಯು ಕಡಿಮೆಯಾಗಲು ನಿರೀಕ್ಷೆಯಿದೆ ಎಂದು ಸಂಸ್ಥೆ ಹೇಳಿದೆ.
ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಶೇ.10.5ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜು ಕಾಯ್ದುಕೊಂಡಿತ್ತು. ಆದರೆ, ಗವರ್ನರ್ ಶಕ್ತಿಕಾಂತ ದಾಸ್ ಏರುತ್ತಿರುವ ಪ್ರಕರಣಗಳನ್ನು ಚೇತರಿಕೆಗೆ ದೊಡ್ಡ ಅಡೆತಡೆ ಎಂದು ಹೇಳಿದ್ದಾರೆ.
ಇತರ ಏಜೆನ್ಸಿ ಮತ್ತು ವಿಶ್ಲೇಷಕರು ಎರಡನೇ ಅಲೆಯಿಂದಾಗಿ ತಮ್ಮ ಮುನ್ಸೂಚನೆಗಳನ್ನು ಪರಿಷ್ಕರಿಸುತ್ತಿದ್ದಾರೆ. 2021ರ ವಿತ್ತೀಯ ವರ್ಷದಲ್ಲಿ ಆರ್ಥಿಕತೆಯು ಶೇ.7.6ರಷ್ಟು ಕುಗ್ಗಿದೆ ಎಂದು ಅಂದಾಜಿಸಲಾಗಿದೆ.
ಲಾಕ್‌ಡೌನ್‌ಗಳನ್ನು ಸ್ಥಳೀಯವಾಗಿ ವಿಧಿಸಿದ್ದರು ಮೊದಲ ಅಲೆಯ ಗರಿಷ್ಠತೆಯ ಮೂರು ಪಟ್ಟು ದೈನಂದಿನ ಕೇಸ್ ಮುಟ್ಟಿದರೂ, ಎರಡನೇ ಅಲೆಯ ಪ್ರಭಾವವು ಮೊದಲಿನಂತೆ ಅಡ್ಡಿಯಾಗುವುದಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.
ಮೊದಲ ಅಲೆಗಿಂತ ಭಿನ್ನವಾಗಿದ್ದು, ಆಡಳಿತಾತ್ಮಕ ಪ್ರತಿಕ್ರಿಯೆ ಹಠಾತ್ ಅಲ್ಲದೇ ಕ್ರಮೇಣ ಶ್ರೇಣೀಕೃತ ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ಮನೆಗಳು, ವ್ಯವಹಾರಗಳು ಮತ್ತು ಇತರ ಆರ್ಥಿಕ ಏಜೆಂಟರು ಸಿದ್ಧರಾಗಿದ್ದಾರೆ.
ಮೊದಲನೇ ಅಲೆಯಿಂದ ಸಾಕಷ್ಟು ಪಾಠ ಕಲಿತಿದ್ದಾರೆ. ಇದು ಕೋವಿಡ್-19 ಬಿಕ್ಕಟ್ಟಿನ ಎರಡನೇ ಅಲೆ ತಡೆದುಕೊಳ್ಳಲು ಮತ್ತು ಅದನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ರೇಟಿಂಗ್ ಏಜೆನ್ಸಿ ತಿಳಿಸಿದೆ.
ಲಸಿಕೆ ಸುರಕ್ಷತೆ ಹೆಚ್ಚಾಗಿದೆ. ಲಸಿಕೆ ಸ್ವೀಕರಿಸಿದ ಆರ್ಥಿಕ ಏಜೆಂಟರಲ್ಲಿ ಭಯದ ಅಂಶ ಕಡಿಮೆ ಮಾಡುತ್ತದೆ. ಏಪ್ರಿಲ್ 21ರವರೆಗೆ 13.2 ಕೋಟಿ ಲಸಿಕೆ ಪ್ರಮಾಣ ನೀಡಲಾಗಿದೆ. ಮೇ 1ರಿಂದ ಎಲ್ಲ ವಯಸ್ಕರಿಗೆ ಡೋಸ್ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ವ್ಯಾಕ್ಸಿನೇಷನ್ ವೆಚ್ಚ ಜಿಡಿಪಿಯ ಶೇ.0.12ರಷ್ಟು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಗಳಿಗೆ ಶೇ.0.24ರಷ್ಟು ಹೊರೆಯಾಗಲಿದೆ.
ಹೆಚ್ಚುತ್ತಿರುವ ಪ್ರಕರಣಗಳ ಹೊರೆ ನಿಯಂತ್ರಿಸುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಗೆ ವ್ಯಾಕ್ಸಿನೇಷನ್ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ವೇಗ ಎರಡೂ ಪ್ರಮುಖವಾಗಿವೆ ಎಂದಿದೆ.
ಹೀಗಾಗಿ, ಇಂಡಿಯಾ ರೇಟಿಂಗ್ ಏಜೆನ್ಸಿ ತನ್ನ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಈ ಮುಂಚಿನ ಶೇ.10.4ರಿಂದ ಶೇ. 10.1ಕ್ಕೆ ಪರಿಷ್ಕರಿಸಿದೆ.