ಬೆಂಗಳೂರು: 2020-21 ಆರ್ಥಿಕ ವರ್ಷ ಸಂಪೂರ್ಣ ಕೋವಿಡ್ ಮಹಾಮಾರಿಯ ಅಟ್ಟಹಾಸಕ್ಕೆ ಕರಗಿ ಹೋಯಿತು. ಲಾಕ್‌ಡೌನ್ ಕೊಟ್ಟ ಏಟು ರಾಜ್ಯದ ಬೊಕ್ಕಸವನ್ನೇ ಅಲುಗಾಡಿಸಿದೆ. ಇದೀಗ ಆರ್ಥಿಕ ವರ್ಷ ಕೊನೆಯಾಗಿದ್ದು, ರಾಜ್ಯ ಖಜಾನೆಗೂ ಸಾಕಷ್ಟು ನಷ್ಟವಾಗಿದೆ.
2020-21 ಸಾಲಿನ ಆರ್ಥಿಕ ವರ್ಷ ಕೊನೆಗೊಂಡಿದೆ. ಈ ಆರ್ಥಿಕ ವರ್ಷ ರಾಜ್ಯಕ್ಕೆ ಕೊಟ್ಟ ನಷ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ರಾಜ್ಯದ ಬೊಕ್ಕಸವನ್ನಂತೂ ಕೋವಿಡ್ ಮತ್ತು ಲಾಕ್‌ಡೌನ್ ಹೀರಿ ಬಿಟ್ಟಿತ್ತು. ಒಂದೆಡೆ ತೆರಿಗೆ ಸಂಗ್ರಹದಲ್ಲಿ ಭಾರೀ ಹಿನ್ನಡೆ, ಮತ್ತೊಂದೆಡೆ ಕೇಂದ್ರದಿಂದ ಬಾಕಿ ಇರುವ ಜಿಎಸ್ಟಿ ಪರಿಹಾರ ನಿಧಿ. ಲಾಕ್ಡೌನ್ನಿಂದ ಈ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಹಿಂದೆಂದೂ ಕಂಡರಿಯದ ತೆರಿಗೆ ನಷ್ಟ ಅನುಭವಿಸಿದೆ.
19,892 ಕೋಟಿ ರೂ. ಆದಾಯ ಖೋತ:
ರಾಜ್ಯದ ಬೊಕ್ಕಸಕ್ಕೆ ಹರಿದುಬರುವ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ಮತ್ತು ಮುಂದ್ರಾಕ ಇಲಾಖೆಯಲ್ಲಿ ಆದಾಯದ ಅಭಾವ ಕಂಡುಬಂದಿದೆ.
2019-20 ಸಾಲಿನಲ್ಲಿ ಬರೋಬ್ಬರಿ 1,02,363 ಕೋಟಿ ರೂ. ತೆರಿಗೆ ರೂಪದಲ್ಲಿ ಈ ಇಲಾಖೆಗಳಿಂದ ಬೊಕ್ಕಸ ಸೇರಿತ್ತು. ಅದರೆ 2020-21 ಸಾಲಿನಲ್ಲಿ ಸ್ವಂತ ತೆರಿಗೆ ಸಂಗ್ರಹ 96,558 ಕೋಟಿ ರೂ. ಮಾತ್ರ. ಈ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2020-21ಸಾಲಿನ ಅಂತ್ಯಕ್ಕೆ ರಾಜ್ಯದ ಬೊಕ್ಕಸಕ್ಕೆ ಸುಮಾರು 5,805 ಕೋಟಿ ರೂ. ಸ್ವಂತ ತೆರಿಗೆ ಕಡಿತವಾಗಿದೆ.
ಸ್ವಂತ ತರಿಗೆ, ಜಿಎಸ್ಟಿ ಸೇರಿ ಕೇಂದ್ರದ ಸಹಾಯಧನ ಹಾಗೂ ಕೇಂದ್ರದ ತೆರಿಗೆ ಪಾಲು ಒಳಗೊಂಡು 2020-21 ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯವು 1,55,551 ಕೋಟಿ ರೂ. ಸಂಪನ್ಮೂಲ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020-21 ಸಾಲಿನಲ್ಲಿ ಒಟ್ಟು 19,892 ಕೋಟಿ ರೂ. ಆರ್ಥಿಕ ಕೊರತೆ ಎದುರಿಸಿದೆ ಎಂದು ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ.
ಇದು ಹಂಗಾಮಿ ಅಂಕಿಅಂಶ ಆಗಿದ್ದು, ಈ ಅಂಕಿಅಂಶದಲ್ಲಿ ಕೆಲವು ಏರು ಪೇರು ಆಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2020-21ಸಾಲಿನ ಆರ್ಥಿಕ ನಷ್ಟ:
ವಾಣಿಜ್ಯ ತೆರಿಗೆ:
2019-20- 59,784 ಕೋಟಿ ರೂ.
2020-21- 55,099 ಕೋಟಿ ರೂ.
ಕೊರತೆ- 4,685 ಕೋಟಿ ರೂ.
ಅಬಕಾರಿ ತೆರಿಗೆ:
2019-20- 21,584 ಕೋಟಿ ರೂ.
2020-21- 23,269 ಕೋಟಿ ರೂ.
ಹೆಚ್ಚಳ- 1,685ಕೋಟಿ ರೂ.
ವಾಹನ ತೆರಿಗೆ:
2019-20- 6,763 ಕೋಟಿ ರೂ.
2020-21- 5,536 ಕೋಟಿ ರೂ.
ಕೊರತೆ- 1,227 ಕೋಟಿ ರೂ.
ಮುದ್ರಾಂಕ ಶುಲ್ಕ:
2019-20- 11,308 ಕೋಟಿ ರೂ.
2020-21- 10,379 ಕೋಟಿ ರೂ.
ಕೊರತೆ- 929 ಕೋಟಿ ರೂ.
ಇತರೆ ತೆರಿಗೆ:
2019-20- 2,924 ಕೋಟಿ ರೂ.
2020-21- 2,275 ಕೋಟಿ ರೂ.
ಕೊರತೆ- 649 ಕೋಟಿ ರೂ.
ತೆರಿಗೆಯೇತರ ಆದಾಯ:
2019-20- 7,681 ಕೋಟಿ ರೂ.
2020-21- 7,268 ಕೋಟಿ ರೂ.
ಕೊರತೆ- 413 ಕೋಟಿ ರೂ.
ಕೇಂದ್ರದ ತೆರಿಗೆ ಪಾಲು:
2019-20- 30,919 ಕೋಟಿ ರೂ.
2020-21- 21,694 ಕೋಟಿ ರೂ.
ಕೊರತೆ-9,225 ಕೋಟಿ ರೂ.
ಕೇಂದ್ರ ಸರ್ಕಾರದ ಸಹಾಯಧನ:
2019-20- 34,480 ಕೋಟಿ ರೂ.
2020-21- 30,031 ಕೋಟಿ ರೂ.
ಕೊರತೆ- 4,449 ಕೋಟಿ ರೂ.
ಒಟ್ಟು ಸಂಪನ್ಮೂಲ ಕೊರತೆ:
2019-20- 1,75,443 ಕೋಟಿ ರೂ. ಸಂಗ್ರಹ
2020-21- 1,55,551 ಕೋಟಿ ರೂ. ಸಂಗ್ರಹ
ಒಟ್ಟು ಕೊರತೆ- 19,892 ಕೋಟಿ ರೂ.