ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕ ಆರ್ಥಿಕತೆಯ ಮುನ್ಸೂಚನೆಯನ್ನು ಪರಿಷ್ಕರಿಸಿದೆ.
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಮಧ್ಯೆಯೂ ಮುಂದುವರಿದ ಮತ್ತು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ದಾಖಲೆಯ ಸಾಲದ ಮಟ್ಟದ ಕುರಿತು ಎಚ್ಚರಿಕೆ ನೀಡಿದೆ.
ಜಾಗತಿಕ ಉತ್ಪಾದನೆಯು 2020ರಲ್ಲಿ ಶೇ 4.9 ರಷ್ಟು, ಐಎಂಎಫ್‌ನ ಏಪ್ರಿಲ್ ಮುನ್ಸೂಚನೆಗಿಂತ 1.9 ಪ್ರತಿಶತ ಅಂಕಗಳಷ್ಟು ಕುಸಿಯುವ ನಿರೀಕ್ಷೆಯಿದೆ. 2021ರಲ್ಲಿ ಶೇ 5.4ರಷ್ಟು ಬೆಳವಣಿಗೆಯಾಗಲಿದೆ. ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಏರಿಳಿತ ಮುಂದುವರೆಸುತ್ತಿರುವುದರಿಂದ ಕಠೋರ ಆರ್ಥಿಕ ದೃಷ್ಟಿಕೋನ ಸೂಚಿಸುತ್ತದೆ ಎಂದು ಹೇಳಿದೆ.
ಐಎಂಎಫ್‌ನ ಏಪ್ರಿಲ್ ತಿಂಗಳ ವಿಶ್ವ ಆರ್ಥಿಕ ಮುನ್ಸೂಚನೆಯ ಅಂದಾಜನ್ನು ಮತ್ತೆ ಪರಿಷ್ಕರಿಸಿದ್ದೇವೆ. 2020ರಲ್ಲಿ ಆಳವಾದ ಆರ್ಥಿಕ ಹಿಂಜರತವಿದೆ ಮತ್ತು 2021ರ ಚೇತರಿಕೆ ಸಹ ಮಂದಗತಿಯಲ್ಲಿ ಇರಲಿದೆ. ವಿಷಮ ಬಿಕ್ಕಟ್ಟಿನಿಂದ ಎರಡು ವರ್ಷಗಳ ಅವಧಿಯಲ್ಲಿ ಜಾಗತಿಕ ಆರ್ಥಿಕತೆಗೆ 2 ಟ್ರಿಲಿಯನ್ ಡಾಲರ್ಗೂ ಅಧಿಕ ನಷ್ಟವಾಗುವುದನ್ನು ಸೂಚಿಸುತ್ತದೆ ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಏಪ್ರಿಲ್‌ನಿಂದ ಡೌನ್‌ಗ್ರೇಡ್ ಮಾಡುವುದು ಈ ವರ್ಷದ ಮೊದಲಾರ್ಧದಲ್ಲಿನ ನಿರೀಕ್ಷಿತ ಫಲಿತಾಂಶಗಳಿಗಿಂತ ಕೆಟ್ಟದಾಗಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ನಿರಂತರ ಸಾಮಾಜಿಕ ಅಂತರವು ಪೂರೈಕೆ ಸಾಮರ್ಥ್ಯಕ್ಕೆ ಹಾನಿ ಮಾಡಿದೆ ಎಂದು ಗೋಪಿನಾಥ್ ತಿಳಿಸಿದರು.
ಅನೇಕ ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸಾಂಕ್ರಾಮಿಕ ರೋಗ ತೀವ್ರಗೊಳ್ಳುತ್ತಿರುವ ಸಮಯದಲ್ಲಿ ಶೇ 75ಕ್ಕೂ ಹೆಚ್ಚು ದೇಶಗಳ ಚಟುವಟಿಕೆಗಳು ಮತ್ತೆ ತೆರೆದುಕೊಳ್ಳುತ್ತಿವೆ. ಹಲವು ದೇಶಗಳು ಚೇತರಿಸಿಕೊಳ್ಳಲು ಪ್ರಾರಂಭಿಸಿವೆ ಎಂದು ಗೋಪಿನಾಥ್ ಸುದ್ದಿಗಾರರಿಗೆ ತಿಳಿಸಿದರು.