ನವದೆಹಲಿ: ಇರಾನ್ನಿಂದ ಕಚ್ಚಾ ತೈಲ ಆಮದಿಗೆ ಅಮೆರಿಕ ವಿಧಿಸಿದ್ದ ತೆರಿಗೆ ವಿನಾಯ್ತಿ ಇದೇ ಮೇ 2ಕ್ಕೆ ಕೊನೆಗೊಳ್ಳಲಿದ್ದು, ಭಾರತ ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ಮಾಡಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಜತೆಗೆ ತಕ್ಷಣಕ್ಕೆ ಸ್ಪರ್ಧಾತ್ಮಕ ಬೆಲೆಯಲ್ಲಿ ಇಂಧನ ಒಪ್ಪಂದ ಮಾಡಿಕೊಳ್ಳುವುದೇ ಸವಾಲಾಗಿದೆ.
ಅಮೆರಿಕ ಈ ನಿರ್ಧಾರದಿಂದ ಇರಾನ್ನಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ. ಪರ್ಯಾಯವಾಗಿ ಸೌದಿ ಅರೇಬಿಯಾ, ಕುವೈತ್, ಯುಎಇ, ಬ್ರೆಜಿಲ್, ಮೆಕ್ಸಿಕೊದಿಂದ ಅಷ್ಟೇ ಪ್ರಮಾಣ ತೈಲ ಆಮದು ಮಾಡಿಕೊಳ್ಳಲಿದೆ. ಈಗಾಗಲೇ ಈ ಬಗ್ಗೆ ಆ ರಾಷ್ಟ್ರಗಳೊಂದಿಗೆ ವಾಣಿಜ್ಯಾತ್ಮಕ ಒಪ್ಪಂದದ ಮಾತುಕತೆ ಮುಗಿಸಿದೆ. ಮೇ ನಂತರವೂ ವಿನಾಯ್ತಿ ಮುಂದುವರಿಸುವಂತೆ ಭಾರತ ಸರ್ಕಾರ ಅಮೆರಿಕದ ಮೇಲೆ ಒತ್ತಡ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತೈಲ ಉತ್ಪಾದಿಸುವ ಇತರೆ ದೇಶಗಳಿಂದ ಸಾಕಷ್ಟು ತೈಲ ಪೂರೈಕೆಯಾಗುತ್ತಿದೆ. ದೇಶಿ ಬೇಡಿಕೆಗಳನ್ನು ಪೂರೈಸಲು ಭಾರತದ ತೈಲಗಾರರು ಸಿದ್ಧವಾಗಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿ ಭಾರತಕ್ಕೆ ಈ ಅವಧಿಯಲ್ಲಿ ತೈಲ ಆಮದು ಪ್ರಮಾಣ ಹಂತ- ಹಂತವಾಗಿ ತಗ್ಗಿಸುವಂತೆ ಸೂಚಿಸಿತ್ತು. ಇದರಿಂದ ಎಚ್ಚೆತ್ತ ಭಾರತವು ಇರಾನ್ನಿಂದ ತೈಲ ಆಮದು ಒಂದು ತಿಂಗಳಿಗೆ 1.5 ಕೋಟಿ ಟನ್ಗಳಿಗೆ ಮಿತಿಗೊಳಿಸಲು ನಿರ್ಧರಿಸಿತ್ತು. ಪ್ರಸ್ತುತ 2.26 ಕೋಟಿ ಟನ್ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು ಆಮದಿನಲ್ಲಿ ಶೇ 10ರಷ್ಟು ತೈಲ ಈ ರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
-
Govt has put in place a robust plan for adequate supply of crude oil to Indian refineries.There will be additional supplies from other major oil producing countries;Indian refineries are fully prepared to meet the national demand for petrol,diesel & other Petroleum products
— Chowkidar Dharmendra Pradhan (@dpradhanbjp) April 23, 2019 " class="align-text-top noRightClick twitterSection" data="
">Govt has put in place a robust plan for adequate supply of crude oil to Indian refineries.There will be additional supplies from other major oil producing countries;Indian refineries are fully prepared to meet the national demand for petrol,diesel & other Petroleum products
— Chowkidar Dharmendra Pradhan (@dpradhanbjp) April 23, 2019Govt has put in place a robust plan for adequate supply of crude oil to Indian refineries.There will be additional supplies from other major oil producing countries;Indian refineries are fully prepared to meet the national demand for petrol,diesel & other Petroleum products
— Chowkidar Dharmendra Pradhan (@dpradhanbjp) April 23, 2019
ಸದ್ಯ, ಬ್ರೆಂಟ್ ತೈಲ ದರ ಆರು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಮಂಗಳವಾರ ಒಂದು ಬ್ಯಾರಲ್ಗೆ 74.46 ಡಾಲರ್ಗಳಿಗೆ ತಲುಪಿದೆ. ಇಂದು ಪ್ರತಿ ಬ್ಯಾರಲ್ ಮೇಲೆ ಶೇ 0.48ರಷ್ಟು ಕುಸಿದು 74.15ರಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕದ ನಿರ್ಧಾರದಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ಸಮಸ್ಯೆ ಆಗುವುದಿಲ್ಲ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತೈಲ ಮಾರುಕಟ್ಟೆ ಉದ್ಯಮಿಗಳು ಅಂದಾಜಿಸುತ್ತಿದ್ದಾರೆ.
ಸಂಭವನೀಯ ತೈಲ ಬೆಲೆ ಏರಿಕೆಯಿಂದ ಹಣದುಬ್ಬರ, ರೂಪಾಯಿ ವಿನಿಮಯ ದರ ಹಾಗೂ ಚಾಲ್ತಿ ಖಾತೆ ಕೊರತೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಮೂರನೇ ಅತಿದೊಡ್ಡ ರಾಷ್ಟ್ರ ಭಾರತ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಈ ನಡುವೆ ಕಾಂಗ್ರೆಸ್ ಈಗಾಗಲೇ ಹೇಳಿಕೆಯೊಂದನ್ನು ನೀಡಿ, ಚುನಾವಣಾ ಫಲಿತಾಂಶದ ಬಳಿಕ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಸುಮಾರು 5- 10 ರೂ ಹೆಚ್ಚಳವಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರ ಜನ ಸಾಮಾನ್ಯರ ಮೇಲೆ ಹೊರೆ ಹಾಕಲು ತೀರ್ಮಾನ ಮಾಡಿದೆ ಎಂಬ ಬಾಂಬ್ ಸಿಡಿಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಚುನಾವಣೆ ಮುಗಿಯುತ್ತಿದ್ದಂತೆ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಪ್ರತಿ ಪಕ್ಷ ಆರೋಪಿಸಿದ್ದು ಗಮನಿಸಬೇಕಾದ ಅಂಶವಾಗಿದೆ.