ETV Bharat / business

ಜಾಗತಿಕ ವೇಗದ ಆರ್ಥಿಕ ಶ್ರೇಯಾಂಕದಲ್ಲಿ ಭಾರತ 3ರಿಂದ 23ಕ್ಕೆ ಕುಸಿದಿದೆ: ಆರ್ಥಿಕ ತಜ್ಞ ಕೌಶಿಕ್ ಬಸು - Indian Economy

ಲಾಕ್‌ಡೌನ್ ಬಳಿಕ ನಿರುದ್ಯೋಗ ದರವು ಶೇ 20ಕ್ಕಿಂತ ಹೆಚ್ಚಾಯಿತು. ಇದು ಜಗತ್ತಿನಲ್ಲಿ ಇರುವುದಕ್ಕಿಂತ ಅತ್ಯಧಿಕವಾಗಿದೆ. ಭಾರತ ಯಶಸ್ವಿ ಸಾಧಿಸಬೇಕೆಂದು ಭಾರತೀಯ ಪ್ರಜೆಯಾಗಿ ಬಯಸುತ್ತೇನೆ. ಆದರೆ, ನಾನು ಇದರಿಂದ ನಿರಾಶೆಗೊಂಡಿದ್ದೇನೆ. ರಾಜಕೀಯ ವಿಚಾರಗಳಲ್ಲಿ ನಾನು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಇದೆಲ್ಲದರ ಹೊರತಾಗಿಯೂ ಈ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉದ್ದೇಶಿತ ಗುರಿಯತ್ತ ಕರೆದೊಯ್ಯುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ, ಇತ್ತೀಚಿನ ನಡವಳಿಕೆಯಿಂದ ನನಗೆ ದೊಡ್ಡ ನಿರಾಶೆಯಾಗಿದೆ.

Kaushik Basu
ಕೌಶಿಕ್ ಬಸು
author img

By

Published : Jul 13, 2020, 8:34 PM IST

ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಅವರು ವಿಶ್ವಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷರಾಗಿ ಮತ್ತು ಅದರ ಮುಖ್ಯ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದ್ದವರು. ಭಾರತದ ಅರ್ಥವ್ಯವಸ್ಥೆಯನ್ನು ಆಳವಾಗಿ ಕಂಡವರು. ಭಾರತದ ಆರ್ಥಿಕತೆಯ ಬಗ್ಗೆ ಕೌಶಿಕ್ ಬಸುಗಿಂತ ಚೆನ್ನಾಗಿ ಮಾತನಾಡಬಲ್ಲವರು ಇರಲಾರರು. ಪ್ರಸ್ತುತ, ಕೊರೊನಾ ಸೋಂಕಿನಿಂದ ಹೊಡೆತ ತಿನ್ನುತ್ತಿರುವ ಭಾರತದ ಆರ್ಥಿಕತೆಯ ಬಗ್ಗೆ ತಾವು ಗಮನಿಸಿದ್ದನ್ನು ಈಟಿವಿ ಭಾರತಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

2019-20ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 4.2ಕ್ಕೆ ಇಳಿದಿದೆ. ಇದು 11 ವರ್ಷಗಳಲ್ಲಿ ನಿಧಾನಗತಿಯ ವೇಗ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 3-5ರಷ್ಟು ಸಂಕುಚಿತಗೊಳ್ಳುತ್ತದೆ ಎಂಬುದು ಹಲವು ರೇಟಿಂಗ್ ಏಜೆನ್ಸಿಗಳ ಅಂದಾಜು. ಮತ್ತೊಂದೆಡೆ, ಕೋವಿಡ್​ ಸೋಂಕು ವೇಗವಾಗಿ ಹಬ್ಬುತ್ತಿದೆ. ನಾವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ವ್ಯಾಪ್ತಿಯೆಷ್ಟು ? ಈ ಬಿಕ್ಕಟ್ಟು ಎಷ್ಟರಮಟ್ಟಿಗೆ ಕೆಟ್ಟದು?

ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಬಹಳ ಆತಂಕಕಾರಿಯಾಗಿದೆ. ನಿಧಾನಗತಿಯು ನಮಗೆ ಅರ್ಥ ಆಗುವಂತಹದ್ದು. ಏಕೆಂದರೆ, ಕೋವಿಡ್​-19 ಸೋಂಕು ಪ್ರಪಂಚದಾದ್ಯಂತ ಆರ್ಥಿಕತೆಯನ್ನು ಮಂದಗತಿಗೆ ತಳಿದೆ. ಸಾಮಾನ್ಯ ಕುಸಿತವು ದೇಶದ ಶ್ರೇಯಾಂಕವನ್ನು ಬದಲಿಸಲು ಕಾರಣ ಆಗಬಾರದು. ಇತ್ತೀಚಿನ ದಿನಗಳಲ್ಲಿ ನಾವು ಭಾರತ, ಎಲ್ಲಾ ಜಾಗತಿಕ ಶ್ರೇಯಾಂಕಗಳಲ್ಲಿ ಕುಸಿಯುತ್ತಿರುವುದನ್ನು ಕಾಣುತ್ತಿದ್ದೇವೆ.

