ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಭಾರತದ ನೇಮಕಾತಿ ಚಟುವಟಿಕೆಗಳು ಕುಸಿದ ಬಳಿಕ ಹಠಾತ್ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದ್ದು, ಶೇ 53ರಷ್ಟು ಕಂಪನಿಗಳು 2021ರಲ್ಲಿ ತಮ್ಮ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ಯೋಜನೆ ಹಾಕಿಕೊಂಡಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ವೃತ್ತಿಪರ ನೇಮಕಾತಿ ಸೇವೆಗಳ ಸಂಸ್ಥೆ ಮೈಕೆಲ್ ಪೇಜ್ ಇಂಡಿಯಾದ 'ಟ್ಯಾಲೆಂಟ್ ಟ್ರೆಂಡ್ಸ್ 2021 ವರದಿ' ಪ್ರಕಾರ, ಸಾಂಕ್ರಾಮಿಕ ರೋಗವು 2020ರಲ್ಲಿ ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಇದರಿಂದ ನೇಮಕ ಚಟುವಟಿಕೆಗಳು ಶೇ 18ರಷ್ಟು ಕ್ಷೀಣಿಸಲು ಕಾರಣವಾಯಿತು ಎಂದು ಹೇಳಿದೆ.
ಸಮೀಕ್ಷೆ ಆಧಾರಿತ ವರದಿಯು ಈಗ ಆಶಾವಾದ ಅಂಶಗಳನ್ನು ಹೊರಗೆಡವಿದೆ. ಭಾರತದಲ್ಲಿ ಸುಮಾರು 53 ಪ್ರತಿಶತದಷ್ಟು ಕಂಪನಿಗಳು 2021ರಲ್ಲಿ ತಮ್ಮ ಹೆಡ್‌ಕೌಂಟ್ ಹೆಚ್ಚಿಸಲು ಎದುರು ನೋಡುತ್ತಿವೆ.
ಲಾಕ್ ಡೌನ್ ಹಂತದಲ್ಲೂ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳು ಗಮನಾರ್ಹ ಚಟುವಟಿಕೆಗಳು ನಡೆಸಿವೆ. ಇ-ಕಾಮರ್ಸ್ ಮತ್ತು ಶಿಕ್ಷಣ ತಂತ್ರಜ್ಞಾನದಂತಹ ಅಂತರ್ಜಾಲ ಆಧಾರಿತ ವ್ಯವಹಾರಗಳಲ್ಲಿ ನೇಮಕಾತಿ ಚಟುವಟಿಕೆಗಳು ಭಾರತದಾದ್ಯಂತ ದೃಢವಾಗಿ ಉಳಿದಿವೆ. 2021ರಲ್ಲಿಯೂ ಆವೇಗ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಮೈಕೆಲ್ ಪೇಜ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಿಕೋಲಾಸ್ ಡುಮೌಲಿನ್ ಹೇಳಿದರು.
ಇದನ್ನೂ ಓದಿ: ಲಾಟರಿ ಮಾರಾಟಗಾರನಿಗೆ ಅದೃಷ್ಟ ತಂದ ಮಾರಾಟವಾಗದ ಟಿಕೆಟ್! ಆತ ಗೆದ್ದ ಹಣವೆಷ್ಟು ಗೊತ್ತಾ!
ವರದಿಯ ಪ್ರಕಾರ, ಭಾರತವು 2021ಕ್ಕೆ ಆಶಾವಾದಿ ದೃಷ್ಟಿಕೋನ ಹೊಂದಿದೆ. ಶೇ 60ರಷ್ಟು ಉದ್ಯೋಗದಾತರು ಸಂಬಳ ಹೆಚ್ಚಿಸುವ ಉದ್ದೇಶ ಹೊಂದಿದ್ದಾರೆ. ಆದರೆ, 55 ಪ್ರತಿಶತದಷ್ಟು ಕಂಪನಿಗಳು ಬೋನಸ್ ಪಾವತಿ ನೀಡಲು ಚಿಂತಿಸುತ್ತಿವೆ. ಅವರಲ್ಲಿ 43 ಪ್ರತಿಶತದಷ್ಟು ಜನರು ಇದಕ್ಕೂ ಹೆಚ್ಚಿನದನ್ನು ನೀಡಲು ನೋಡುತ್ತಿದ್ದಾರೆ. ಅದು ಒಂದು ತಿಂಗಳ ಮೌಲ್ಯದ ಬೋನಸ್‌ಗಿಂತ ಅಧಿಕ.
5,500ಕ್ಕೂ ಹೆಚ್ಚು ವಹಿವಾಟು ಮತ್ತು 21,000 ಉದ್ಯೋಗಿಗಳು ಭಾರತ ಸೇರಿ 12 ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 3,500ಕ್ಕಿಂತ ಹೆಚ್ಚು ನಿರ್ದೇಶಕರು ಅಥವಾ ಸಿಎಕ್ಸ್‌ಒಗಳಿದ್ದರು.
ಆರೋಗ್ಯ ಕ್ಷೇತ್ರವು ಸರಾಸರಿ ಶೇ 8ರಷ್ಟು ಹೆಚ್ಚಳದಲ್ಲಿ ಅತಿಹೆಚ್ಚು ವೇತನ ಹೆಚ್ಚಿಸುವ ನಿರೀಕ್ಷೆಯಿದೆ. ಈ ನಂತರ ತ್ವರಿತ ಗ್ರಾಹಕ ಸರಕುಗಳು ಶೇ 7.6ರಷ್ಟು ಮತ್ತು ಇ-ಕಾಮರ್ಸ್ / ಇಂಟರ್ನೆಟ್ ಸೇವೆಗಳು ಶೇ 7.5ರಷ್ಟಿದೆ. ಕೃತಕ ಕಲಿಕೆ ಮತ್ತು ಯಂತ್ರ ಕಲಿಕೆ ಜಾಗದಲ್ಲಿ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ದೇಶದಲ್ಲಿ ತಂತ್ರಜ್ಞಾನದ ಉತ್ಕರ್ಷವು ವಿಶೇಷವಾಗಿ ಸಾಫ್ಟ್‌ವೇರ್-ಎ-ಸರ್ವಿಸ್ (ಸಾಸ್), ಆರೋಗ್ಯ-ತಂತ್ರಜ್ಞಾನ, ಎಜ್ಯುಟೆಕ್ ಮತ್ತು ಗೇಮಿಂಗ್ ಉದ್ಯಮಗಳಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ ಎಂದು ಹೇಳಿದೆ.