ETV Bharat / business

ಸಂಕಷ್ಟದ ರಾಷ್ಟ್ರಗಳಿಗೆ ಲಸಿಕೆ ಕೊಟ್ಟ ಭಾರತ, ಜಗತ್ತಿಗೆ ತನ್ನ ನೈಜ ಸಾಮರ್ಥ್ಯ ಪರಿಚಯಿಸಿದೆ: IMF ಅರ್ಥಶಾಸ್ತ್ರಜ್ಞೆ

author img

By

Published : Mar 9, 2021, 12:37 PM IST

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಲಸಿಕೆ ನೀತಿ ಕಾರ್ಯಕ್ರಮದಲ್ಲಿ ಅದು ನಿಜವಾಗಿಯೂ ಎದ್ದು ಕಾಣುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ ಎಂದು ಐಎಂಎಫ್​ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ.

Gita Gopinath
Gita Gopinath

ನ್ಯೂಯಾರ್ಕ್​: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೋವಿಡ್​-19 ಲಸಿಕೆಗಳನ್ನು ಹಲವು ರಾಷ್ಟ್ರಗಳಿಗೆ ತಯಾರಿಸಿ ಮತ್ತು ರವಾನಿಸುವುದರಲ್ಲಿ ಅದರ ಲಸಿಕಾ ನೀತಿಯ ಕಾರ್ಯಗಳು ನಿಜವಾಗಿಯೂ ಎದ್ದು ಕಾಣುತ್ತಿದೆ ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಡಾ.ಹನ್ಸಾ ಮೆಹ್ತಾ ಉಪನ್ಯಾಸ ಉದ್ಘಾಟಿಸಿ ಮತನಾಡಿದ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ, ಲಸಿಕೆ ನೀತಿಯ ವಿಷಯದಲ್ಲಿ ಭಾರತ ನಿಜವಾಗಿಯೂ ಎದ್ದು ಕಾಣುತ್ತದೆ ಎನ್ನಲು ನಾನು ಬಯಸುತ್ತೇನೆ. ವಿಶ್ವದ ಲಸಿಕೆಗಳಿಗೆ ಒಂದು ಉತ್ಪಾದನಾ ಕೇಂದ್ರ ಎಲ್ಲಿದೆ ಎಂದು ನೀವು ನೋಡಿದರೆ, ಅದು ಭಾರತವಾಗಿರುತ್ತದೆ ಎಂದರು.

ಗೋಪಿನಾಥ್ ಅವರು ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯ ಶ್ಲಾಘಿಸಿದರು, ಇದು ನಿಯಮಿತವಾಗಿ ವರ್ಷ - ವರ್ಷ ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ಉತ್ಪಾದಿಸುತ್ತದೆ. ಕೋವಿಡ್​-19 ಲಸಿಕೆ ಕೋವಾಕ್ಸಿನ್​ ತಯಾರಿಸಿ ವಿಶ್ವದಾದ್ಯಂತ ವಿತರಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಜಾಗತಿಕ ಏರಿಳಿತದ ಮಧ್ಯೆಯೂ 500 ಅಂಕ ಜಿಗಿದ ಮುಂಬೈ ಷೇರುಪೇಟೆ!

ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಬಾಂಗ್ಲಾದೇಶ, ನೇಪಾಳ ಮತ್ತು ಮ್ಯಾನ್ಮಾರ್ ಸೇರಿದಂತೆ ಹಲವು ನೆರೆಯ ರಾಷ್ಟ್ರಗಳಿಗೆ ಭಾರತವು ಲಸಿಕೆಗಳನ್ನು ನೀಡುತ್ತಿದೆ. ವ್ಯಾಕ್ಸಿನೇಷನ್ ನೀತಿಗಳ ಮೂಲಕ ಜಾಗತಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಜಗತ್ತಿಗೆ ಸಹಾಯ ಮಾಡುವಲ್ಲಿ ಭಾರತವು ಬಹಳ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಕೊಳ್ಳುವ ಸಾಮರ್ಥ್ಯದ ಸಮಾನತೆಯ ನಿಯಮಗಳ ಆಧಾರದ ಮೇಲೆ ವಿಶ್ವ ಜಿಡಿಪಿಯಲ್ಲಿ ಭಾರತವು ಶೇ 7ರಷ್ಟಿದೆ. ಆದ್ದರಿಂದ ನೀವು ದೊಡ್ಡವರಾಗಿದ್ದಾಗ ಭಾರತದಲ್ಲಿ ಏನಾಗುತ್ತದೆ ಎಂಬುದು ವಿಶ್ವದ ಇತರ ದೇಶಗಳಿಗೆ, ಅದರಲ್ಲೂ ವಿಶೇಷವಾಗಿ ಈ ಪ್ರದೇಶದ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಈ ಸಾಂಕ್ರಾಮಿಕ ರೋಗದಿಂದ ಭಾರತವು ತೀವ್ರವಾಗಿ ಹೊಡೆತ ತಿಂದಿದೆ. ಸಾಮಾನ್ಯವಾಗಿ ಶೇ 6ಕ್ಕಿಂತ ಹೆಚ್ಚು ಬೆಳೆಯುವ ರಾಷ್ಟ್ರವು 2020ರಲ್ಲಿ ಶೇ 8ರಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸಿದೆ. ಆದ್ದರಿಂದ ಇದು ತುಂಬಾ ಕಠಿಣವಾಗಿತ್ತು. ಆದರೆ, ದೇಶವು ಮತ್ತೆ ಚೇತರಿಕೆ ಮರಳಿ ಬರುತ್ತಿದೆ, ಚಟುವಟಿಕೆಗಳು ಮರಳುತ್ತಿವೆ ಎಂದು ಭವಿಷ್ಯ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.