ವಿಶ್ವದ 43 ಪ್ರಮುಖ ಆರ್ಥಿಕತೆಗಳ ಬಗ್ಗೆ ಎಕನಾಮಿಸ್ಟ್ ನಿಯತಕಾಲಿಕೆಯ 'ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ಪ್ರತಿ ವಾರ ಘೋಷಿಸುವ ಶ್ರೇಯಾಂಕದಲ್ಲಿ ಭಾರತ ಹಲವು ವರ್ಷಗಳಿಂದ ವೇಗವಾಗಿ ಬೆಳೆಯುತ್ತಿರುವ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಿತ್ತು. ಇದು ಈಗ 23ನೇ ಸ್ಥಾನಕ್ಕೆ ಇಳಿದಿದೆ. ಸಾಂಕ್ರಾಮಿಕ ರೋಗ ಹಬ್ಬುವ ಎರಡು ವರ್ಷಗಳ ಮೊದಲೇ ಭಾರತದಲ್ಲಿ ತೀವ್ರ ಮಂದಗತಿ ಪ್ರಾರಂಭವಾಗಿತ್ತು. ಲಾಕ್‌ಡೌನ್ ಕಾರ್ಯಗತಗೊಳಿಸಿದ ರೀತಿಯಿಂದಾಗಿ ಆರ್ಥಿಕತೆ ಮತ್ತಷ್ಟು ಕೆಳಮುಖವಾಯಿತು.

ಲಾಕ್‌ಡೌನ್ ಬಳಿಕ ನಿರುದ್ಯೋಗ ದರವು ಶೇ 20ಕ್ಕಿಂತ ಹೆಚ್ಚಾಯಿತು. ಇದು ಜಗತ್ತಿನಲ್ಲಿ ಇರುವುದಕ್ಕಿಂತ ಅತ್ಯಧಿಕವಾಗಿದೆ. ಭಾರತ ಯಶಸ್ವಿ ಸಾಧಿಸಬೇಕೆಂದು ಭಾರತೀಯ ಪ್ರಜೆಯಾಗಿ ಬಯಸುತ್ತೇನೆ. ಆದರೆ, ನಾನು ಇದರಿಂದ ನಿರಾಶೆಗೊಂಡಿದ್ದೇನೆ. ರಾಜಕೀಯ ವಿಚಾರಗಳಲ್ಲಿ ನಾನು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಇದೆಲ್ಲದರ ಹೊರತಾಗಿಯೂ ಈ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉದ್ದೇಶಿತ ಗುರಿಯತ್ತ ಕರೆದೊಯ್ಯುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ, ಇತ್ತೀಚಿನ ನಡವಳಿಕೆಯಿಂದ ನನಗೆ ದೊಡ್ಡ ನಿರಾಶೆಯಾಗಿದೆ.

ಮೂಲಭೂತ ಅಂಶಗಳು ಮತ್ತು ದೇಶದೊಳಗಿನ ಪ್ರತಿಭೆಗಳ ದೃಷ್ಟಿಯಿಂದ ನೋಡುವುದಾರೇ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಆದರೆ, ನಾವು ಇದಕ್ಕೆ ವಿರುದ್ಧದ ದಿಕ್ಕಿನಲ್ಲಿ ಚಲಿಸುತ್ತಿದ್ದೇವೆ. 2020ರಲ್ಲಿ ಭಾರತದ ಬೆಳವಣಿಗೆಯು 1979ರಲ್ಲಿ ಕಂಡ ಶೇ -5.2ರಷ್ಟಕ್ಕಿಂತ ಕಡಿಮೆ ಆಗುವ ಸಾಧ್ಯತೆಯಿದೆ. ಇದು ಸ್ವಾತಂತ್ರ್ಯದ ನಂತರ ದಾಖಲಾದ ನಿಧಾನಗತಿಯ ಬೆಳವಣಿಗೆಯಾಗಿದೆ.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಅನ್ನು ಹೇಗೆ ಅಂದಾಜುಸುತ್ತೀರಿ? ಇದು ಆರ್ಥಿಕತೆಗೆ ಉತ್ತೇಜನ ನೀಡುವುದೇ?

