ETV Bharat / business

ಸಂಕಷ್ಟದ ವಾಹನೋದ್ಯಮಕ್ಕೆ ಕೊರೊನಾ​ ಬರೆ.. ಲಾಕ್​ಡೌನ್ ಬಳಿಕ ನೈಜ ಚಿತ್ರಣ ಬಹಿರಂಗ.. - ಲಾಕ್​ಡೌನ್

ಕೋವಿಡ್​ಗೂ ಮೊದಲು ಭಾರತೀಯ ವಾಹನ ವಲಯವು ದೀರ್ಘಕಾಲದ ಕುಸಿತದಿಂದ ಬಳಲಿತು. 2019-20ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಶೇ 14.68 ರಷ್ಟು ಕುಸಿದು 26,32,665ಕ್ಕೆ ತಲುಪಿದ್ದು, 2018-19ರಲ್ಲಿ 30,85,528 ರಷ್ಟಿತ್ತು.

auto sector
ವಾಹನೊದ್ಯಮ
author img

By

Published : Apr 7, 2020, 3:59 PM IST

ನವದೆಹಲಿ : ಪ್ರಸ್ತುತ ಜಾರಿಯಲ್ಲಿರುವ ಲಾಕ್​ಡೌನ್​ ತೆರವುಗೊಂಡ ಬಳಿಕ ಭಾರತದ ಆಟೋಮೊಬೈಲ್ ಉದ್ಯಮದ ಮೇಲೆ ಕೋವಿಡ್​-19 ಸಾಂಕ್ರಾಮಿಕ ಬೀರಿದ ಪರಿಣಾಮ ಸ್ಪಷ್ಟವಾಗಿ ತಿಳಿದು ಬರಲಿದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋವಿಡ್​ಗೂ ಮೊದಲು ಭಾರತೀಯ ವಾಹನ ವಲಯವು ದೀರ್ಘಕಾಲದ ಕುಸಿತದಿಂದ ಬಳಲಿತು. 2019-20ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಶೇ. 14.68ರಷ್ಟು ಕುಸಿದು 26,32,665ಕ್ಕೆ ತಲುಪಿದೆ. 2018-19ರಲ್ಲಿ 30,85,528 ರಷ್ಟಿತ್ತು. ಹಿಂದಿನ ಹಣಕಾಸು ವರ್ಷದ 2,43,58,082 ಯುನಿಟ್‌ಗಳಿಗೆ ಹೋಲಿಸಿದರೆ, 2019-20ರ ಏಪ್ರಿಲ್-ಫೆಬ್ರವರಿ ಅವಧಿಯಲ್ಲಿ ಒಟ್ಟು ವಾಹನಗಳ ಮಾರಾಟವು ಶೇ.15.85ರಷ್ಟು ಇಳಿಕೆಯಾಗಿದೆ. 2,04,98,128 ಯುನಿಟ್‌ಗಳಿಗೆ ತಲುಪಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕ ( ಸಿಯಾಮ್) ಅಂಕಿ-ಅಂಶಗಳು ತಿಳಿಸುತ್ತವೆ.

ಕೊರೊನಾ ವೈರಸ್ ಹಬ್ಬುವಿಕೆ ವಾಹನೋದ್ಯಮಕ್ಕೆ ಸಾಕಷ್ಟು ಹೊಡೆತ ನೀಡಿದೆ. ವಾಹನ ಉದ್ಯಮದ ತ್ವರಿತ ಅಂದಾಜಿನ ಪ್ರಕಾರ, ಆಟೋ ಮೂಲ ಉಪಕರಣ ತಯಾರಕ (ಒಇಎಂ) ಮತ್ತು ಘಟಕಗಳ ಮುಚ್ಚಿದ್ದರಿಂದ ನಿತ್ಯ 2,300 ಕೋಟಿ ರೂ.ಗಳಿಗಿಂತ ಹೆಚ್ಚಿನ ನಷ್ಟವಾಗುತ್ತಿದೆ ಎಂದು ಸಿಯಾಮ್ ಅಧ್ಯಕ್ಷ ರಾಜನ್ ವಾಧೇರಾ ಹೇಳಿದ್ದಾರೆ. ಆಟೋ ಉದ್ಯಮವು ಭಾರತದಲ್ಲಿ ಕೋವಿಡ್​-19 ಕಂಬಂಧಬಾಹುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಲಾಕ್‌ಡೌನ್ ತೆಗೆದು ಹಾಕಿದ ನಂತರ ಮತ್ತು ಸೂಕ್ತ ಉತ್ಪಾದನೆ ಶುರುವಾಗಿ ಪೂರೈಕೆ ಸರಪಳಿ ಚಾಲನೆಗೊಳ್ಳುತ್ತಿದ್ದಂತೆ ಅದರ ಪರಿಣಾಮವು ಸ್ಪಷ್ಟವಾಗುತ್ತದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಪಿಟಿಐಗೆ ತಿಳಿಸಿದರು. ಆಟೋ ಬೇಡಿಕೆಯು ದೇಶದ ಜಿಡಿಪಿ ಬೆಳವಣಿಗೆಯೊಂದಿಗೆ ನೇರ ಸಂಬಂಧ ಹೊಂದಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಸಾಮಾನ್ಯತೆ ಪುನಃಸ್ಥಾಪಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬ ಆಸೆಯ ಉದ್ಯಮ ಹೊಂದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.