ETV Bharat / business

ದುಡಿಯುವ ಜನರಿಗೆ ಕೆಟ್ಟ ದೇಶಗಳು: ಜಾಗತಿಕ ಅಗ್ರ 10 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆ! - ಜಾಗತಿಕ ಹಕ್ಕುಗಳ ಸೂಚ್ಯಂಕ

ಕಾರ್ಮಿಕ ಒಕ್ಕೂಟಗಳ ನೋಂದಣಿಗೆ ಅಡ್ಡಿಯುಂಟುಮಾಡಿದ ದೇಶಗಳ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅಗ್ರ ಹತ್ತು ಕೆಟ್ಟ ದೇಶಗಳ ಪಟ್ಟಿಯಲ್ಲಿ ಭಾರತ, ಈಜಿಪ್ಟ್ ಮತ್ತು ಹೊಂಡುರಾಸ್ ಪ್ರವೇಶಿಸಿವೆ. ವಾಕ್ ಸ್ವಾತಂತ್ರ್ಯ ನಿರಾಕರಿಸಿದ ಅಥವಾ ನಿರ್ಬಂಧಿಸಿದ ದೇಶಗಳ ಸಂಖ್ಯೆ 2019ರಲ್ಲಿ 54 ಇದ್ದದ್ದು 2020ರಲ್ಲಿ ಅದು 56ಕ್ಕೆ ಏರಿಕೆ ಆಗಿವೆ.

working people
ದುಡಿಯುವ ಜನರು
author img

By

Published : Jul 20, 2020, 6:18 PM IST

ಬ್ರಸೆಲ್ಸ್(ಬೆಲ್ಜಿಯಂ): ಇಂಟರ್​ನ್ಯಾಷನಲ್ ಟ್ರೇಡ್ ಯೂನಿಯನ್ ಕಾನ್ಫಿಡರೇಷನ್ (ಐಟಿಯುಸಿ) ಜಾಗತಿಕ ಹಕ್ಕುಗಳ ಸೂಚ್ಯಂಕದ ಏಳನೇ ಆವೃತ್ತಿ ವರದಿ ಪ್ರಕಟಿಸಿದ್ದು, 144 ದೇಶಗಳಲ್ಲಿ ದುಡಿಯುವ ಜನರಿಗೆ ಕೆಟ್ಟ ದೇಶಗಳ ಶ್ರೇಣಿಯಲ್ಲಿ ಅಗ್ರ 10 ಕಳಪೆ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಸೇರಿದೆ.

ಈ 10 ರಾಷ್ಟ್ರಗಳ ಸಾಲಿನಲ್ಲಿ ಬಾಂಗ್ಲಾದೇಶ, ಬ್ರೆಜಿಲ್, ಕೊಲಂಬಿಯಾ, ಈಜಿಪ್ಟ್, ಹೊಂಡುರಾಸ್, ಕಝಕಿಸ್ತಾನ್, ಫಿಲಿಪೈನ್ಸ್, ಟರ್ಕಿ ಮತ್ತು ಜಿಂಬಾಬ್ವೆ ಸೇರಿವೆ. ಪ್ಯಾಲೆಸ್ತೇನ್, ಸಿರಿಯಾ, ಯೆಮೆನ್ ಮತ್ತು ಲಿಬಿಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಕಾರ್ಮಿಕರ ಪ್ರಾತಿನಿಧ್ಯ ಮತ್ತು ಯೂನಿಯನ್ ಹಕ್ಕುಗಳ ಅತ್ಯಂತ ಹಿಂಜರಿತದ ಪ್ರದೇಶಗಳಾಗಿವೆ. ಏಳು ವರ್ಷಗಳಿಂದ ದುಡಿಯುತ್ತಿರುವ ಜನರಿಗೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಕೆಲ ರಾಷ್ಟ್ರಗಳು ವಿಶ್ವದ ಅತ್ಯಂತ ಕೆಟ್ಟ ದೇಶಗಳು ಎಂದು ಸೂಚಿಸಿದೆ.

ಶೇ.85ರಷ್ಟು ದೇಶಗಳು ಮುಷ್ಕರದ ಹಕ್ಕನ್ನು ಉಲ್ಲಂಘಿಸಿವೆ. 80 ಪ್ರತಿಶತ ದೇಶಗಳು ಸಾಮೂಹಿಕವಾಗಿ ಚೌಕಾಶಿಯ ಹಕ್ಕನ್ನು ಕಿತ್ತುಕೊಂಡಿವೆ ಎಂದು ಐಟಿಯುಸಿ ತನ್ನ ವರದಿಯಲ್ಲಿ ಹೇಳಿದೆ.

ಒಕ್ಕೂಟಗಳ ನೋಂದಣಿಗೆ ಅಡ್ಡಿಯುಂಟುಮಾಡಿದ ದೇಶಗಳ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕರಿಗೆ ಅಗ್ರ ಹತ್ತು ಕೆಟ್ಟ ದೇಶಗಳ ಪಟ್ಟಿಯಲ್ಲಿ ಭಾರತ, ಈಜಿಪ್ಟ್ ಮತ್ತು ಹೊಂಡುರಾಸ್ ಪ್ರವೇಶಿಸಿವೆ. ವಾಕ್ ಸ್ವಾತಂತ್ರ್ಯ ನಿರಾಕರಿಸಿದ ಅಥವಾ ನಿರ್ಬಂಧಿಸಿದ ದೇಶಗಳ ಸಂಖ್ಯೆ 2019ರಲ್ಲಿ 54 ಇದ್ದದ್ದು, 2020ರಲ್ಲಿ 56ಕ್ಕೆ ಏರಿಕೆ ಆಗಿವೆ. 51 ದೇಶಗಳಲ್ಲಿ ಕಾರ್ಮಿಕರು ಹಿಂಸಾಚಾರಕ್ಕೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.