ಗಾತ್ರದ ಪ್ರಕಾರದಲ್ಲಿ 20 ಲಕ್ಷ ಕೋಟಿ ರೂ. ಘೋಷಿಸಲಾಗಿದೆ ಎಂಬುದು ಕೇಳಿ ನನಗೆ ಸಂತೋಷವಾಯಿತು. ಇದನ್ನು ಸರಿಯಾಗಿ ಬಳಸಿದರೆ ಬಹಳಷ್ಟು ಒಳ್ಳೆಯದನ್ನು ಮಾಡಬಹುದು.

ಪ್ಯಾಕೇಜ್‌ನಲ್ಲಿ ಅಗತ್ಯವಿರುವರಿಗೆ ಸಮರ್ಪಕ ಮತ್ತು ನೇರ ಲಾಭದ ಬೆಂಬಲವಿಲ್ಲ ಎಂಬ ವಾದವಿದೆಯಲ್ಲಾ?

ಅದು ಒಪ್ಪಿಕೊಳ್ಳುವಂತಹ ಟೀಕೆ. ಇಂತಹ ಬಿಕ್ಕಟ್ಟಿನ ನಡುವೆ ಅಗತ್ಯವಾಗಿ ಮಾಡಬೇಕೆಂದರೇ ತಕ್ಷಣವೇ ಬಡವರ ಕೈಗೆ ಹಣ ಸಿಗುವಂತೆ ಮಾಡುವುದು. ಇದನ್ನು ಯುದ್ಧ ನಡೆದಿದೆ ಎಂಬ ಆಧಾರದ ಮೇಲೆ ಮಾಡಬೇಕು. ದುರದೃಷ್ಟಕರ ಸಂಗತಿಯೆಂದರೇ ನಾವು ಅಂತಹ ಪಾಲಿಸಿಗಳನ್ನು ಕಾಣುತ್ತಿಲ್ಲ.

ಆ ಕಾರಣಕ್ಕಾಗಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದಾಗ ನನಗೆ ಖುಷಿಯಾಗಿದೆ ಎಂದು ಹೇಳಿದೆ. ಅನುಷ್ಠಾನ ಕ್ರಮಗಳಿಲ್ಲದೆ ಇದೊಂದು ಉತ್ತಮ ಶೀರ್ಷಿಕೆಯಾಗಿ ಉಳಿದಿದೆ ಎಂಬ ಆತಂಕದಲ್ಲಿದ್ದೇನೆ ಎಂದು ನಾನು ನನ್ನ ಈ ಹಿಂದಿನ ಮಾತಿಗೆ ಈ ಹೇಳಿಕೆ ಸೇರಿಸಬೇಕಿದೆ.

ನಮ್ಮ ಆರ್ಥಿಕತೆಯು ಬಳಲುತ್ತಿರಲು ಮುಖ್ಯಕಾರಣವೆಂದರೇ ನಾವು ಉತ್ತಮ ಶೀರ್ಷಿಕೆಯಷ್ಟೇ ಸೃಷ್ಟಿಸುತ್ತಿದ್ದೇವೆ. ಅದನ್ನು ಮೀರಿ ಸ್ವಲ್ಪವೂ ಅನುಷ್ಠಾನಗಳನ್ನು ಮಾಡುತ್ತಿಲ್ಲ.

ಸರ್ಕಾರ ಆರ್ಥಿಕತೆಯನ್ನು ಸಂರಕ್ಷಿಸಲು ಏನು ಮಾಡಬೇಕು? ಕೋವಿಡ್​-19ರ ಆರ್ಥಿಕ ಪರಿಣಾಮಗಳು ಎಷ್ಟು ದಿನ ಮುಂದುವರಿಯುತ್ತವೆ?

Gdp
ಜಿಡಿಪಿ ವೃದ್ಧಿ

ಸಿಂಹಾವಲೋಕನ ಮಾಡಿದರೇ ಲಾಕ್‌ಡೌನ್ ತೀರಾ ಕಳಪೆಯಾಗಿ ಕಾರ್ಯಗತಗೊಂಡಿತು. ಅದು ನಾವು ಹೊಂದಿರಬೇಕಾದದ್ದಕ್ಕಿಂತ ಆರ್ಥಿಕತೆಯನ್ನು ನಿಧಾನಗೊಳಿಸಿದೆ ಮತ್ತು ವೈರಸ್ ಹರಡಲು ಅದೇ ಲಾಖ್​ಡೌನ್​ ಕಾರಣವಾಗಿದೆ.

ಭಾರತದ ಲಾಕ್‌ಡೌನ್ ವಿಶ್ವದ ಅತ್ಯಂತ ಪ್ರಯಾಸಕರ ದಿಗ್ಬಂಧನವಾಗಿತ್ತು. ಇದು ಜಾರಿಗೆ ತಂದಾಗ ನನಗೆ ಸಂತೋಷವಾಯಿತು. ಲಾಕ್‌ಡೌನ್ ನಿರ್ವಹಣೆಯ ನೀತಿಗಳು ವಿವರವಾದ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿರಬೇಕು ಎಂಬುದು ನನಗೆ ಖಾತ್ರಿಯಿತ್ತು.

ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ಕಾರ್ಮಿಕರನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ನೀವು ಗುರುತರ ಯೋಜನೆಗಳನ್ನು ಹೊಂದಿರಬೇಕು. ಪೂರೈಕೆ ಸರಪಳಿ ಕಡಿಯುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಿಮಗೆ ನೀತಿಗಳು ಅಗತ್ಯವಾಗುತ್ತವೆ. ಆಸ್ಪತ್ರೆಗಳಿಗೆ ಸೌಲಭ್ಯಗಳ ವಿಸ್ತರಣೆ ಮತ್ತು ವೈದ್ಯಕೀಯ ಪರೀಕ್ಷಾ ಕೇಂದ್ರಗಳನ್ನು ತ್ವರಿತವಾಗಿ ನಿರ್ಮಿಸುವ ಯೋಜನೆಗಳೂ ಹಾಕಿಕೊಳ್ಳಬೇಕು. ಇದಾವುದನ್ನು ಮಾಡದಿದ್ದರೇ ಲಾಕ್‌ಡೌನ್‌ನ ಕೊನೆಯಲ್ಲಿ ಅಣುವಿನಷ್ಟು ಸಾಧಿಸಿದಂತಾಗುತ್ತದೆ. ಭಾರತದಲ್ಲಿ ಸಂಭವಿಸಿದ್ದು ಕೂಡ ಇದೇ.

ಈ ಪೋಷಕಿನ ಮುಖವಾಡ ಹೊತ್ತ ನೀತಿಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಶೀಘ್ರದಲ್ಲೇ ಸ್ಪಷ್ಟವಾಯಿತು. ಕಾರ್ಮಿಕರನ್ನು ಕೆಲಸವಿಲ್ಲದೆ ಬೀದಿಗೆ ತಳ್ಳಲಾಯಿತು. ಅವರನ್ನು ಒಟ್ಟಾಗಿ ಕೂಡಿಹಾಕಲಾಯಿತು. ಅವೆರಲ್ಲರೂ ತಮ್ಮ ಮನೆಗಳತ್ತ ನಡೆಯಲು ಪ್ರಾರಂಭಿಸಿದಾಗ ವೈರಸ್ ಹಬ್ಬಲು ಪ್ರಾರಂಭಿಸಿತು.

ಎಲ್ಲಾ ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆ ಆಗುತ್ತಿದೆ. ಈ ಪ್ರದೇಶದಲ್ಲಿ ಭಾರತ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದೆ. ಲಾಕ್​ಡೌನ್ ಹೇರಿದ​ ಸಮಯದಿಂದಲೂ ವೈರಸ್ ವೇಗವಾಗಿ ಬೆಳೆಯುತ್ತಲೇ ಇದೆ. ಇದನ್ನು ತಪ್ಪಿಸಬಹುದಿತ್ತು. ಇದು ಎಷ್ಟು ಕಾಲ ಉಳಿಯುತ್ತದೆ ಎಂಬುದು ಸಾಂಕ್ರಾಮಿಕ ರೋಗವು ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅದರ ಮೇಲೆ ನನಗೆ ಹೆಚ್ಚಿನದ್ದು ತಿಳಿದಿಲ್ಲ.

Kaushik Basu
ಆರೋಗ್ಯ ವೆಚ್ಚ

ಅದರ ಪರಿಣಾಮಗಳು ಆರ್ಥಿಕತೆ ಮೇಲೆ ಬೀರಿದಂತೆಲ್ಲಾ ಭಾರತವು ಅಡ್ಡದಾರಿಯಲ್ಲಿ ಬಂದು ನಿಂತಿದೆ. ಮೂಲಭೂತ ವಿಷಯಗಳಲ್ಲಿ ಭಾರತವು ಅತ್ಯಂತ ಪ್ರಬಲವಾಗಿದೆ; ಉತ್ತಮವಾದ ಉನ್ನತ ಶಿಕ್ಷಣ, ಸಂಶೋಧನಾ ಕ್ಷೇತ್ರವು ಬಲಿಷ್ಠವಾಗುತ್ತಿದೆ ಜೊತೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರಿ ದೊಡ್ಡ ಸಾಮರ್ಥ್ಯ ಹೊಂದಿದೆ. ಆದರೆ, ನಾವು ಇವುಗಳಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. ಈ ಎಲ್ಲ ಸಾಮರ್ಥ್ಯಗಳ ಹೊರತಾಗಿಯೂ ಆರ್ಥಿಕತೆಯು ದುರ್ಬಲಗೊಳ್ಳುವ ಅಪಾಯವಿದೆ.

ಸಾಂಕ್ರಾಮಿಕ ಹತೋಟಿಗಿಂತ ಸರ್ಕಾರವು ಆರ್ಥಿಕತೆ ಮತ್ತು ವೈಯಕ್ತಿಕ ನಡುವಳಿಕೆಯನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸಿತ್ತು. ಇದು ನನಗೆ ಚಿಂತಿಸುವಂತೆ ಮಾಡುತ್ತಿದೆ. ಭಾರತಕ್ಕೆ ಲೈಸನ್ಸ್​ ರಾಜ್ಯ ಎಂಬ ಸುದೀರ್ಘ ಇತಿಹಾಸವಿದೆ. ಲೈಸನ್ಸ್​ ವ್ಯವಸ್ಥೆ ಮತ್ತು ಅತಿಯಾದ ಅಧಿಕಾರಶಾಹಿಯ ನಿಯಂತ್ರಣ, ಮೊದಲಿನಂತೆ ಸಾಕಷ್ಟು ಕೆಟ್ಟದಾಗಿದೆ. ಅತಿಯಾದ ರಾಜಕೀಯ ನಿಯಂತ್ರಣ ಜೊತೆಗೆ ಪರವಾನಿಗೆ ವ್ಯವಸ್ಥೆಯು ಇನ್ನಷ್ಟು ಹಾನಿಕಾರಕವಾಗಿದೆ.

ಇದು ಎಂದಿಗೂ ಸಂಭವಿಸದ ಸಮಸ್ಯೆ. ಲಾಕ್‌ಡೌನ್‌ನೊಂದಿಗೆ ಪೋಷಕ ನೀತಿಗಳ ಕೊರತೆಯಿಂದಾಗಿ ಇದು ಸಂಭವಿಸಿದೆ. ಎಲ್ಲಾ ಸಾಂಕ್ರಾಮಿಕ ರೋಗಗಳು ನಂಬಿಕೆಯನ್ನು ಕುಸಿಯಲು ಕಾರಣವಾಗುತ್ತವೆ. ಭಾರತದಲ್ಲಿ ಸಮಾಜದ ಮೇಲಿನ ನಮ್ಮ ನಂಬಿಕೆ ದೊಡ್ಡ ಹಿಟ್ ಆಗಿದೆ. ಬೇಡಿಕೆಯನ್ನು ಹೆಚ್ಚಿಸಲು ಮತ್ತು ನಮ್ಮ ಸಂಸ್ಥೆಗಳಲ್ಲಿ ವಿಶ್ವಾಸ ಮತ್ತು ವಿಶ್ವಾಸವನ್ನು ಪುನರ್ನಿರ್ಮಿಸಲು ನಾವು ವಿತ್ತೀಯ ಮತ್ತು ಹಣಕಾಸಿನ ನೀತಿಗಳ ಸಂಯೋಜನೆಯನ್ನು ಬಳಸಬೇಕಾಗಿದೆ.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಅವರು ಮುಂದಿನ ದಿನಗಳಲ್ಲಿ ನಗರಗಳಿಗೆ ಹಿಂತಿರುಗುವುದಿಲ್ಲ. ಈ ಪರಿಸ್ಥಿತಿ ನಗರ ಮತ್ತು ಗ್ರಾಮೀಣ ಆರ್ಥಿಕತೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯಾ?

ಬೇಡಿಕೆ ವೃದ್ಧಿಸಲು ಮತ್ತು ನಮ್ಮ ಸಂಸ್ಥೆಗಳಲ್ಲಿ ವಿಶ್ವಾಸ ಹಾಗೂ ನಂಬಿಕೆಯನ್ನು ಪುನರ್ನಿರ್ಮಿಸಲು ನಾವು ವಿತ್ತೀಯ ಮತ್ತು ಹಣಕಾಸಿನ ನೀತಿಗಳ ಸಂಯೋಜನೆಯನ್ನು ಬಳಸಬೇಕಾಗಿದೆ.

Kaushik Basu
ಕೌಶಿಕ್ ಬಸು

ಇತ್ತೀಚಿನ ಸಂದರ್ಶನವೊಂದರಲ್ಲಿ ನೀವು 'ಭಾರತದಲ್ಲಿ ಅಸಮಾನತೆ ತುಂಬಾ ಹೆಚ್ಚಾಗಿದೆ. ಇದು ಚಿಂತಾಜನಕವಾಗಿದೆ. ಕೊರೊನಾವು ಅಸಮಾನತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂಬುದು ನನ್ನ ಭಯ ಎಂದಿದ್ದೀರಾ, ನಿಜವಾಗಿಯೂ ಇದು ಗಂಭೀರ ವಿಷಯವಾ? ಇದನ್ನು ಪರಿಹರಿಸುವುದು ಹೇಗೆ?

ಭಾರತದ ಅಸಮಾನತೆಯು ಸ್ವೀಕಾರಾರ್ಹವಲ್ಲ. ಒಂದು ವರ್ಷದ ಹಿಂದೆ ನಡೆದ ಆಕ್ಸ್‌ಫ್ಯಾಮ್ ಅಧ್ಯಯನದ ಪ್ರಕಾರ, ಭಾರತದ ಶೇ 1ರಷ್ಟು ಜನ ದೇಶದ ಸಂಪತ್ತಿನ ಶೇ 73ರಷ್ಟು ಪಾಲು ಹೊಂದಿದ್ದಾರೆ ಎಂಬುದು ತೋರಿಸುತ್ತದೆ. ಅರ್ಥಶಾಸ್ತ್ರಜ್ಞನಾಗಿ ನನಗೆ ತಿಳಿದಿದೆ ಆರ್ಥಿಕ ಅಸಮಾನತೆ ಇರುತ್ತದೆ ಮತ್ತು ಅದರಲ್ಲಿ ಕೆಲವು ಪ್ರೋತ್ಸಾಹಕಗಳನ್ನು ಸೃಷ್ಟಿಸಲು ಅಗತ್ಯವಾಗಿರುತ್ತದೆ. ಆದರೆ ಈ ಆಘಾತಕಾರಿ ಉನ್ನತ ಮಟ್ಟದಲ್ಲಿ ನಮಗೆ ಅಸಮಾನತೆಯ ಅಗತ್ಯವಿಲ್ಲ.

ಇದು ಎಂದಿಗೂ ಸಂಭವಿಸದ ಸಮಸ್ಯೆ. ಲಾಕ್‌ಡೌನ್‌ ಜೊತೆಗೆ ಪೋಷಕ ನೀತಿಗಳ ಕೊರತೆಯಿಂದಾಗಿ ಇದು ಸಂಭವಿಸಿದೆ. ಎಲ್ಲಾ ಸಾಂಕ್ರಾಮಿಕ ರೋಗಗಳು ನಂಬಿಕೆಯನ್ನು ಕುಸಿಯಲು ಕಾರಣವಾಗುತ್ತವೆ. ಭಾರತದಲ್ಲಿ ಸಮಾಜದ ಮೇಲಿನ ನಮ್ಮ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ.

ನಮ್ಮಲ್ಲಿ ಇನ್ನೂ ಲಕ್ಷಾಂತರ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇಂತಹ ದೊಡ್ಡ ಸಂಪತ್ತು ವ್ಯತ್ಯಾಸಗಳಿಗೆ ಯಾವುದೇ ನೈತಿಕ, ರಾಜಕೀಯ ಅಥವಾ ಆರ್ಥಿಕ ತಾರ್ಕಿಕತೆಯಿಲ್ಲ.

ಸಾಂಕ್ರಾಮಿಕವು ಡಿಜಿಟಲ್ ತಂತ್ರಜ್ಞಾನದ ಪ್ರಗತಿಯನ್ನು ವೇಗಗೊಳಿಸಲಿದೆ ಎಂದು ನಾನು ಭಾವಿಸುತ್ತೇನೆ. ಸ್ವತಃ ಇದು ಒಳ್ಳೆಯ ಸುದ್ದಿ. ಆದರೆ, ಅದರ ಪ್ರಯೋಜನಗಳನ್ನು ಸಣ್ಣ ಗುಂಪಿಗೆ ಸಿಗದಂತ ನೀತಿಗಳನ್ನು ತರಬೇಕು.

2025ರ ವೇಳೆಗೆ 5 ಟ್ರಿಲಿಯನ್ ಯುಎಸ್​ಡಿ ಆರ್ಥಿಕತೆ ಕನಸು ಈಡೇರುತ್ತಾ?

2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯು ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಅಸಾಧ್ಯವಾಗಿತ್ತು. ಇದರ ಹೊರತಾಗಿಯೂ ಯುಎಸ್ ಡಾಲರ್ ಮೌಲ್ಯವು ತೀವ್ರವಾಗಿ ಕುಸಿಯಿತು. ನಮಗೆ ಆರೋಗ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಿದೆ.

ಇದು ನಮ್ಮಲ್ಲಿನ ದೀರ್ಘಕಾಲದ ಸಮಸ್ಯೆಯಾಗಿದೆ. ಹಿಂದಿನ ಸರ್ಕಾರಗಳ ವೈಫಲ್ಯ ಸಹ ಇದರಲ್ಲಿದೆ. ನಾವು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಮಾಡಿಲ್ಲ. ಬಾಂಗ್ಲಾದಂತಹ ಹೆಚ್ಚು ಬಡವರು ಇರುವ ಆರ್ಥಿಕತೆಯು ಸಹ ಉತ್ತಮ ಸಾಧನೆ ಮಾಡಿದೆ. ಈಗ ಬಾಂಗ್ಲಾದೇಶಿಯರ ಜೀವಿತಾವಧಿ ಭಾರತೀಯರಿಗಿಂತ 3 ವರ್ಷ ಹೆಚ್ಚಾಗಿದೆ.

ಲಡಾಖ್‌ನಲ್ಲಿ ಚೀನಾದ ಆಕ್ರಮಣಕ್ಕೆ ಆರ್ಥಿಕ ಪ್ರತಿಕ್ರಿಯೆಯ ಭಾಗವಾಗಿ ಭಾರತವು ಚೀನಾದಿಂದ ಆಮದು ತಗ್ಗಿಸಲು ಪ್ರಯತ್ನಿಸುತ್ತಿದೆ. ದೇಶಿ ಉತ್ಪಾದನಾ ವಲಯ ಇದರ ಲಾಭ ಪಡೆಯಬಹುದೇ?

ಇದು ಸಾಂಕೇತಿಕ ಕ್ರಿಯೆಯಷ್ಟೆ. ಇದು ಯಾವುದೇ ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ. ಒಳ್ಳೆಯದು ಅಥವಾ ಕೆಟ್ಟದು.

ಹೊಸ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕೈಗಾರಿಕಾ ನೀತಿಗಳನ್ನು ರೂಪಿಸಿದರೆ, ಹಲವು ದೊಡ್ಡ ವಿದೇಶಿ ಕಂಪನಿಗಳು ತಮ್ಮ ಹೂಡಿಕೆಗಳನ್ನು ಚೀನಾದಿಂದ ಭಾರತಕ್ಕೆ ವರ್ಗಾವಣೆ ಆಗುತ್ತವೆ ಎಂದು ಉದ್ಯಮದ ಕೆಲವರು ಹೇಳುತ್ತಾರೆ. ವಾಸ್ತವದಲ್ಲಿ ಇದು ಸಂಭವಿಸುತ್ತದೆಯೇ?

ಜಾಗತಿಕ ಬಂಡವಾಳ ಆಕರ್ಷಿಸಲು ಭಾರತಕ್ಕೆ ದೊಡ್ಡ ಅವಕಾಶವಿದೆ. ಇದು ನಾನು ಮೊದಲೇ ಹೇಳುತ್ತಿದ್ದ ವಿಷಯ. ಭಾರತವು ಮೂಲಭೂತ ಸಾಮರ್ಥ್ಯಗಳನ್ನು ಹೊಂದಿದೆ. ಇದು ಜಾಗತಿಕ ಬಂಡವಾಳವನ್ನು ಆಕರ್ಷಿಸಬಹುದು ಮತ್ತು ಬೆಳವಣಿಗೆಯ ದೃಷ್ಟಿಯಿಂದ ದೇಶವನ್ನು ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಬಹುದು. ಆದರೆ, ನಾವು ನೀತಿ ನಿರೂಪಣೆಯಲ್ಲಿ ಕಡಿಮೆ ವೃತ್ತಿಪರತೆ ತೋರಿಸುತ್ತಿದ್ದೇವೆ. ಮಾರುಕಟ್ಟೆಗಳು ಮತ್ತು ಸಂಸ್ಥೆಗಳ ಮೇಲೆ ರಾಜಕೀಯ ನಿಯಂತ್ರಣ ಏರಿಕೆ ಕಂಡುಬಂದಿದೆ.

ಕಳೆದ ಮಾರ್ಚ್​ನಲ್ಲಿ ಭಾರತವು 16 ಬಿಲಿಯನ್ ಡಾಲರ್​ಗಳ ಬಂಡವಾಳದ ಹೊರಹರಿ ಕಂಡಿತು. ಇದು ಒಂದು ತಿಂಗಳಲ್ಲಿ ಅತಿದೊಡ್ಡ ಹೊರಹರಿವು. ಚೀನಾ ತೊರೆಯುತ್ತಿರುವ ಬಂಡವಾಳವು ವಿಯೆಟ್ನಾಂ, ಮೆಕ್ಸಿಕೊ ಮತ್ತು ಇತರ ರಾಷ್ಟ್ರಗಳ ನಿರ್ಲಕ್ಷ್ಯದಿಂದ ಭಾರತಕ್ಕೆ ಹರಿದುಬರಬಹುದು.

ಇನ್ನು ಕಾಲ ಮಿಂಚಿಲ್ಲ. ವೃತ್ತಿಪರ ನೀತಿ- ನಿರೂಪಣೆ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಅನ್ನು ಮೌಲ್ಯೀಕರಿಸುವ, ಗುಂಪು- ಗುಂಪುಗಳ ಮಧ್ಯೆ ದ್ವೇಷ ಬದಲು ನಾಗರಿಕರಲ್ಲಿ ವಿಶ್ವಾಸವನ್ನು ಬೆಳೆಸುವ ಆಧುನಿಕ ರಾಷ್ಟ್ರ ಎಂಬ ಸಂಕೇತವನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ.

ಕೊರೊನಾ ನಂತರ ಜಾಗತಿಕ ಆರ್ಥಿಕ ಕ್ರಮದಲ್ಲಿ ನೀವು ನಿರೀಕ್ಷಿಸುವ ಬದಲಾವಣೆಗಳೇನು?

ಜಾಗತಿಕ ಆರ್ಥಿಕ ಹೆಜ್ಜೆಯಲ್ಲಿ ಬಹಳಷ್ಟು ಬದಲಾಗಲಿದೆ. ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ತೀವ್ರ ಏರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆ ಆಗಲಿದೆ ಎಂದು ನಾನು ಭಾವಿಸುತ್ತೇನೆ.

ಆರೋಗ್ಯ ಕ್ಷೇತ್ರವು ಇನ್ನಷ್ಟು ವಿಸ್ತರಣೆ ಆಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಹೆಚ್ಚು ಆಸ್ಪತ್ರೆಗಳು, ಉತ್ತಮ ಔಷಧಿ, ಮತ್ತು ಆರೋಗ್ಯ ರಕ್ಷಣೆಯ ಹೊಸ ಸಂಶೋಧನೆಯು ಜನರಿಗೆ ಆರೋಗ್ಯ ರಕ್ಷಣೆಯ ವ್ಯಾಪಕ ಅವಕಾಶ ನೀಡಲಿವೆ. ಐಟಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಭಾರತವು ನೈಸರ್ಗಿಕ ಶಕ್ತಿ ಹೊಂದಿರುವ ಎರಡು ಪ್ರಮುಖ ಕ್ಷೇತ್ರಗಳಾಗಿವೆ. ಇದನ್ನು ನಾನು ನಿಮಗೆ ಹೇಳಬೇಕಾಗಿಲ್ಲ.

ನಿಮ್ಮ ಪ್ರದೇಶ- ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ಈ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿವೆ. ಆದರೆ ಈ ಸಾಮರ್ಥ್ಯಗಳ ಲಾಭ ಮಾಡಿಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು, ನಾವು ಭಾರತದ ರಾಜಕೀಯ ಹೌಸ್​ ಮತ್ತು ಸಂಸ್ಥೆಗಳನ್ನು ಅನುಕ್ರಮವಾಗಿ ಇಡಬೇಕಿದೆ.

ಕೆಲವು ವರ್ಷಗಳ ಹಿಂದೆ ಇಡೀ ಜಾಗತಿಕ ಮಾಧ್ಯಮಗಳಾದ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಟಿವಿಗಳು ಭಾರತವು ಬೆಳವಣಿಗೆಯ ನಾಯಕ ಎಂದು ಕರೆಯುತ್ತಿದ್ದವು. ಅದು ಈಗ ಬದಲಾಗಿದೆ. ಭಾರತದ ಬಗ್ಗೆ ಪ್ರಪಂಚದಾದ್ಯಂತ ಸಾಕಷ್ಟು ಕಾಳಜಿ ವ್ಯಕ್ತವಾಗುತ್ತಿದೆ. ನಿರ್ದಿಷ್ಟವಾಗಿ, ವಿಭಜಕ ರಾಜಕಾರಣದ ವ್ಯಾಪಕತೆಗೆ ಮತ್ತು ವಿಜ್ಞಾನವನ್ನು ಹಿಂದಕ್ಕೆ ತಳ್ಳುವ ಪ್ರವೃತ್ತಿಯನ್ನು ಪ್ರಶ್ನಿಸುವಿಕೆ ಮತ್ತು ಟೀಕೆಗಳನ್ನು ವಿರೋಧಿಸುವುದು ಕೂಡ ಬದಲಾಗಿದೆ.

ವಿಶ್ವದ ಅತ್ಯಂತ ವಿಫಲ ರಾಷ್ಟ್ರಗಳು ಮಾಡಿದ ಬಹುದೊಡ್ಡ ತಪ್ಪೆಂದರೇ ಎಲ್ಲಾ ಟೀಕೆಗಳನ್ನು ಒಂದು ರೀತಿಯ ಪಿತೂರಿ ಎಂದು ತಳ್ಳಿಹಾಕಿದವು. ಭಾರತ ಎಂದಿಗೂ ಅಂತಹ ತಪ್ಪು ಮಾಡಬಾರದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.